ಭೂಮಿಯೂ ಉಸಿರಾಡುತ್ತದೆ ! ಇಲ್ಲಿದೆ ನೋಡಿ ಈ ಅದ್ಭುತದ ವಿಡಿಯೋ !

Earth Viral Video :ಇಲ್ಲಿ ನಿರ್ದಿಷ್ಟ ಭೂಪ್ರದೇಶ ಮಾತ್ರ ಮೇಲಕ್ಕೆ ಏರುವುದು ಮತ್ತು ಸಾಮಾನ್ಯ ಸ್ಥಿತಿಗೆ ಮರಳುವುದನ್ನು ಕೂಡಾ ಗಮನಿಸಬಹುದು. ಇದು ಸಾಮಾನ್ಯ ಉಸಿರಾಟ ಪ್ರಕ್ರಿಯೆಯಂತೆ ಕಂಡು ಬರುತ್ತದೆ. 

Written by - Ranjitha R K | Last Updated : Apr 10, 2023, 12:55 PM IST
  • ಭೂಮಿಯ ಮೇಲೆ ಎಲ್ಲಾ ಜೀವಿಗಳು ಉಸಿರಾಡುತ್ತವೆ
  • ಆದರೆ ಭೂಮಿ ಉಸಿರಾಡುವ ಬಗ್ಗೆ ಎಲ್ಲಾದರೂ ಕೇಳಿದ್ದೀರಾ ?
  • ಇಲ್ಲಿದೆ ನೋಡಿ ಶಾಕಿಂಗ್ ವಿಡಿಯೋ
ಭೂಮಿಯೂ ಉಸಿರಾಡುತ್ತದೆ !  ಇಲ್ಲಿದೆ ನೋಡಿ ಈ ಅದ್ಭುತದ ವಿಡಿಯೋ ! title=

Earth Viral Video : ಭೂಮಿಯು ಉಸಿರಾಡುವ ಬಗ್ಗೆ ಎಲ್ಲಾದರೂ ಕೇಳಿದ್ದೀರಾ ? ಅಥವಾ ಓದಿದ್ದೀರಾ? ಮನುಷ್ಯರು ಮತ್ತು ಪ್ರಾಣಿಗಳು ಸೇರಿದಂತೆ ಪ್ರಪಂಚದ ಎಲ್ಲಾ ಜೀವಿಗಳು ಉಸಿರಾಡುತ್ತವೆ ಎನ್ನುವುದು ಸರ್ವರಿಗೂ ತಿಳಿದಿರುವ ಸತ್ಯ. ಇದನ್ನು ನಾವು ನಮ್ಮ ಕಣ್ಣಿನಿಂದಲೇ ನೋಡಿದ್ದೇವೆ. ಆದರೆ ಭೂಮಿಯು ಉಸಿರಾಡುವುದನ್ನು ಎಂದಾದರೂ ನೋಡಿದ್ದೀರಾ? ಭೂಮಿಯ ಉಸಿರಾಟದ ಪ್ರಕ್ರಿಯೆಯ ಮಾತು ಕೇಳುವಾಗಲೇ ಆಶ್ಚರ್ಯವಾಗುತ್ತದೆ. ಆದರೆ ಅಂಥಹದೊಂದು ವಿಡಿಯೋ ಇದೀಗ ಹರಿದಾಡುತ್ತಿದೆ. 

