ಚಿತ್ರದುರ್ಗ: ʼತಾಳಿ ಕಟ್ಟುವ ಶುಭ ವೇಳೆ ಕೈಯಲ್ಲಿ ಹೂವಿನ ಮಾಲೆʼ ಎಂಬ ಬೆಂಕಿಯಲ್ಲಿ ಅರಳಿದ ಹೂ ಸಿನಿಮಾದ ಹಾಡು ಕೇಳಿರುತ್ತೀರಿ. ಕವಿ ತಾಳು ಕಟ್ಟುವ ಶುಭ ಸಂದರ್ಭವನ್ನು ಚೆನ್ನಾಗಿ ವರ್ಣಿಸಿದ್ದಾನೆ. ಅದೇ ರೀತಿ ತಾಳಿ ಕಟ್ಟುವ ಶುಭ ವೇಳೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಎಷ್ಟೋ ಮದುವೆಗಳು ಎಂಗೇಜ್‌ಮೆಂಟ್ ವೇಳೆ ಅಥವಾ ಎಂಗೇಜ್ ಮೆಂಟ್ ಆದ ನಂತರ ಮುರಿದು ಬೀಳುತ್ತದೆ. ಮದುವೆಗೆ ಇನ್ನೇನು ೨-೩ ದಿನ ಬಾಕಿ ಇರುವಾಗಲೂ ಎಷ್ಟೋ ಮದುವೆಗಳು ಮುರಿದುಬಿದ್ದಿವೆ. ಆದರೆ ಚಿತ್ರದುರ್ಗದಲ್ಲಿ ವರ ತಾಳಿ ಕಟ್ಟಲು ಮುಂದಾದಾಗ ವಧು ಮದುವೆ ಬೇಡ ಅಂತಾ ಹೇಳಿರುವ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಶಾಸ್ತ್ರೋಕ್ತವಾಗಿ ನಡೆಯುತ್ತಿದ್ದ ಈ ಮದುವೆಯಲ್ಲಿ ಬಂಧು-ಬಾಂಧವರು ಸೇರಿದಂತೆ ಸಾವಿರಾರು ಜನರು ಸೇರಿದ್ದರು. ಎಲ್ಲಾ ಶಾಸ್ತ್ರಗಳು ನಡೆದು ತಾಳಿ ಕಟ್ಟುವ ಶುಭ ಸಂದರ್ಭದಲ್ಲಿಯೇ ವಧು ಮದುವೆ ನಿರಾಕರಿಸಿದ್ದಾಳೆ. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ತಾಳಿಗೆ ಕೈ ಅಡ್ಡ ಹಿಡಿದಿದ್ದರಿಂದ ಮದುವೆ ಮುರಿದು ಬಿದ್ದಿದೆ. ಪರಿಣಾಮ ತಾಳಿ ಕಟ್ಟಲು ಸಿದ್ಧವಾಗಿದ್ದ ವರ ಸೇರಿದಂತೆ ನೆರೆದಿದ್ದ ಪ್ರತಿಯೊಬ್ಬರಿಗೂ ಶಾಕ್‌ ಆಗಿದೆ.


ಇದನ್ನೂ ಓದಿ: ಮಿಚುವಾಂಗ್ ಚಂಡಮಾರುತ ಎಫೆಕ್ಟ್: ಇಂದು 15 ರೈಲುಗಳನ್ನು ರದ್ದುಗೊಳಿಸಿದ ದಕ್ಷಿಣ ರೈಲ್ವೆ


ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ(ಡಿಸೆಂಬರ್‌ 7) ನಡೆದಿದೆ. ಚಿಕ್ಕಬ್ಯಾಲದಕೆರೆಯ ಮಂಜುನಾಥ್‌ ಅವರ ಜೊತೆಗೆ ಚಳ್ಳಕೆರೆಯ ತಿಪ್ಪರೆಡ್ಡಿಹಳ್ಳಿ ಗ್ರಾಮದ ಐಶ್ವರ್ಯ ಅವರ ಮದುವೆ ನಿಶ್ಚಯವಾಗಿತ್ತು. ಕಳೆದೊಂದು ವರ್ಷದಿಂದ ವಧು ಹಾಗೂ ವರನ ನಡುವೆ ಉತ್ತಮ ಒಡನಾಟವಿತ್ತು ಎಂದು ಹೇಳಲಾಗಿದೆ. ಆದರೆ ಐಶ್ವರ್ಯ ಓದುವ ನೆಪವೊಡ್ಡಿ ಮದುವೆಯನ್ನು 1 ವರ್ಷ ಮುಂದೂಡಿದ್ದಳಂತೆ. ನಂತರ ಸಂಬಂಧಿಕರ ಒಪ್ಪಿಗೆಯಂತೆ ಅದ್ದೂರಿಯಾಗಿ  ಬುಧವಾರ(ಡಿ.6) ಆರತಕ್ಷತೆ ನಡೆದಿತ್ತು. ಗುರುವಾರ ಬೆಳ್ಳಗ್ಗೆ 9.30ಕ್ಕೆ ತಾಳಿ ಕಟ್ಟುವ ವೇಳೆ ವಧು ತಾಳಿ ತಳ್ಳಿದ್ದಾರೆ. ವರ ಮಂಜುನಾಥ್ ಇಷ್ಟ ಇಲ್ಲದ ಹಿನ್ನೆಲೆ ಮದುವೆಯನ್ನು ವಧು ಐಶ್ವರ್ಯ ಕ್ಯಾನ್ಸಲ್ ಮಾಡಿದ್ದಾಳೆ. ತಾಳಿ ಕಟ್ಟುವಾಗ ವಧು ತಾಳಿಗೆ ಕೈ ಅಡ್ಡ ಹಿಡಿದು ತಡೆದಿರುವ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.


ಮದುವೆ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ವಧುವಿನ ನಡೆಗೆ ನೆಟಿಜನ್‌ಗಳು ಸಹ ಆಕ್ರೋಶ ಹೊರಹಾಕುತ್ತಿದ್ದಾರೆ. 


ಇದನ್ನೂ ಓದಿ: Shri Ram Temple Construction: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಹೇಗಿದೆ ಗೊತ್ತಾ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.