ನವದೆಹಲಿ: ಬರೋಬ್ಬರಿ 111 ವರ್ಷಗಳ ಹಿಂದೆ(1911)ಬಲ್ಗೇರಿಯಾದಲ್ಲಿ ಜನಿಸಿದ ಬಾಬಾ ವಂಗಾ ನುಡಿದ ಹಲವು ಭವಿಷ್ಯವಾಣಿಗಳು ನಿಜವಾಗಿವೆ. ಚಂಡಮಾರುತದಿಂದ ಬಾಬಾ ವಂಗಾ ತನ್ನ 12ನೇ ವಯಸ್ಸಿನಲ್ಲಿ ಕಣ್ಣುಗಳನ್ನು ಕಳೆದುಕೊಂಡಿದ್ದರು. ಆದರೆ ಬಹಳ ವರ್ಷಗಳ ಹಿಂದೆ ಅವರು ಗ್ರಹಿಸಿ ನುಡಿದ ಅನೇಕ ಭವಷ್ಯವಾಣಿಗಳು ಇಂದಿಗೂ ನಿಜವಾಗುತ್ತಿವೆ. ತಮ್ಮ ಭವಿಷ್ಯವಾಣಿಗಳಿಂದಲೇ ಬಾಬಾ ವೆಂಗಾ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ.


COMMERCIAL BREAK
SCROLL TO CONTINUE READING

ಸಾವಿಗೂ ಮೊದಲು ಬಾಬಾ ವಂಗಾ 2022 ಮತ್ತು ನಂತರ ಅನೇಕ ವರ್ಷಗಳ ಕಾಲ ನಡೆಯುವ ಪ್ರಮುಖ ಘಟನೆಗಳ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ. ಅವರ ಪ್ರಮುಖ ಭವಿಷ್ಯವಾಣಿಗಳ ಬಗ್ಗೆ ಇಂಟರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: Viral News: ಮನೆ ಕೆಡವಿದ ಮೇಲೆ ಸಿಕ್ಕಳು ‘ಅದೃಷ್ಟ ಲಕ್ಷ್ಮಿ’; ದಂಪತಿಗೆ ಸಿಕ್ತು ಕೋಟಿ ಕೋಟಿ ಮೌಲ್ಯದ ‘ನಿಧಿ’!


ಬಾಬಾ ವಂಗಾ ಭವಿಷ್ಯವಾಣಿಗಳು!


2022ರ ಬಗ್ಗೆ ಬಾಬಾ ವಂಗಾ ನುಡಿದಿರುವ ಅನೇಕ ಭವಿಷ್ಯ ವಾಣಿಗಳು ನಿಜವಾಗಿವೆ. ಭಾರತದಲ್ಲಿ ಮಿಡತೆಗಳ ದಾಳಿ ಮತ್ತು ಬರಗಾಲದಂತಹ ಸಮಸ್ಯೆಗಳೂ ಬರಬಹುದು ಎಂದು ವಂಗಾ ಭವಿಷ್ಯ ನುಡಿದಿದ್ದರು. ಅದರಂತೆಯೇ ಭಾರತಲ್ಲಿ ಈ ಘಟನೆಗಳು ಈಗಾಗಲೇ ಸಂಭವಿಸಿವೆ. ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಅತಿವೃಷ್ಟಿ-ಅನಾವೃಷ್ಟಿ ದೊಡ್ಡ ಅಪಾಯವನ್ನುಂಟು ಮಾಡುತ್ತದೆ ಎಂದು ವಂಗಾ ಭವಿಷ್ಯ ನುಡಿದಿದ್ದರು.


ಇದಲ್ಲದೆ 2023ರಲ್ಲಿ ಭೂಮಿ ತನ್ನ ಕಕ್ಷೆಯನ್ನು ಬದಲಾಯಿಸಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. 2028ರಲ್ಲಿ ಗಗನಯಾತ್ರಿಗಳು ಶುಕ್ರಗ್ರಹಕ್ಕೆ ಪ್ರಯಾಣಿಸಲಿದ್ದಾರಂತೆ. 2046ರಲ್ಲಿ,ಮಾನವರು ಅಂಗಾಂಗ ಕಸಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುತ್ತಾರಂತೆ. ಈ ತಂತ್ರಜ್ಞಾನದ ಸಹಾಯದಿಂದ ಜನರು 100ಕ್ಕೂ ಹೆಚ್ಚು ವರ್ಷ ಬದುಕಲು ಸಾಧ್ಯವಾಗುತ್ತದೆಂತೆ.


