ಉತ್ತರ ಪ್ರದೇಶದ ನೋಯ್ಡಾದಲ್ಲಿ ಮತ್ತೊಮ್ಮೆ ನಿಂದನೆ ಮತ್ತು ಅಸಭ್ಯವಾಗಿ ವರ್ತಿಸಿದ ಆರೋಪದ ಪ್ರಕರಣ ಬೆಳಕಿಗೆ ಬಂದಿದೆ. ಸೊಸೈಟಿಯ ಗೇಟ್ ತೆರೆಯಲು ಸಿಬ್ಬಂದಿ ತಡ ಮಾಡಿದ ಎಂಬ ಕಾರಣಕ್ಕೆ ಓರ್ವ ಮಹಿಳೆ ಆತನ ಜೊತೆ ಅನುಚಿತವಾಗಿ ವರ್ತಿಸಿದ್ದಾಳೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಹಿಳೆ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮೂರನೇ ಏಕದಿನ ಪಂದ್ಯಕ್ಕೆ ಈ ಆಟಗಾರ ಎಂಟ್ರಿ, ಕ್ಯಾಪ್ಟನ್ ರಾಹುಲ್ ಕ್ಲೀನ್ ಸ್ವೀಪ್ ಕನಸು ನನಸು!


ಸೆಕ್ಯುರಿಟಿ ಗಾರ್ಡ್ ನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅನುಚಿತವಾಗಿ ಮಹಿಳೆ ವರ್ತಿಸಿದ್ದಾಳೆ. ಸ್ಥಳದಲ್ಲೇ ಇದ್ದ ಕೆಲ ಜನರು ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಆರೋಪಿ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಗ್ರಹಿಸುತ್ತಿದ್ದಾರೆ. ಇದೀಗ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.


ನೋಯ್ಡಾದ ವೈರಲ್ ವೀಡಿಯೊದಲ್ಲಿ, ಸೊಸೈಟಿಯ ಗೇಟ್ ಅನ್ನು ತಡವಾಗಿ ತೆರೆದಿದ್ದಕ್ಕಾಗಿ ಮಹಿಳೆ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ಕಾಣಬಹುದು. ಈ ವಿಡಿಯೋ 2 ನಿಮಿಷಕ್ಕೂ ಹೆಚ್ಚು ಅವಧಿಯದ್ದಾಗಿದ್ದು, ಈ ವಿಡಿಯೋ ವೈರಲ್ ಆದ ಬಳಿಕ ನೋಯ್ಡಾ ಪೊಲೀಸರು ವಿಷಯ ತಿಳಿದುಕೊಂಡಿದ್ದಾರೆ.


ಈ ವಿಡಿಯೋ ಜೆಪಿ ಗ್ರೀನ್ ವಿಶ್ ಸೊಸೈಟಿಯದ್ದು ಎಂದು ಹೇಳಲಾಗುತ್ತಿದೆ. ವಿಡಿಯೋದಲ್ಲಿ ಮಹಿಳೆ ಸೆಕ್ಯುರಿಟಿ ಗಾರ್ಡ್ನ ಕೈ ಹಿಡಿದು ಎಳೆದಾಡುತ್ತಿದ್ದಾಳೆ. ಆದರೆ ಸಿಬ್ಬಂದಿ ಮಾತ್ರ ಮಹಿಳೆಯ ಮುಂದೆ ಮನವಿ ಮಾಡುತ್ತಿರುವುದು ಕಂಡು ಬಂದಿದೆ. ಇನ್ನು ಮಹಿಳೆ ಸ್ವಲ್ಪ ಸಮಯದ ನಂತರ ಅವಾಚ್ಯ ಪದಗಳನ್ನು ಬಳಸಿ ಪದೇ ಪದೇ ಕಾವಲುಗಾರನ ಕಾಲರ್ ಅನ್ನು ಹಿಡಿದು ಎಳೆದಾಡಿದ್ದಾಳೆ. ಆಗ ಮಹಿಳೆಯ ಅನುಚಿತ ವರ್ತನೆಯಿಂದ ಸಿಟ್ಟಿಗೆದ್ದ ಸಿಬಂದಿ ಕೆಲಸ ಬಿಡುವ ಬಗ್ಗೆ ಮಾತನಾಡಿದ್ದಾರೆ. 


ಇದನ್ನೂ ಓದಿ: ನಿಮ್ಮ ಮನೆಯಲ್ಲಿ ಈ ವಸ್ತುವನ್ನಿಟ್ಟರೆ ತಕ್ಷಣ ತೆಗೆದುಹಾಕಿ: ಇದು ಸಾವಿನ ಸುದ್ದಿ ತರುತ್ತದೆ!


ಸೆಕ್ಯುರಿಟಿ ಗಾರ್ಡ್ ನೊಂದಿಗೆ ಮಹಿಳೆಯ ಅನುಚಿತ ವರ್ತನೆಯ ಈ ಪ್ರಕರಣವನ್ನು ನೋಯ್ಡಾದ ಸೆಕ್ಟರ್ 126 ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಪೊಲೀಸರು ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳುತ್ತಿದ್ದಾರೆ. ವಾಸ್ತವವಾಗಿ ನೋಯ್ಡಾದಿಂದ ಈ ರೀತಿಯ ವೀಡಿಯೊ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಹ ಕೆಲ ಸೆಕ್ಯುರಿಟಿ ಗಾರ್ಡ್ಗಳು ಹಾಗೂ ಜನರ ನಡುವೆ ಮನಸ್ತಾಪ ಉಂಟಾಗಿರುವ ಇಂತಹ ಹಲವು ಘಟನೆಗಳು ಕಂಡು ಬಂದಿವೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