ನಿಮ್ಮ ಮನೆಯಲ್ಲಿ ಈ ವಸ್ತುವನ್ನಿಟ್ಟರೆ ತಕ್ಷಣ ತೆಗೆದುಹಾಕಿ: ಇದು ಸಾವಿನ ಸುದ್ದಿ ತರುತ್ತದೆ!

ಪ್ರೀತಿಯ ಸಂಕೇತವಾದ ತಾಜ್ ಮಹಲ್ ತುಂಬಾ ಸುಂದರವಾಗಿ ಕಾಣುತ್ತದೆ ಆದರೆ ಅದರ ಫೋಟೋ ಅಥವಾ ಶೋಪೀಸ್ ಅನ್ನು ಮನೆಯಲ್ಲಿ ಇಡುವುದು ಅಥವಾ ಉಡುಗೊರೆಯಾಗಿ ತೆಗೆದುಕೊಳ್ಳುವುದು, ಕೊಡುವುದು ಒಳ್ಳೆಯದಲ್ಲ.

Written by - Bhavishya Shetty | Last Updated : Aug 21, 2022, 01:26 PM IST
    • ಪ್ರೀತಿಯ ಸಂಕೇತವಾದ ತಾಜ್ ಮಹಲ್ ತುಂಬಾ ಸುಂದರವಾಗಿ ಕಾಣುತ್ತದೆ
    • ವಾಸ್ತು ಶಾಸ್ತ್ರದಲ್ಲಿ ತಾಜ್ ಮಹಲ್ ಅನ್ನು ಮನೆಯಲ್ಲಿ ಇಟ್ಟರೆ ವಾಸ್ತು ದೋಷ ಉಂಟಾಗಬಹುದು
    • ತಾಜ್ ಮಹಲ್ ವಾಸ್ತು ಸಮಸ್ಯೆಗಳನ್ನು ಉಂಟುಮಾಡುತ್ತದೆ
ನಿಮ್ಮ ಮನೆಯಲ್ಲಿ ಈ ವಸ್ತುವನ್ನಿಟ್ಟರೆ ತಕ್ಷಣ ತೆಗೆದುಹಾಕಿ: ಇದು ಸಾವಿನ ಸುದ್ದಿ ತರುತ್ತದೆ!   title=
Taj Mahal idol

ಅನೇಕ ಬಾರಿ ಜನರು ಮನೆಯನ್ನು ಅಲಂಕರಿಸುವ ಪ್ರಕ್ರಿಯೆಯಲ್ಲಿ ಇಂತಹ ತಪ್ಪುಗಳನ್ನು ಮಾಡುತ್ತಾರೆ. ಅಂತಹ ತಪ್ಪುಗಳು ಪ್ರಮುಖ ವಾಸ್ತು ದೋಷಗಳನ್ನು ಉಂಟು ಮಾಡುತ್ತವೆ. ತಾಜ್‌ಮಹಲ್‌ನ ಶೋಪೀಸ್ ಅನ್ನು ಮನೆಯಲ್ಲಿ ಇಡುವುದು ಅಥವಾ ತಾಜ್ ಮಹಲ್‌ನ ಫೋಟೋ ಹಾಕುವುದು ಕೂಡ ದೊಡ್ಡ ತಪ್ಪು. ವಾಸ್ತು ಶಾಸ್ತ್ರದಲ್ಲಿ ತಾಜ್ ಮಹಲ್ ಅನ್ನು ಮನೆಯಲ್ಲಿ ಇಟ್ಟರೆ ವಾಸ್ತು ದೋಷ ಉಂಟಾಗಬಹುದು ಎಂದು ಹೇಳಲಾಗಿದೆ.   

