Viral Video: ಜಗಳ ಮಾಡಿದರೆಂದು ಆಕ್ರೋಶ: ಬೈಕ್ ಮೇಲೆ ಕಾರನ್ನು ಹತ್ತಿಸಿದ ಚಾಲಕ...ಮುಂದೇನಾಯ್ತು?

ವಾಸ್ತವವಾಗಿ, ಈ ವೀಡಿಯೊದಲ್ಲಿ, ಹೆಲ್ಮೆಟ್ ಧರಿಸಿರುವ ಇಬ್ಬರು ಹುಡುಗರು ಕಾರು ಚಾಲಕನೊಂದಿಗೆ ಗಲಾಟೆ ಮಾಡಲು ಮುಂದಾಗುವುದನ್ನು ನೋಡಬಹುದು. ಇಬ್ಬರೂ ಕಾರಿನ ಮೇಲೆ ಮೆಟ್ಟುವುದು, ಚಾಲಕನನ್ನು ನಿಂದಿಸುವುದು ದೃಶ್ಯದಲ್ಲಿ ಕಾಣುತ್ತದೆ.

Written by - Bhavishya Shetty | Last Updated : Sep 3, 2022, 01:13 PM IST
    • ಹೆಲ್ಮೆಟ್ ಧರಿಸಿರುವ ಇಬ್ಬರು ಹುಡುಗರು ಕಾರು ಚಾಲಕನೊಂದಿಗೆ ಗಲಾಟೆ ಮಾಡುತ್ತಾರೆ
    • ಕೋಪಗೊಂಡ ಚಾಲಕ ತನ್ನ ಕಾರನ್ನು ಅವರ ಬೈಕಿನಲ್ಲಿ ಮೇಲೆ ಹತ್ತಿಸುತ್ತಾನೆ
    • ಈ ಟ್ರೆಂಡಿಂಗ್ ವೀಡಿಯೋವನ್ನು ಮೊದಲು ನೀವೂ ನೋಡಲೇಬೇಕು
Viral Video: ಜಗಳ ಮಾಡಿದರೆಂದು ಆಕ್ರೋಶ: ಬೈಕ್ ಮೇಲೆ ಕಾರನ್ನು ಹತ್ತಿಸಿದ ಚಾಲಕ...ಮುಂದೇನಾಯ್ತು? title=
Accident

ರಸ್ತೆ ಮಧ್ಯದಲ್ಲಿ ಜನರು ಜಗಳವಾಡುವುದನ್ನು ನೀವು ಅನೇಕ ಬಾರಿ ನೋಡಿರಬೇಕು. ಅಂತಹ ಜನರು ಗುಂಪುಗೂಡುವುದು ಮಾತ್ರವಲ್ಲದೆ ಜನರ ಸಮಯವನ್ನು ವ್ಯರ್ಥ ಮಾಡುತ್ತಾರೆ. ಇಂತಹವುಗಳ ಮಧ್ಯೆ ಜನರು ತಮ್ಮ ಕೋಪವನ್ನು ನಿಯಂತ್ರಿಸಲು ಮತ್ತು ಜಗಳವಾಡಲು ಸಾಧ್ಯವಾಗದೆ ಇರುವುದು ಸಹ ಕಂಡುಬರುತ್ತದೆ. ಆದರೆ ಇಲ್ಲೊಂದು ವಿಡಿಯೋದಲ್ಲಿ ಕೋಪ ನಿಯಂತ್ರಣಕ್ಕೆ ಬಾರದ ವ್ಯಕ್ತಿಯೊಬ್ಬ ಬೇಕಂತಲೇ ಕಾರನ್ನು ಬೈಕ್ ಮೇಲೆ ಹತ್ತಿಸಿ ಸುಮಾರು ದೂರಗಳವರೆಗೆ ಎಳೆದೊಯ್ದ ಘಟನೆ ನಡೆದಿದೆ. ಈ ವಿಡಿಯೋದಲ್ಲಿ ಕಾರು ಚಾಲಕನೊಬ್ಬ ಇಬ್ಬರು ಹುಡುಗರಿಗೆ ಒಳ್ಳೆಯ ಪಾಠ ಕಲಿಸಿದ್ದಾನೆ. 

