Lovers Video : ಪ್ರೀತಿಯಲ್ಲಿ ಎಲ್ಲವೂ ಸುಂದರ ಎಂದು ಹೇಳಲಾಗುತ್ತದೆ. ಪ್ರೀತಿ ನಿಜವಾಗಿದ್ದರೆ, ಪ್ರಪಂಚದ ಜನರು ಏನಂದ್ರೂ ಪರವಾಗಿಲ್ಲ ಎಂಬ ಗುಂಗಲ್ಲಿ ಇರುತ್ತಾರೆ ಪ್ರೇಮಿಗಳು. ಒಬ್ಬ ವ್ಯಕ್ತಿಯು ಪ್ರೀತಿಯಲ್ಲಿ ಬಿದ್ದರೆ, ಅವನು ವಯಸ್ಸು ಮತ್ತು ಜಾತಿಯನ್ನು ನೋಡುವುದಿಲ್ಲ, ಬದಲಿಗೆ ಅವನು ತನ್ನ ಹೃದಯವನ್ನು ತನ್ನ ಸಂಗಾತಿಗೆ ಒಪ್ಪಿಸುತ್ತಾನೆ. ಪ್ರೇಮಿಗಳ ವಯೋಮಾನದಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೂ ಒಬ್ಬರೊನ್ನಬ್ಬರು ಒಪ್ಪಿ ಮದುವೆಯಾಗುತ್ತಾರೆ. ಅಂತಹ ವಿಡಿಯೋಗಳನ್ನು ನೀವು ಸಾಕಷ್ಟು ನೋಡಿರಬೇಕು. ಇದೀಗ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದರೆ ನೀವು ಅಚ್ಚರಿಪಡುವಿರಿ. ಒಬ್ಬ ಹುಡುಗ ತನಗಿಂತ 31 ವರ್ಷ ಹಿರಿಯ ಮಹಿಳೆಯನ್ನು ಮದುವೆಯಾಗಿದ್ದಾನೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ : Trending Video: ಹಾವಿನ ಜೊತೆ ಮಗುವಿನ ಆಟ, ಮೈ ನಡುಗುವಂಥ ವಿಡಿಯೋ ವೈರಲ್‌


ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಮದುವೆಯ ವೇದಿಕೆಯ ಮೇಲೆ 21 ವರ್ಷದ ಹುಡುಗ ನಿಂತಿರುವುದನ್ನು ನೀವು ನೋಡುತ್ತೀರಿ. ಅವನ ಜೊತೆ ಆಂಟಿಯೊಬ್ಬರು ಇರುವುದನ್ನು ನೋಡಬಹುದು. ಇಬ್ಬರೂ ಕೊರಳಿಗೆ ಹಾರ ಹಾಕಿಕೊಂಡಿದ್ದಾರೆ. ಇಬ್ಬರೂ ಮದುವೆಯಾಗಿದ್ದೀರಾ ಎಂದು ಯಾರೋ ಹುಡುಗನನ್ನು ಕೇಳಿದರು. ಆಗ ಹುಡುಗ ಹೌದು ಎಂದು ಉತ್ತರಿಸಿದ. ಆಗ ಆ ವ್ಯಕ್ತಿ ಹುಡುಗನಿಗೆ ಅವನ ವಯಸ್ಸು ಕೇಳಿದಾಗ ಅವನಿಗೆ 21 ವರ್ಷ ಮತ್ತು ಮದುವೆಯಾದ ಮಹಿಳೆಗೆ 52 ವರ್ಷ ಎಂದು ಹೇಳಿದ. 



ವಿಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ನೀವು ಈ ಮದುವೆಯಿಂದ ಸಂತೋಷವಾಗಿದ್ದೀರಾ ಎಂದು ಕೇಳಿದಾಗ ಮಹಿಳೆ ಹೌದು, ನಾವಿಬ್ಬರೂ ಸಂತೋಷವಾಗಿದ್ದೇವೆ ಎಂದರು. ನಾನು ನನಗಿಂತ ಹೆಚ್ಚಾಗಿ ಅವನನ್ನು ನಂಬುತ್ತೇನೆ. ಏಕೆಂದರೆ ನಾನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. "ಪ್ರೀತಿಗೆ ವಯಸ್ಸಿಲ್ಲ, ಹೃದಯ ಮಾತ್ರ ಕಾಣುತ್ತದೆ. ಮನುಷ್ಯ ಒಳ್ಳೆಯವನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ" ಎಂದು ಹುಡುಗ ಹೇಳಿದ್ದಾನೆ.


ಇದನ್ನೂ ಓದಿ : Viral Video : ದೇವಾಲಯದ ಒಳಗೆ ನುಗ್ಗಿದ ಸ್ಕೂಟಿ! ದೇವರೂ ಬೆಚ್ಚಿಬೀಳುವಂಥ ದೃಶ್ಯ ವೈರಲ್‌


ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಕೂಡಲೇ ಅದು ವೈರಲ್ ಆಗಿದೆ. ಇದನ್ನು ಅಮಿತ್ ಚತುರ್ವೇದಿ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದುವರೆಗೆ 22 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಆದರೆ, ಈ ವಿಡಿಯೋ ಎಲ್ಲಿಂದ ಬಂದಿದೆ ಎಂಬುದಕ್ಕೆ ಈ ವಿಡಿಯೋದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.