ಇದನ್ನೂ ಓದಿ: Snake video : ಕಾಲನ್ನು ಬಿಗಿಯಾಗಿ ಸುತ್ತಿಕೊಂಡಿದ್ದರೂ ಅಪಾಯಕಾರಿ ಹೆಬ್ಬಾವು ಮಾಸಲಿಲ್ಲ ಯುವತಿಯ ಮುಗುಳ್ನಗೆ ..!


2100ರಲ್ಲಿ ಭೂಮಿಯ ಮೇಲೆ ರಾತ್ರಿಯೇ ಇರುವುದಿಲ್ಲವಂತೆ. ಕೃತಕ ಸೂರ್ಯನ ಬೆಳಕಿನಿಂದ ಭೂಮಿಯು ಪ್ರಕಾಶಿಸಲ್ಪಡುತ್ತದೆ ಅಂತಾ ಬಾಬಾ ವಂಗಾ ಭವಿಷ್ಯವಾಣಿ ಹೇಳಿದೆ. ಪ್ರಪಂಚದ ಅಂತ್ಯದ ಬಗ್ಗೆಯೂ ಬಾಬಾ ವಂಗಾ  ಭವಿಷ್ಯ ನುಡಿದಿದ್ದು, ಸುಮಾರು 5079ರಲ್ಲಿ ಪ್ರಪಂಚವು ಕೊನೆಗೊಳ್ಳುತ್ತದಂತೆ.


ನಿಜವಾದ ಭವಿಷ್ಯವಾಣಿಗಳು!


ಬಾಬಾ ವಂಗಾ 2022ರ ಬಗ್ಗೆ ಹೇಳಿದ್ದ 2 ಭವಿಷ್ಯವಾಣಿಗಳು ನಿಜವಾಗಿವೆ. ಏಷ್ಯಾ ಮತ್ತು ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ಪ್ರವಾಹ ಉಂಟಾಗಿ ದೊಡ್ಡಮಟ್ಟದ ಹಾನಿಯುಂಟಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಇದುದು ನಿಜವಾಗಿದೆ. ಆಸ್ಟ್ರೇಲಿಯಾ, ಈಶಾನ್ಯ ಭಾರತ, ಬಾಂಗ್ಲಾದೇಶ ಮತ್ತು ಥೈಲ್ಯಾಂಡ್‌ನಲ್ಲಿ ಏಕಾಏಕಿ ಪ್ರವಾಹ ಕಾಣಿಸಿಕೊಂಡು ದೊಡ್ಡ ಮಟ್ಟದ ಹಾನಿಯುಂಟಾಗಿತ್ತು. ಪಾಕಿಸ್ತಾನದಲ್ಲಿ ಇಂದೂ ಸಹ ಪ್ರವಾಹ ಸಮಸ್ಯೆ ತಲೆದೋರಿದೆ.  ಇದಲ್ಲದೆ ಬಾಬಾ ಯುರೋಪಿನಲ್ಲಿ ಭೀಕರ ಬರಗಾಲ ಸಂಭವಿಸುತ್ತದೆ ಎಂದು ವಂಗಾ ಹೇಳಿದ್ದರು. ಅದರಂತೆ ಈ ವರ್ಷ ಯುರೋಪ್‌ನಲ್ಲಿ ನೀರಿನ ಬಳಕೆ ಮಿತಿಗೊಳಿಸುವಂತೆ ಅಲ್ಲಿನ ಸರ್ಕಾರವು ನಾಗರಿಕರಲ್ಲಿ ಮನವಿ ಮಾಡಿದೆ. ಇಟಲಿಯಲ್ಲಿ ಸಹ ನೀರಿನ ಅಭಾವ ಕಾಣಿಸಿಕೊಂಡಿದೆ. ಬಾಬಾ ವಂಗಾ ನುಡಿದಿರುವ ಅನೇಕ ಭವಿಷ್ಯವಾಣಿಗಳು ನಿಜವಾಗಿದ್ದು, ಮುಂದೆ ಏನೇನಾಗುತ್ತೆ ಅನ್ನೋ ಕುತೂಹಲ ಮೂಡಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.