Insect resembling Hitler face: ಗದಗ ಜಿಲ್ಲೆಯ ಭೈರಾಪುರ ಬೆಟ್ಟದಲ್ಲಿ ಮನುಷ್ಯನ ಮುಖ ಹೋಲುವ ಹಿಟ್ಲರ್ ಕೀಟವೊಂದು ಪತ್ತೆಯಾಗಿದೆ. ಪೆಂಟ್ಯಾಟೊಮಿಡೆ ಜಾತಿಗೆ ಸೇರಿದ ಮಾನವ ಮುಖ ಹೋಲುವ ಅಪರೂಪದ ಕೀಟ ಇದಾಗಿದ್ದು ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಭೈರಾಪೂರ ಬೆಟ್ಟದಲ್ಲಿ ಪತ್ತೆಯಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದೇವಾಲಯದ ಪೂಜೆ ಸಮಯಕ್ಕೆ ಬಂದು ಪ್ರಸಾದ ಸ್ವೀಕರಿಸೋ ಕೋತಿ!


ಈ ಕೀಟದ ಮೈ ಬಣ್ಣ ಹಳದಿಯಾಗಿದ್ದು, ಸುಂದರವಾಗಿದೆ. ಈ ಕೀಟವನ್ನು ವೈಜ್ಞಾನಿಕವಾಗಿ “ಕೆಟಾಕ್ಯಾಂಥಸ್ ಇನ್‌ಕಾರ್ನೇಟಸ್”ಎಂದು ಕರೆಯುತ್ತಾರೆ. ಸಾಮಾನ್ಯ ಭಾಷೆಯಲ್ಲಿ ಹಿಟ್ಲರ್ ಕೀಟ ಅಂತಾ ಕರೆಯುತ್ತಾರೆ. ಇಕ್ಸೋರಾ, ಗೋಡಂಬಿ ಗಿಡ, ಗುಲ್‌ಮೋಹರ್ ಮತ್ತು ಶಿವನಿ ಮರಗಳು ಈ ಕೀಟಗಳಿಗೆ ಆಥಿತೇಯ ಸಸ್ಯಗಳಾಗಿವೆ. ಆಥಿತೇಯ ಸಸ್ಯಗಳ ಎಲೆಗಳ ಅಡಿಯಲ್ಲಿ ಹೆಣ್ಣು ಕೀಟವು 150ರಿಂದ 200 ಮೊಟ್ಟೆಗಳನ್ನಿಡುತ್ತದೆ. ಹಿಟ್ಲರ್ ಕೀಟವು 7 ರಿಂದ 9 ತಿಂಗಳ ಜೀವಿತಾ ಅವಧಿ ಹೊಂದಿದ್ದು ಇವು ತಮ್ಮ ಜೀವನ ಚಕ್ರದಲ್ಲಿ ಎರಡು ಪೀಳಿಗೆಗಳನ್ನು ಉತ್ಪಾದಿಸುತ್ತವೆ.  


ಪೆಂಟ್ಯಾಟೊಮಿಡೆ ಕೀಟಗಳು ನಿಸರ್ಗದಲ್ಲಿ ವೈರಿಗಳಿಂದ ರಕ್ಷಣೆ ಪಡೆಯಲು ಫೇರಮೊನ್ ಸ್ರವಿಸಿ ಗುಂಪುಗುಂಪಾಗಿ ( ಅಗ್ರಿಗೇಶನ್) ಆಥಿತೇಯ ಸಸ್ಯದ ಕಾಂಡದ ಮೇಲೆ ವಾಸಿಸುತ್ತವೆ. ಈ ರಕ್ಷಣಾ ತಂತ್ರವು ಸಂತಾನೋತ್ಪತ್ತಿಗೆ ಕೂಡಾ ಸಹಾಯವಾಗಿದೆ. ಇವು ಆಥಿತೇಯ ಸಸ್ಯದ ಎಲೆ ರಸ ಮತ್ತು ಹಣ್ಣುಗಳ ರಸವನ್ನು ಹೀರುತ್ತವೆ.


ಕ್ಯಾಟಕ್ಯಾಂಥಸ್ ಇನ್‌ಕಾರ್ನೇಟಸ್ ಭಾರತ, ಮಡಗಾಸ್ಕರ್, ಶ್ರೀಲಂಕಾ, ಮ್ಯಾನ್ಮಾರ್, ಥೈಲ್ಯಾಂಡ್, ಚೀನಾ, ಇಂಡೋನೇಷ್ಯಾ ಮಲೇಷ್ಯಾ, ಫಿಲಿಫೈನ್ಸ್, ಪಾಪುವಾ ನ್ಯೂ ಗಿನಿಯಾ , ಜಪಾನ್, ದಕ್ಷಿಣ ಕೊರಿಯಾ ಮತ್ತು ಪಾಕಿಸ್ತಾನ ದೇಶಗಳಲ್ಲಿ ಸಾಮಾನ್ಯವಾಗಿ ಹಂಚಿಕೆಯಾಗಿವೆ.


ಕೀಟಗಳು ಉನ್ನತ ಸ್ಥರದ ಜೀವಿಗಳಿಗೆ ಆಹಾರ ಒದಗಿಸುವ ಮೂಲಕ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೀಟಗಳು ನಿಸರ್ಗದಲ್ಲಿ ನೈಸರ್ಗಿಕವಾಗಿ ನಿಯಂತ್ರಿಸಲ್ಪಡುತ್ತವೆ.


ಇದನ್ನೂ ಓದಿ: I am a CEO : ಕೆಜಿಎಫ್‌ ಸ್ಟೈಲ್‌ನಲ್ಲಿ ಹೊಸ ಕಂಪನಿ ಹೆಸರೇಳಿದ ಡ್ರೋನ್‌ ಪ್ರತಾಪ್‌


ಮಂಜುನಾಥ ಎಸ್. ನಾಯಕ, ಜೀವ ವೈವಿಧ್ಯ ಸಂಶೋಧಕರು, ಸಂಗಮೇಶ ಕಡಗದ, ಶರಣು ಗೌಡರ ಈ ಕೀಟವನ್ನು ಗುರುತಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.