Odisha Viral News: ಬೈಕ್ ಖರೀದಿಸಲು ತಮ್ಮ 9 ದಿನದ ಕಂದಮ್ಮನನ್ನೇ ಪೋಷಕರು ಮಾರಾಟ ಮಾಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಒಡಿಶಾದ ಬಾಲಸೋರ್‌ನಲ್ಲಿ ಈ ಘಟನೆ ನಡೆದಿದ್ದು, ದಂಪತಿ ಮಗು ಮಾರಾಟ ಮಾಡಿರುವ ವಿಚಾರವನ್ನ ತಿಳಿದು ಗ್ರಾಮಸ್ಥರೇ ದಂಗಾಗಿದ್ದಾರೆ.


COMMERCIAL BREAK
SCROLL TO CONTINUE READING

ಒಡಿಶಾದ ಬಾಲಸೋರ್‌ನ ಹದಮೌಡಾ ಗ್ರಾಮದ ಧರ್ಮು ಬೆಹೆರಾ ಮತ್ತು ಶಾಂತಿಲತಾ ದಂಪತಿಗೆ ಡಿಸೆಂಬರ್ 19ರಂದು ಗಂಡು ಮಗು ಜನಿಸಿತ್ತು. ಕಡು ಬಡತನದಲ್ಲಿರುವ ತಮ್ಮ ಕುಟುಂಬಕ್ಕೆ ಮಗುವನ್ನು ಸಾಕಲು ಕಷ್ಟವಾಗುತ್ತದೆ ಅಂತಾ ಚಿಂತಿತರಾಗಿದ್ದರು. ಹೀಗಾಗಿ 9 ದಿನದ ಮಗುವನ್ನು ನೆರೆಯ ಮಯೂರ್‌ಭಂಜ್ ಜಿಲ್ಲೆಯ ಮಕ್ಕಳಿಲ್ಲದ ದಂಪತಿಗೆ 60 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. 


ಮಗುವನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಈ ದಂಪತಿ ಬೈಕ್ ಖರೀಸಿದ್ದಾರೆ ಎನ್ನಲಾಗಿದ್ದು, ಇದು ಸ್ಥಳೀಯರ ಅನುಮಾನಕ್ಕೆ ಕಾರಣವಾಗಿತ್ತು. ಶಾಂತಿಲತಾ ಗರ್ಭಿಣಿಯಾಗಿದ್ದಾಳೆ ಅನ್ನೋ ವಿಚಾರವು ಸ್ಥಳೀಯರಿಗೆ ಮೊದಲೇ ಗೊತ್ತಿತ್ತು. ಕಳೆದ ಡಿಸೆಂಬರ್ 19ರಂದು ಬರಿಪಾದದ ಪಂಡಿತ್ ರಘುನಾಥ್ ಮುರ್ಮು ವೈದ್ಯಕೀಯ ಆಸ್ಪತ್ರೆಗೆ ದಾಖಲಾಗಿ ಆಕೆ ಗಂಡು ಮಗುವಿಗೆ ಜನ್ಮ ನೀಡಿರುವ ವಿಚಾರವೂ ತಿಳಿದಿತ್ತು.


ಇದನ್ನೂ ಓದಿ: 100ಕ್ಕೂ ಹೆಚ್ಚು S*X ವರ್ಕರ್ಸ್‌, ದಿನ 12 ಲಕ್ಷಕ್ಕೂ ಹೆಚ್ಚು ಪುರುಷರಿಗೆ ಸೇವೆ, ಹಗಲು ರಾತ್ರಿ ಅದೇ ಕೆಲಸ..! ಈ "ಸ್ವರ್ಗ" ಇರೋದು ಎಲ್ಲಿ..?


ಇದಾದ ಮೂರೇ ದಿನಕ್ಕೆ ಶಾಂತಿಲತಾ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದರಂತೆ. ಆದರೆ ನೆರೆಹೊರೆಯವರು ಮಗುವನ್ನು ನೋಡಲು ಹೋದಾಗ ಅಲ್ಲಿ ಆ ಮಗು ಕಾಣಲಿಲ್ಲವಂತೆ. ಮಗುವಿನ ಬಗ್ಗೆ ವಿಚಾರಿಸಿದಾಗ ದಂಪತಿ ಬೇರೆ ಬೇರೆ ಕಾರಣಗಳನ್ನ ನೀಡಿದ್ದಾರಂತೆ. ಇದಾದ ಬಳಿಕ ದಂಪತಿ ಬೈಕ್ ಖರೀದಿಸಿದ್ದರಂತೆ.


ಕಡುಬಡತನದಲ್ಲಿರುವ ಈ ದಂಪತಿಗೆ ಬೈಕ್ ತೆಗೆದುಕೊಳ್ಳುವ ಸಾಮರ್ಥ್ಯ ಇರಲಿಲ್ಲ. ಹೀಗಿರುವಾಗ ಇವರ ಬಳಿ ಬೈಕ್ ಎಲ್ಲಿಂದ ಬಂತು? ಅಂತಾ ಅನುಮಾನಗೊಂಡ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ದೂರಿನ ಆಧಾರದ ಮೇಲೆ ಪೊಲೀಸರು ದಂಪತಿ ಬಳಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ದಂಪತಿ ಮಗುವನ್ನು 60 ಸಾವಿರಕ್ಕೆ ಮಾರಾಟ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.


ʼಮಗು ಸಾಕಲು ನಾವು ಆರ್ಥಿಕವಾಗಿ ಸಬಲರಾಗಿಲ್ಲದ ಕಾರಣ ನೆರೆಯ ಮಯೂರ್‌ಭಂಜ್ ಜಿಲ್ಲೆಯ ಮಕ್ಕಳಿಲ್ಲದ ದಂಪತಿಗೆ ಮಧ್ಯವರ್ತಿಯ ಮೂಲಕ ನೀಡಿರುವುದಾಗಿ ದಂಪತಿ ಹೇಳಿಕೊಂಡಿದ್ದಾರೆ. ಆದರೆ ನಾವು ಮಗುವನ್ನು ಹಣಕ್ಕೆ ಮಾರಾಟ ಮಾಡಿಲ್ಲ, ಹಾಗೆಯೇ ನೀಡಿದ್ದೇವೆʼ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸರು ಸೇರಿ ಮಗುವನ್ನು ರಕ್ಷಣೆ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: ಈ ಹಾವು ತಿಂದರೆ ಲೈಂಗಿಕ ಶಕ್ತಿ ಅನಿಯಮಿತ, ಮನೆಯಲ್ಲಿಟ್ಟರೆ ಹಣದ ಹೊಳೆ..! ಅಸಲಿಗೆ ಇದು ನಿಜವೇ..? ಇಲ್ಲಿದೆ ಸತ್ಯ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.