ಈ ಪ್ರಪಂಚದಲ್ಲಿ ನಾನಾ ರೀತಿಯ ವಿಸ್ಮಯಗಳು ನಡೆಯುತ್ತವೆ. ಪ್ರತಿ ಯೊಂದು ವಿಸ್ಮಯಕ್ಕೂ ನಾವು ಸಾಕ್ಷಿಯಾಗಲು ಸಾಧ್ಯವಿಲ್ಲ. ಇವುಗಳಲ್ಲಿ ಹೆಚ್ಚಿನ ಘಟನೆಗಳನ್ನು ವಿಡಿಯೋ ಮೂಲಕ ನೋಡುವುದು ಸಾಧ್ಯವಾಗುತ್ತದೆ. ಅದೇ ರೀತಿ ಭೂಮಿ ಉಸಿರಾಡುತ್ತಿರುವ ವಿಡಿಯೋ ಕೂಡಾ ಅಂತರ್ಜಾಲದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಸುತ್ತಲೂ ಹಸಿರು ಕಾನನದ ದೃಶ್ಯವನ್ನು ಕಾಣಬಹುದು. ಇಲ್ಲಿ ನಿರ್ದಿಷ್ಟ ಭೂಪ್ರದೇಶ ಮಾತ್ರ ಮೇಲಕ್ಕೆ ಏರುವುದು ಮತ್ತು ಸಾಮಾನ್ಯ ಸ್ಥಿತಿಗೆ ಮರಳುವುದನ್ನು ಕೂಡಾ ಗಮನಿಸಬಹುದು. ಇದು ಸಾಮಾನ್ಯ ಉಸಿರಾಟ ಪ್ರಕ್ರಿಯೆಯಂತೆ ಕಂಡು ಬರುತ್ತದೆ. 

ಇದನ್ನೂ ಓದಿ :  ಕೋಳಿ ಆಸೆಗೆ ಬಂದು ಖೆಡ್ಡಾಗೆ ಬಿದ್ದ ಹೆಬ್ಬಾವು! ಇಲ್ಲಿದೆ ವಿಡಿಯೋ

ಬೆರಗುಗೊಳಿಸುವ ವಿಡಿಯೋ : 
ಈ ವಿಡಿಯೋ ನೋಡುಗರನ್ನು ಬೆರಗುಗೊಳಿಸುತ್ತದೆ. ಮೊದಲ ಬಾರಿಗೆ ಈ ವೀಡಿಯೊವನ್ನು ನೋಡಿದಾಗ ಭೂಮಿಯು ಉಸಿರಾಡುತ್ತದೆಯೇ? ಎನ್ನುವ ಯೋಚನೆಗೆ ನಮ್ಮನ್ನು ಖಂಡಿತವಾಗಿಯೂ ತಳ್ಳುತ್ತದೆ. ಆದರೆ ಅದರಲ್ಲೊಂದು ಟ್ವಿಸ್ಟ್ ಇದೆ. ಭೂಮಿ ಉಸಿರಾಡುತ್ತಿದೆ ಎಂದು ನೀವು ಕೂಡಾ ಭಾವಿಸುತ್ತಿದ್ದರೆ, ಈ ವಿಡಿಯೋ ಕೆಳಗಿರುವ ಕಮೆಂಟ್ ಬಾಕ್ಸ್ ಅನ್ನು ಒಮ್ಮೆ ನೋಡಿ. ಸತ್ಯ ಗೊತ್ತಾಗುತ್ತದೆ. 

 

 

ಇದನ್ನೂ ಓದಿ :   Viral Video : ಮದುವೆ ಮಂಟಪದಲ್ಲಿ ಸ್ನೇಹಿತ ಈ ರೀತಿ ನಡೆದುಕೊಂಡರೂ ಮೂಕನಾದ ವರ! ಪೇಚಿಗೆ ಸಿಲುಕಿದ ವಧು

ಈ ವಿಡಿಯೋವನ್ನು ಕೆನಡಾದ ಕ್ವಿಬೆಕ್‌ನಲ್ಲಿ ತೆಗೆಯಲಾಗಿದೆ. ಇಲ್ಲಿ ಭೂಮಿ ಉಸಿರಾಡುತ್ತಿಲ್ಲ. ಬದಲಿಗೆ ಬೀಸುತ್ತಿರುವ ಬಿರು ಗಾಳಿಗೆ ಮರಗಳು  ಉರುಳುತ್ತಿವೆ. ಮರದ ಬೇರುಗಳು ಹೊರ ಬರುತ್ತಿವೆ. ಈ ವಿಡಿಯೋವನ್ನು  ಅಮೇಜಿಂಗ್ ನೇಚರ್ ಎಂಬ  ಟ್ವಿಟ್ಟರ್ ಖಾತೆಯಲ್ಲಿ  ಶೇರ್ ಮಾಡಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News