Viral Video : ದೇವಾಲಯದ ಒಳಗೆ ನುಗ್ಗಿದ ಸ್ಕೂಟಿ! ದೇವರೂ ಬೆಚ್ಚಿಬೀಳುವಂಥ ದೃಶ್ಯ ವೈರಲ್‌

Girl Scooty Accident: ಸ್ಕೂಟರ್‌ ರೈಡ್‌ ಮಾಡುವ ಹುಡುಗಿಯರು ಮಾಡುವ ಯಡವಟ್ಟುಗಳ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತವೆ. ಇಂತಹದ್ದೆ ಒಂದು ವಿಡಿಯೋ ವೈರಲ್‌ ಆಗಿದ್ದು, ಒಂದು ಹುಡುಗಿ ಆಕಸ್ಮಿಕವಾಗಿ ತನ್ನ ಸ್ಕೂಟರ್ ಅನ್ನು ದೇವಾಲಯದೊಳಗೆ ನುಗ್ಗಿಸುವುದನ್ನು ನೋಡಬಹುದು. 

Written by - Chetana Devarmani | Last Updated : Dec 9, 2022, 02:57 PM IST
  • ದೇವಾಲಯದ ಒಳಗೆ ನುಗ್ಗಿದ ಸ್ಕೂಟಿ
  • ದೇವರೂ ಬೆಚ್ಚಿಬೀಳುವ ದೃಶ್ಯ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Viral Video : ದೇವಾಲಯದ ಒಳಗೆ ನುಗ್ಗಿದ ಸ್ಕೂಟಿ! ದೇವರೂ ಬೆಚ್ಚಿಬೀಳುವಂಥ ದೃಶ್ಯ ವೈರಲ್‌
ದೇವಾಲಯದ ಒಳಗೆ ನುಗ್ಗಿದ ಸ್ಕೂಟಿ

Girl Scooty Accident: ಸ್ಕೂಟರ್‌ ರೈಡ್‌ ಮಾಡುವ ಹುಡುಗಿಯರು ಮಾಡುವ ಯಡವಟ್ಟುಗಳ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತವೆ. ಇವುಗಳನ್ನು ನೋಡಿದ್ರೆ ನಗು ತಡೆಯೋಕೆ ಆಗಲ್ಲ. ಉದಾಹರಣೆಗೆ, ಯಾರೋ ತನ್ನ ಸ್ಥಳದಲ್ಲಿ ನಿಂತಿರುವಾಗ ಬಂದು ಅವರಿಗೆ ಗಾಡಿ ಗುದ್ದುವುದು, ಆಯತಪ್ಪಿ ಚರಂಡಿಗೆ ಬೀಳುವುದು ಹೀಗೆ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗುತ್ತಿವೆ. ಅದು ಹೇಗೆ ಸಂಭವಿಸಿತು ಎಂದು ನೀವು ಆಶ್ಚರ್ಯ ಪಡುತ್ತೀರಿ. ಇದೀಗ ಒಂದು ಹಳೆಯ ವಿಡಿಯೋ ಮತ್ತೆ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ :  Viral Video : ಹಾವಿನ ಜೊತೆ ಹುಚ್ಚಾಟ ತಲೆಕೆಟ್ಟು ಸರ್ಪ ಕಚ್ಚಿದ್ದೆಲ್ಲಿ ನೋಡಿ..

ಇದರಲ್ಲಿ ಒಂದು ಹುಡುಗಿ ಆಕಸ್ಮಿಕವಾಗಿ ತನ್ನ ಸ್ಕೂಟರ್ ಅನ್ನು ದೇವಾಲಯದೊಳಗೆ ನುಗ್ಗಿಸುವುದನ್ನು ನೋಡಬಹುದು. ಆದರೆ ಯಾವುದೇ ಗಂಭೀರವಾದ ಗಾಯ ಆಗಿಲ್ಲ. ಆದರೆ ದೇವಾಲಯದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ರೆಕಾರ್ಡ್‌ ಆಗಿದ್ದು, ನೋಡುಗರಿಗೆ ನಗು ತಡೆಯಲಾರದಷ್ಟು ಫನ್ನಿಯಾಗಿದೆ.

 

 

ಘಟನೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ. ಮೊದಲನೆಯದಾಗಿ, ಸ್ಕೂಟರ್‌ ಮೇಲೆ ಹುಡುಗಿ ನಿರ್ಲಕ್ಷ್ಯದಿಂದ ಕುಳಿತುಕೊಳ್ಳುವುದನ್ನು ಕಾಣಬಹುದು. ಸ್ಕೂಟಿ ಸ್ಟಾರ್ಟ್‌ ಮಾಡಲು ಅವಳು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾಳೆಂದು ತೋರುತ್ತದೆ. ಆದರೆ ಸ್ಕೂಟಿ ಸ್ಟಾರ್ಟ್‌ ಆದ ತಕ್ಷಣ, ಅವಳ ನಿಯಂತ್ರಣಕ್ಕೆ ಬರುವುದಿಲ್ಲ. ಆಗ ಹುಡುಗಿ ಸ್ಕೂಟಿಯೊಂದಿಗೆ ಮುಂಭಾಗದಲ್ಲಿರುವ ದೇವಾಲಯದ ಮೆಟ್ಟಿಲುಗಳ ಮೇಲೆ ಹೋಗಿ ಒಳಗೆ ನುಗ್ಗಿ ಮುಂದೆ ನಂದಿಯ ವಿಗ್ರಹಕ್ಕೆ ಗುದ್ದಿ ಕೆಳಗೆ ಬೀಳುತ್ತಾಳೆ. ಹುಡುಗಿ ದೇವಾಲಯದ ವಿಗ್ರಹದ ಮುಂದೆ ಬೀಳುತ್ತಾಳೆ ಮತ್ತು ಅವಳು ತಲೆಗೆ ಕೊಂಚ ಪೆಟ್ಟಾಗಿರಬಹುದು. ಈ ಘಟನೆ ದೇವಾಲಯದೊಳಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ :  Viral Video: ಪ್ಲೀಸ್‌ ನನ್ನ ಪ್ರೀತಿಸು! ನಡುಬೀದಿಯಲ್ಲಿ ಯುವತಿ ಕಾಲು ಹಿಡಿದು ಬೇಡಿದ ಹುಡುಗ

ಈ ವಿಡಿಯೋವನ್ನು @JaikyYadav16 ಹೆಸರಿನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಒಂದ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಸಿಸಿಟಿವಿ ದೃಶ್ಯದ ಪ್ರಕಾರ, ಈ ಘಟನೆ ಮಾರ್ಚ್ 3, 2020 ಆಗಿದೆ. ಸಂಜೆ ಏಳು ಗಂಟೆಗೆ ಅಪಘಾತ ಸಂಭವಿಸಿದೆ. ಈ ವಿಡಿಯೋಗೆ ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಹಳೆಯ ವಿಡಿಯೋ ಎಲ್ಲೆಡೆ ಸಖತ್‌ ವೈರಲ್‌ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News