Shri Ram Temple Construction: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಹೇಗಿದೆ ಗೊತ್ತಾ..?

Shri Ram Temple Construction: 2024ರ ಜನವರಿ 22ರಂದು ರಾಮ್ ಲಲ್ಲಾ 'ಪ್ರಾಣ ಪ್ರತಿಷ್ಠಾ' ಸಮಾರಂಭದ ಸಿದ್ಧತೆಗಳನ್ನು ಈಗಾಗಲೇ ರಾಮ ಜನ್ಮಭೂಮಿ ಟ್ರಸ್ಟ್ ನಡೆಸುತ್ತಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 10 ಕೋಟಿ ಜನರು ಭಾಗವಹಿಸುವ ಸಾಧ್ಯತೆಯಿದೆ.

Shri Ram Temple Construction: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಪರಿಷ್ಕೃತ ಅಂದಾಜಿನ ಪ್ರಕಾರ ರಾಮಮಂದಿರ ನಿರ್ಮಾಣಕ್ಕೆ 1,800 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. 2024ರ ಜನವರಿ 22ರಂದು ರಾಮ್ ಲಲ್ಲಾ 'ಪ್ರಾಣ ಪ್ರತಿಷ್ಠಾ' ಸಮಾರಂಭದ ಸಿದ್ಧತೆಗಳನ್ನು ಈಗಾಗಲೇ ರಾಮ ಜನ್ಮಭೂಮಿ ಟ್ರಸ್ಟ್ ನಡೆಸುತ್ತಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 10 ಕೋಟಿ ಜನರು ಭಾಗವಹಿಸುವ ಸಾಧ್ಯತೆಯಿದೆ. ನೂರಾರು ಗಣ್ಯರು ಸೇರಿದಂತೆ ೪ ಸಾವಿರಕ್ಕೂ ಹೆಚ್ಚು ಸಾಧು-ಸಂತರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕರ್ನಾಟಕ ಬಿಜೆಪಿಯು ತನ್ನ ಟ್ವಿಟರ್‌ ಖಾತೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಕೆಲವು ಫೋಟೋಗಳನ್ನು ಹಂಚಿಕೊಂಡಿದೆ. ʼಜೈ ಶ್ರೀರಾಮ್ 🛕 🚩🚩ಮಂದಿರ ನಿರ್ಮಾಣವಾಗುತ್ತಿದೆ... ಶ್ರೀರಾಮ ಜನ್ಮಭೂಮಿ ಮಂದಿರದ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ..ʼ ಎಂದು ಕ್ಯಾಪ್ಶನ್‌ ಬರೆದುಕೊಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಸುಪ್ರೀಂಕೋರ್ಟ್‌ ಮಹತ್ವದ ತೀರ್ಪಿನ ಬಳಿಕ 2020ರ ಆಗಸ್ಟ್ 5ರಂದು ಪ್ರಧಾನಿ ಮೋದಿಯವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದಿನಿಂದ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣದ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. 2024ರ ಜನವರಿ 22ರಂದು ನಡೆಯಲಿರುವ ರಾಮ್ ಲಲ್ಲಾ 'ಪ್ರಾಣ ಪ್ರತಿಷ್ಠಾ' ಸಮಾರಂಭಕ್ಕೆ ದೇಶದ ಪ್ರತಿ ಹಿಂದೂಗಳ ಮನೆಗೂ ಆಹ್ವಾನ ಪತ್ರ ತಲುಪುವ ಕೆಲಸವನ್ನು RSS​​​ ಮಾಡುತ್ತಿದೆ. ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ಅಯೋಧ್ಯೆಯಲ್ಲಿ ʼರಾಮಲಲ್ಲಾ ಪ್ರತಿಷ್ಠಾಪನೆʼ ಸಮಾರಂಭ ನಡೆಯಲಿದೆ.  

2 /5

2023ರ ಡಿಸೆಂಬರ್ ವೇಳೆಗೆ ಗರ್ಭಗುಡಿ ಮತ್ತು ರಾಮನ ವಿಗ್ರಹವಿರುವ ದೇವಾಲಯದ ಕೆಳ ಮಹಡಿಯು ಪೂಜೆಗೆ ಸಿದ್ಧವಾಗಲಿದೆ ಅಂತಾ ದೇವಾಲಯದ ಪ್ರಾಧಿಕಾರ ತಿಳಿಸಿದೆ. ರಾಮಮಂದಿರದ ನೆಲ ಅಂತಸ್ತಿನ ಉದ್ದವು ಪೂರ್ವ-ಪಶ್ಚಿಮ ದಿಕ್ಕಿನಲ್ಲಿ 380 ಅಡಿ ಇದ್ದು, ಉತ್ತರ-ದಕ್ಷಿಣ ದಿಕ್ಕಿನ ಅಗಲವು 250 ಅಡಿ ಇರಲಿದೆ. ಗರ್ಭಗೃಹದ ಗೋಪುರವು ನೆಲದಿಂದ 181 ಅಡಿಯಷ್ಟು ಎತ್ತರವಿರಲಿದೆ.

3 /5

ಕರ್ನಾಟಕ ಮತ್ತು ತೆಲಂಗಾಣದ ಗ್ರಾನೈಟ್ ಕಲ್ಲುಗಳನ್ನು ಬಳಸಿ ರಾಮಮಂದಿರದಲ್ಲಿ ಸ್ತಂಭವನ್ನು ನಿರ್ಮಿಸಲಾಗಿದೆ. ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಬಂಸಿ-ಪಹಾರ್‌ಪುರ ಪ್ರದೇಶದ ಬೆಟ್ಟಗಳ ಗುಲಾಬಿ ಬಣ್ಣದ ಮರಳುಗಲ್ಲಿನಿಂದ ಮಂದಿರವನ್ನು ನಿರ್ಮಿಸಲಾಗುತ್ತದೆ. ಸುಮಾರು 17,000 ಗ್ರಾನೈಟ್ ಬ್ಲಾಕ್‌ಗಳನ್ನು ಸ್ತಂಭದ ಕೆಲಸದಲ್ಲಿ ಬಳಸಲಾಗುತ್ತಿದೆ.

4 /5

Larsen & Toubro ಕಂಪನಿಗೆ ದೇವಾಲಯ ಮತ್ತು ಗೋಡೆಗಳ ನಿರ್ಮಾಣದ ಗುತ್ತಿಗೆ ನೀಡಲಾಗಿದೆ. ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್‌ಗಳನ್ನು ಯೋಜನಾ ನಿರ್ವಹಣಾ ಸಲಹೆಗಾರರಾಗಿ ನೇಮಿಸಲಾಗಿದೆ.

5 /5

ದೇಶದ ಜನರು 2023ರ ಅಂತ್ಯಕ್ಕೆ ಭವ್ಯ ರಾಮ ಮಂದಿರದಲ್ಲಿ ಶ್ರೀರಾಮನ ದರ್ಶನ ಪಡೆಯಬಹುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಹೇಳಿದ್ದರು. ಮಂದಿರ ನಿರ್ಮಾಣ ಕಾರ್ಯವು ಡಿಸೆಂಬರ್ 2023ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 2024ರ ಜನವರಿಯಲ್ಲಿ ಬರುವ ಮಕರ ಸಂಕ್ರಾಂತಿ ಹಬ್ಬದ ವೇಳೆಗೆ ಗರ್ಭಗುಡಿಯಲ್ಲಿ ಶ್ರೀರಾಮನು ವಿರಾಜಮಾನನಾಗುವ ನಿರೀಕ್ಷೆಯಿದೆ.