ಇದನ್ನೂ ಓದಿ: Petrol-Diesel Rate: ವಾಹನ ಸವಾರರಿಗೆ ಇಲ್ಲಿದೆ ಸಿಹಿಸುದ್ದಿ: ದೇಶದಲ್ಲಿ ಶೀಘ್ರವೇ ಅಗ್ಗವಾಗಲಿದೆ ಪೆಟ್ರೋಲ್-ಡೀಸೆಲ್ ಬೆಲೆ!

ವಾಸ್ತವವಾಗಿ, ಈ ವೀಡಿಯೊದಲ್ಲಿ, ಹೆಲ್ಮೆಟ್ ಧರಿಸಿರುವ ಇಬ್ಬರು ಹುಡುಗರು ಕಾರು ಚಾಲಕನೊಂದಿಗೆ ಗಲಾಟೆ ಮಾಡಲು ಮುಂದಾಗುವುದನ್ನು ನೋಡಬಹುದು. ಇಬ್ಬರೂ ಕಾರಿನ ಮೇಲೆ ಮೆಟ್ಟುವುದು, ಚಾಲಕನನ್ನು ನಿಂದಿಸುವುದು ದೃಶ್ಯದಲ್ಲಿ ಕಾಣುತ್ತದೆ.  ಹೀಗೆ ಮಾಡುವುದು ಸಮಸ್ಯೆ ಎಂದು ಅವರಿಗೆ ತಿಳಿದಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಟ್ರೆಂಡಿಂಗ್ ವೀಡಿಯೋವನ್ನು ಮೊದಲು ನೀವೂ ನೋಡಲೇಬೇಕು.

 

 

ಹುಡುಗರ ಬೈಕ್‌ಗಳ ಸ್ಥಿತಿ ಹೀಗಿತ್ತು!

ಕಾರ್ ಡ್ರೈವರ್ ಕೋಪಗೊಂಡಾಗ, ಅವನು ತನ್ನ ಕಾರನ್ನು ತಿರುಗಿಸಿ ಈ ಹುಡುಗರಿಗೆ ಜೀವನವಿಡೀ ನೆನಪಿನಲ್ಲಿಟ್ಟುಕೊಳ್ಳುವ ಪಾಠವನ್ನು ಕಲಿಸುತ್ತಾನೆ. ಚಾಲಕನು ತನ್ನ ಕಾರನ್ನು ಅವರ ಬೈಕಿನಲ್ಲಿ ಮೇಲೆ ಹತ್ತಿಸಿ, ಎಳೆದುಕೊಂಡು ಹೋಗುತ್ತಾನೆ. ಇದನ್ನು ನೋಡಿದ ಇಬ್ಬರೂ ಹುಡುಗರು ಸೇರಿದಂತೆ ರಸ್ತೆಯಲ್ಲಿದ್ದ ಎಲ್ಲರೂ ಬೆಚ್ಚಿಬಿದ್ದರು. ಈ ಘಟನೆಯ ಫಲಿತಾಂಶವನ್ನು ಯಾರೂ ನಿರೀಕ್ಷಿಸಿರಲಿಲ್ಲ.

ಇದನ್ನೂ ಓದಿ: Largest Economy In The World: ಬ್ರಿಟನ್ ಹಿಂದಿಕ್ಕಿದ ಭಾರತ 5ನೇ ಸ್ಥಾನಕ್ಕೆ ಏರಿಕೆ!

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. 48 ಸೆಕೆಂಡ್‌ಗಳ ಈ ವೀಡಿಯೋ ಕೂಡ ಸಾಕಷ್ಟು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕೆಲವರು ಕಾರು ಚಾಲಕನನ್ನು ಬೆಂಬಲಿಸಿದರೆ ಇನ್ನೂ , ಕೆಲವರು ಬೈಕ್ ಓಡಿಸುತ್ತಿದ್ದ ಹುಡುಗರಿಬ್ಬರನ್ನೂ ಸಮರ್ಥಿಸಿಕೊಂಡಿದ್ದಾರೆ ಇಲ್ಲಿಯವರೆಗೆ 1.5 ದಶಲಕ್ಷಕ್ಕೂ ಹೆಚ್ಚು ಜನರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News