ಮತ್ತೆ ಭಾರತೀಯನ ಮೇಲೆ ಜನಾಂಗೀಯ ಧೋರಣೆ: ಅವಾಚ್ಯ ಶಬ್ದಗಳಿಂದ ನಿಂದಿಸಿದ ಅಮೆರಿಕಾದ ವ್ಯಕ್ತಿ

ವಿಡಿಯೋ ಕ್ಲಿಪ್‌ನಲ್ಲಿ, ಆ ವ್ಯಕ್ತಿ ಪೋಲೆಂಡ್‌ನ ಬೀದಿಯಲ್ಲಿ ಒಬ್ಬ ಭಾರತೀಯನ ಬಳಿಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಬಳಿಕ ಅವನಿಗೆ ಇಂಗ್ಲಿಷ್ ತಿಳಿದಿದೆಯೇ ಎಂದು ಕೇಳುತ್ತಾನೆ. ಇಷ್ಟು ಕೇಳಿದ ಬಳಿಕ ವಾಗ್ದಾಳಿ ನಡೆಸುತ್ತಾನೆ.

Written by - Bhavishya Shetty | Last Updated : Sep 3, 2022, 04:43 PM IST
    • ಭಾರತೀಯನ ಮೇಲೆ ವ್ಯಕ್ತಿಯೋರ್ವ ಜನಾಂಗೀಯ ನಿಂದನೆ ಮಾಡಿದ್ದಾನೆ
    • ಅಪರಿಚಿತ ಭಾರತೀಯ ವ್ಯಕ್ತಿಯ ಮೇಲೆ ಅಮೇರಿಕನ್ ಎಂದು ಹೇಳಿಕೊಳ್ಳುವ ವ್ಯಕ್ತಿಯಿಂದ ನಿಂದನೆ
    • ಕಳೆದ ಕೆಲ ದಿನಗಳ ಹಿಂದೆಯೂ ಭಾರತೀಯರ ಮೇಲೆ ಜನಾಂಗೀಯ ಧೋರಣೆ ನಡೆದಿತ್ತು
ಮತ್ತೆ ಭಾರತೀಯನ ಮೇಲೆ ಜನಾಂಗೀಯ ಧೋರಣೆ: ಅವಾಚ್ಯ ಶಬ್ದಗಳಿಂದ ನಿಂದಿಸಿದ ಅಮೆರಿಕಾದ ವ್ಯಕ್ತಿ title=
Racism

ಪೋಲೆಂಡ್‌ನ ರಾಜಧಾನಿ ವಾರ್ಸಾದಲ್ಲಿ ಭಾರತೀಯನ ಮೇಲೆ ವ್ಯಕ್ತಿಯೋರ್ವ ಜನಾಂಗೀಯ ನಿಂದನೆ ಮಾಡಿದ್ದು, "ಪರಾವಲಂಬಿ" ಮತ್ತು "ಆಕ್ರಮಣಕಾರ" ಎಂದು ಕರೆದಿದ್ದಾನೆ. ಈ ಘಟನೆಯ ವೀಡಿಯೊವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೋಲೆಂಡ್‌ನಲ್ಲಿರುವ ಅಪರಿಚಿತ ಭಾರತೀಯ ವ್ಯಕ್ತಿಯ ಮೇಲೆ ಅಮೇರಿಕನ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಅಶ್ಲೀಲ ಮತ್ತು ಜನಾಂಗೀಯ ನಿಂದನೆಗಳನ್ನು ಮಾಡಿರುವುದು ಕಂಡುಬರುತ್ತದೆ. 

