Viral Video: ಇಂದಿನ ಸೋಷಿಯಲ್‌ ಮೀಡಿಯಾ ಜಮಾನದಲ್ಲಿ ಪ್ರತಿದಿನ ಹಲವಾರು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ಸಖತ್‌ ಮನರಂಜನೆ ನೀಡಿದರೆ, ಇನ್ನೂ ಕೆಲವು ಅಸಹ್ಯ ಹುಟ್ಟಿಸುತ್ತವೆ. ಯೂಟ್ಯೂಬ್‌, ಫೇಸ್‌ಬುಕ್‌, ಇಸ್ಟಾಗ್ರಾಮ್‌ ಸೇರಿದಂತೆ ಎಲ್ಲಾ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿಯೂ ಅಶ್ಲೀಲತೆ ಎದ್ದು ಕಾಣುವಂತೆ ರೀಲ್ಸ್‌ಗಳನ್ನು ಮಾಡಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿಯೇ ಜೋಡಿಗಳು ರೋಮ್ಯಾನ್ಸ್‌ ಮಾಡುತ್ತವೆ. 


COMMERCIAL BREAK
SCROLL TO CONTINUE READING

ತಮ್ಮ ಸುತ್ತಮುತ್ತ ಜನರು ಇರುವುದನ್ನೇ ಮರೆತು ಪರಸ್ಪರ ಚುಂಬಿಸುತ್ತಾ ರೋಮ್ಯಾನ್ಸ್‌ ಮಾಡುತ್ತಾ ಮೈಮರೆಯುತ್ತಾರೆ. ಬೈಕ್‌ ಮತ್ತು ಕಾರುಗಳಲ್ಲಿಯೂ ಕೆಲವರು ಅಸಭ್ಯವಾಗಿ ವರ್ತಿಸುತ್ತಾ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಾರೆ. ತಾವು ಅಮರ ಪ್ರೇಮಿಗಳು ಅಂತಾ ಪ್ರೂವ್‌ ಮಾಡಲು ಇನ್ನಿಲ್ಲದ ಸರ್ಕಸ್‌ ಮಾಡುತ್ತಾರೆ. ಯುವ ಜೋಡಿಗಳಂತೂ ನಾಚಿಗೆ ಬಿಟ್ಟು ಅಸಭ್ಯವಾಗಿ ವರ್ತಿಸುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 


ಇದನ್ನೂ ಓದಿ: ಕೇರಳ ದುರಂತ ಬೆನ್ನಲ್ಲೇ ಹಿಮಾಚಲಕ್ಕೂ ಜಲಕಂಟಕ



ಈ ವೈರಲ್‌ ವಿಡಿಯೋದಲ್ಲಿ ರಸ್ತೆಯುದ್ದಕ್ಕೂ ಲಿಪ್‌ಕಿಸ್​​ ಮಾಡುತ್ತಾ ಯುವ ಜೋಡಿಯೊಂದು ಬೈಕಿನಲ್ಲಿ ಜಾಲಿ ರೈಡ್​​​ ಮಾಡಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. raja_i_n_s_t_5464 ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಯುವಕನೊಬ್ಬ ಬೈಕ್​ ಓಡಿಸುತ್ತಿದ್ದಾನೆ. ಆತನ ಹಿಂಭಾಗದಲ್ಲಿ ಕುಳಿತುಕೊಂಡಿದ್ದ ಯುವಕ ಮತ್ತು ಯುವತಿ ಪರಸ್ಪರ ತುಟಿಗೆ ಮುತ್ತಿಡುತ್ತಾ ರೈಡ್​​ ಎಂಜಾಯ್​​ ಮಾಡಿದ್ದಾರೆ. ಯಾವುದೇ ನಾಚಿಕೆ ಇಲ್ಲದೆ ಪರಸ್ಪರ ಚುಂಬಿಸುತ್ತಾ ಇಬ್ಬರೂ ಖುಷಿಯಲ್ಲಿ ತೇಲಾಡಿದ್ದಾರೆ. 


ಶೇರ್‌ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಲು ಈ ಜೋಡಿ ಹಲವಾರು ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವುದು ಗೊತ್ತಾಗಿದೆ. ಇವರಿಬ್ಬರ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 



ಇದನ್ನೂ ಓದಿ: ದೇವರನಾಡಲ್ಲಿ ಭೀಕರ ಭೂ ಕುಸಿತ ದುರಂತ


ರಸ್ತೆಯುದ್ದಕ್ಕೂ ನಾಚಿಬಿಟ್ಟು ಲಿಪ್‌ಕಿಸ್‌ ಮಾಡುತ್ತಾ ರೋಮ್ಯಾನ್ಸ್‌ ಮಾಡಿರುವ ಜೋಡಿಗೆ ನೆಟಿಜನ್ಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘಿಸಿರುವುದರ ಜೊತೆಗೆ ಅಸಭ್ಯವಾಗಿ ವರ್ತಿಸಿರುವ ಈ ಜೋಡಿಗೆ ಪೊಲೀಸರು ತಕ್ಕಪಾಠ ಕಲಿಸಬೇಕು. ಕಾನೂನು ಕ್ರಮದ ಮೂಲಕ ಅವರಿಗೆ ಬಿಸಿ ಮುಟ್ಟಿಸಬೇಕು ಎಂದು ಅನೇಕರು ಕಾಮೆಂಟ್‌ ಮೂಲಕ ಆಗ್ರಹಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.