ಇದನ್ನೂ ಓದಿ: Bilkis Bano Rape Case: 11 ಅಪರಾಧಿಗಳ ಬಿಡುಗಡೆ ನಿರ್ಧಾರ ವಾಪಸ್ ಪಡೆಯುವಂತೆ ರಾಷ್ಟ್ರಪತಿ ಮುರ್ಮುಗೆ ಪತ್ರ

ಪ್ರೀತಿಯ ಸಂಕೇತವಾದ ತಾಜ್ ಮಹಲ್ ತುಂಬಾ ಸುಂದರವಾಗಿ ಕಾಣುತ್ತದೆ ಆದರೆ ಅದರ ಫೋಟೋ ಅಥವಾ ಶೋಪೀಸ್ ಅನ್ನು ಮನೆಯಲ್ಲಿ ಇಡುವುದು ಅಥವಾ ಉಡುಗೊರೆಯಾಗಿ ತೆಗೆದುಕೊಳ್ಳುವುದು, ಕೊಡುವುದು ಒಳ್ಳೆಯದಲ್ಲ.

ಶಾಜಹಾನ್ ತನ್ನ ಪತ್ನಿ ಮುಮ್ತಾಜ್ ಮರಣದ ನಂತರ, ಆಕೆಯ ನೆನಪಿಗಾಗಿ ತಾಜ್ ಮಹಲ್ ಅನ್ನು ನಿರ್ಮಿಸಿದನು. ಹಿಂದೂ ಧರ್ಮದಲ್ಲಿ, ಸ್ಮಶಾನ ಅಥವಾ ಸಮಾಧಿಯ ಚಿತ್ರವನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ ಅದು ನಕಾರಾತ್ಮಕತೆಯನ್ನು ತರುತ್ತದೆ. ಆದ್ದರಿಂದ, ನಿಮ್ಮ ಮನೆಯಲ್ಲಿ ತಾಜ್ ಮಹಲ್‌ನ ಚಿತ್ರವನ್ನು ಎಂದಿಗೂ ಇಡಬೇಡಿ ಅಥವಾ ಅದರ ಶೋಪೀಸ್ ಅನ್ನು ಇಟ್ಟುಕೊಳ್ಳಬೇಡಿ.

ತಾಜ್ ಮಹಲ್ ಇಡುವುದರಿಂದ ವಾಸ್ತು ದೋಷ: ವಾಸ್ತು ಶಾಸ್ತ್ರದ ಪ್ರಕಾರ, ತಾಜ್ ಮಹಲ್ ಅನ್ನು ಮನೆಯಲ್ಲಿಟ್ಟರೆ ದುಃಖ, ಸಮಾಧಿ, ಸಾವಿನಂತಹ ಸುದ್ದಿಗಳನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಈ ವಾಸ್ತು ದೋಷವು ಅನೇಕ ಸಮಸ್ಯೆಗಳನ್ನು ತರುತ್ತದೆ. ಇದರಿಂದ ಮನೆಯ ಜನರ ಪ್ರಗತಿಯಲ್ಲಿ ಅಡೆತಡೆಗಳು ಉಂಟಾಗುತ್ತವೆ. ಅವರು ರೋಗಗಳಿಗೆ ಗುರಿಯಾಗುತ್ತಾರೆ. ಆರ್ಥಿಕ ನಷ್ಟ ಅಥವಾ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ.

ತಾಜ್ ಮಹಲ್‌ನ ಚಿತ್ರ ಅಥವಾ ಶೋಪೀಸ್ ಅನ್ನು ಉಡುಗೊರೆಯಾಗಿ ನೀಡಬೇಡಿ. ಹಾಗೆ ಮಾಡುವುದು ಒಳ್ಳೆಯದೆಂದು ಸಹ ಪರಿಗಣಿಸಲಾಗುವುದಿಲ್ಲ. ನೀವು ಎಂದಾದರೂ ತಾಜ್ ಮಹಲ್ ಅನ್ನು ಉಡುಗೊರೆಯಾಗಿ ಪಡೆದರೆ, ಅದನ್ನು ಮನೆಗೆ ತರಬೇಡಿ ಅಥವಾ ಮನೆಯಲ್ಲಿ ಇಟ್ಟು ಅಲಂಕರಿಸಬೇಡಿ.

ಇದನ್ನೂ ಓದಿ: ಪ್ರಧಾನಿ ಮೊಹಾಲಿ ಭೇಟಿಗೂ ಮುನ್ನ ISI ದಾಳಿಯ ಎಚ್ಚರಿಕೆ: ಈ 10 ನಾಯಕರೇ ಉಗ್ರರ ಟಾರ್ಗೆಟ್!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News