elephant viral video : ಆನೆ  ಮರಿ ನೋಡಲು ಬಹಳ ಮುದ್ದಾಗಿರುತ್ತದೆ. ಆನೆ  ಅತಿ ಬುದ್ದಿವಂತ ಪ್ರಾಣಿ ಕೂಡಾ. ಇದು ಮನುಷ್ಯನಿಗೆ ಅನೇಕ ರೀತಿಯಲ್ಲಿ ಸಹಕಾರಿ. ಆನೆಗಳನ್ನು ಅನೇಕ ಸಿನಿಮಾಗಳಲ್ಲಿಯೂ ಬಳಸಲಾಗಿದೆ. ಆನೆಯನ್ನು ಸಾಮಾನ್ಯವಾಗಿ ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಇದರ ಆಟ ನೋಡಲು ಬಲು ಚೆಂದ.ಆದರೆ ಆನೆಗೆ ಮದ ಏರಿತು ಎಂದರೆ ಅದು ತನ್ನನ್ನು ಸಾಕುವ ಮಾವುತನನ್ನು ಕೂಡಾ ಬಿಡುವುದಿಲ್ಲ. 


COMMERCIAL BREAK
SCROLL TO CONTINUE READING

ಮನುಷ್ಯರಿಗೆ ಆರೋಗ್ಯದ ಬಗ್ಗೆ ಕಾಳಜಿ ಇರುವುದು ಸಹಜ. ಅದಕ್ಕಾಗಿ ಬೆಳಿಗ್ಗಿನ ವಾಕಿಂಗ್, ಜಾಗಿಂಗ್ ಹೀಗೆ ದೈಹಿಕ ಕಸರತ್ತುಗಳನ್ನು ಮಾಡುತ್ತಾರೆ. ಇಲ್ಲೊಂದು ಮರಿಯಾನೆ ಕೂಡಾ ಮನುಷ್ಯರಂತೆ ಜಾಗಿಂಗ್ ಹೊರಟಿದೆ. ಆ ಆನೆಯ ಮಾಲೀಕರು ಜಾಗಿಂಗ್ ಮಾಡುವಾಗ ಅವರ ಜೊತೆಗೆ ಈ ಪುಟ್ಟ ಗಜ ಕೂಡಾ ಹೆಜ್ಜೆ ಹಾಕಿದೆ. 


ಇದನ್ನೂ ಓದಿ : Viral Video: 3 ಗಂಟೆಗಳ ಕಾಲ ನಾಗರ ಹಾವುಗಳ ಮಿಲನ.. ಇಮ್ರಾನ್ ಹಶ್ಮಿಗಿಂತಲೂ ರೊಮ್ಯಾಂಟಿಕ್ ವಿಡಿಯೋ!


ಹೌದು, ಆನೆ ಮುಂಜಾನೆ ಜಾಗಿಂಗ್ ನಲ್ಲಿ ತೊಡಗಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಇದರಲ್ಲಿ ಇಬ್ಬರು ಜಾಗಿಂಗ್ ಮಾಡುವುದನ್ನು ಕಾಣಬಹುದು. ಅವರಿಬ್ಬರ ಮಧ್ಯೆ ಈ ಆನೆ ಮರಿ ಕೂಡಾ ಓಡೋಡಿ ಬರುತ್ತದೆ. ಪಾಪ ಮೊದಲಿಗೆ ಓಡುವುದು ಕಷ್ಟವಾಗಿ ಆ ಮರಿ ಬಿದ್ದು ಬಿಡುತ್ತದೆ. ನಂತರ ಮತ್ತೆ ಎದ್ದು ನಿಂತು ಓಟಕ್ಕೆ ನಿಲ್ಲುತ್ತದೆ. 


ತನ್ನ ಜೊತೆಗಿದ್ದವರನ್ನು ಹಿಂದಿಕ್ಕಿ ಓಡುತ್ತದೆ. ತಾನು ಏನೋ  ಸಾಧನೆ ಮಾಡಿದೆ ಎನ್ನುವ ಭಾವ ಆ ಆನೆ  ಮುಖದಲ್ಲಿ ಕಾಣಿಸುತ್ತದೆ. ತನಗೂ ಹೀಗೆ ಓಡಲು  ಸಾಧ್ಯ ಎನ್ನುವುದನ್ನು ಅರಿತ ಈ ಮರಿ ಸಂತೋಷದಿಂದ ತನ್ನ ಸೊಂಡಿಲನ್ನು ಬೀಸುತ್ತದೆ. 


ಆನೆ  ಮರಿ ಜಾಗಿಂಗ್ ವಿಡಿಯೋ : 


 


Viral Video: ಬಿದ್ದುಹೋದ ಮಗುವಿನ ಶೂ ಅನ್ನು ಸೊಂಡಿಲಿನಿಂದ ಎತ್ತಿಕೊಟ್ಟ ಮರಿಯಾನೆ: ಭಾವನಾತ್ಮಕ ವಿಡಿಯೋ


ಈ ವಿಡಿಯೋವನ್ನು Susanta Nanda ಎನ್ನುವವರು ತಮ್ಮ  ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ಅನೇಕ ಮಂದಿ ವೀಕ್ಷಿಸಿದ್ದಾರೆ. ಮೆಚ್ಚಿದ್ದಾರೆ.   


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz


Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