ಇದನ್ನೂ ಓದಿ:ವಿಮಾನ ದರ ಹೆಚ್ಚಳಕ್ಕೆ ಕಂಗಾಲಾದ ಎನ್ಆರ್ಐಗಳು: ತಾಯ್ನಾಡಿನಲ್ಲೇ ಉಳಿಯುತ್ತಿದ್ದಾರೆ ಅನಿವಾಸಿ ಜನರು

ವಿಡಿಯೋ ಕ್ಲಿಪ್‌ನಲ್ಲಿ, ಆ ವ್ಯಕ್ತಿ ಪೋಲೆಂಡ್‌ನ ಬೀದಿಯಲ್ಲಿ ಒಬ್ಬ ಭಾರತೀಯನ ಬಳಿಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಬಳಿಕ ಅವನಿಗೆ ಇಂಗ್ಲಿಷ್ ತಿಳಿದಿದೆಯೇ ಎಂದು ಕೇಳುತ್ತಾನೆ. ಇಷ್ಟು ಕೇಳಿದ ಬಳಿಕ ವಾಗ್ದಾಳಿ ನಡೆಸುತ್ತಾನೆ. “ನಮ್ಮ ದೇಶವನ್ನು ಆಕ್ರಮಿಸುವ ಹಕ್ಕು ನಿಮಗಿದೆ ಎಂದು ನೀವು ಏಕೆ ಭಾವಿಸುತ್ತೀರಿ ಎಂದು ಯುರೋಪಿಯನ್ನರು ತಿಳಿದುಕೊಳ್ಳಲು ಬಯಸುತ್ತಾರೆ. ನಿಮ್ಮ ಜನರು ನಮ್ಮ ತಾಯ್ನಾಡಿನ ಮೇಲೆ ಏಕೆ ದಾಳಿ ಮಾಡುತ್ತಿದ್ದಾರೆ? ನಿಮಗೆ ಭಾರತವಿದೆ! ನೀವು ಬಿಳಿಯರ ದೇಶಕ್ಕೆ ಏಕೆ ಬರುತ್ತಿದ್ದೀರಿ?” ಎಂದು ಪ್ರಶ್ನಿಸಿ ನಿಂದಿಸಿದ್ದಾನೆ.

"ನಮ್ಮ ಕಠಿಣ ಪರಿಶ್ರಮದಿಂದ ಹೊರಬರಲು ನೀವು ಬಿಳಿಯರ ಭೂಮಿಗೆ ಏಕೆ ಬರುತ್ತಿದ್ದೀರಿ" ಎಂದು ಆ ವ್ಯಕ್ತಿ ಹೇಳುವುದನ್ನು ವೀಡಿಯೊದಲ್ಲಿ ಕೇಳಬಹುದು, ಭಾರತೀಯ ವ್ಯಕ್ತಿ ವಿಡಿಯೋ ಮಾಡುವುದನ್ನು ನಿಲ್ಲಿಸುವಂತೆ ಕೇಳುತ್ತಾನೆ. 

ಇದನ್ನೂ ಓದಿ: ಭಾರತ-ಯುಎಇ ವಿಮಾನ ದರ ಹೆಚ್ಚಳಕ್ಕೆ ಆಕ್ರೋಶ: ಕೇಸ್ ದಾಖಲಿಸಿದ NRI ಅಸೋಸಿಯೇಶನ್

ವಿದೇಶಿ ವ್ಯಕ್ತಿ ನಂತರ ಕ್ಯಾಮರಾದಲ್ಲಿ ತನ್ನ ಮುಖವನ್ನು ತೋರಿಸುತ್ತಾ, "ಈ ವ್ಯಕ್ತಿ ಯುರೋಪ್‌ನಲ್ಲಿ ಪ್ರಯಾಣಿಸುತ್ತಿದ್ದಾನೆ. ಅವನನ್ನು ಹೊರಗೆ ಓಡಿಸಬೇಕು. ನೀವು ಆಕ್ರಮಣಕಾರರು. ನಿಮ್ಮ ದೇಶಕ್ಕೆ ಹೋಗಿ ಆಕ್ರಮಣಕಾರರೇ" ಎಂದು ಅವರು ಹೇಳುವುದನ್ನು ಕೇಳಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News