ಹೂವು ಹಣ್ಣಿನ ಬದಲು ಈ ಗಿಡ ಬಿಡುತ್ತದೆ ಸಾವಿರ ಸಾವಿರ ಹಾವು ! ಇಲ್ಲಿದೆ ವಿಡಿಯೋ

Snake Garden Video :ಇಲ್ಲೊಂದು ಉದ್ಯಾನವನವಿದೆ. ಇಲ್ಲಿನ ಸಸಿಗಳನ್ನು ನೋಡಿದರೆ ಅಲ್ಲಿ ಹೂವೂ ಇಲ್ಲ ಹಣ್ಣೂ ಇಲ್ಲ. ಅಲ್ಲಿ ಇರುವುದು ಬರೀ ಹಾವುಗಳು, ಅದು ಕೂಡಾ ರಾಶಿ ರಾಶಿ ಹಾವುಗಳು.   

Written by - Ranjitha R K | Last Updated : Oct 4, 2023, 06:17 PM IST
  • ಮನೆಯ ಮುಂದೆ ಒಂದು ಉದ್ಯಾನವಿದ್ದರೆ ಮನೆಯ ಸೌಂದರ್ಯ ಹೆಚ್ಚುತ್ತದೆ.
  • ಇಲ್ಲಿಯ ಸಸಿಯ ತುಂಬೆಲ್ಲಾ ಹಾವುಗಳೇ ತುಂಬಿಕೊಂಡಿರುತ್ತವೆ.
  • ಮರದ ರೆಂಬೆ ಕೊಂಬೆಗಳಲೆಲ್ಲಾ ಹಾವು
ಹೂವು ಹಣ್ಣಿನ ಬದಲು ಈ  ಗಿಡ ಬಿಡುತ್ತದೆ ಸಾವಿರ ಸಾವಿರ ಹಾವು ! ಇಲ್ಲಿದೆ ವಿಡಿಯೋ title=

Snake Garden Video : ಮನೆಯ ಮುಂದೆ ಒಂದು ಉದ್ಯಾನವಿದ್ದರೆ ಮನೆಯ ಸೌಂದರ್ಯ ಹೆಚ್ಚುತ್ತದೆ. ಮನಸ್ಸಿಗೆ ಬೇಸರವಾದಾಗ ಉದ್ಯಾನವನದ ಬಳಿ ಹೋಗಿ ಕುಳಿತರೆ ಸಾಕು ಮನಸ್ಸಿನ ನೋವು ಹಾಗೆಯೇ ಕರಗಿ ಹೋಗುತ್ತದೆ. ಉದ್ಯಾನ ಅಥವಾ ಗಾರ್ಡನ್ ಅಂದ ಕೂಡಲೇ ಅಲ್ಲಿ ವಿಧ ವಿಧದ ಹೂವಿನ ಸಸಿಗಳು ಕಣ್ಣ ಮುಂದೆ ಬಂದು ಬಿಡುತ್ತವೆ. ಇಲ್ಲ ಸ್ವಲ್ಪ ದೊಡ್ಡ ತೋಟ ಎಂದರೆ ಅಲ್ಲಿ ಬೇರೆ ಬೇರೆ ವಿಧದ ಹಣ್ಣುಗಳ ಮರವಿರುತ್ತದೆ. ಇದು ಸಹಜವಾಗಿ ಉದ್ಯಾನ, ತೋಟ ಅಂದ ಕೂಡಲೇ ಮನಸ್ಸಿನಲ್ಲಿ ಮೂಡುವ ದೃಶ್ಯ. 

ಆದರೆ ಇಲ್ಲೊಂದು ಉದ್ಯಾನವನವಿದೆ. ಇಲ್ಲಿನ ಸಸಿಗಳನ್ನು ನೋಡಿದರೆ ಅಲ್ಲಿ ಹೂವೂ ಇಲ್ಲ ಹಣ್ಣೂ ಇಲ್ಲ. ಅಲ್ಲಿ ಇರುವುದು ಬರೀ ಹಾವುಗಳು, ಅದು ಕೂಡಾ ರಾಶಿ ರಾಶಿ ಹಾವುಗಳು. ಇಲ್ಲಿಯ ಸಸಿಯ ತುಂಬೆಲ್ಲಾ ಹಾವುಗಳೇ ತುಂಬಿಕೊಂಡಿರುತ್ತವೆ.  ಹೌದು ಈ ಮಾತು ಕೇಳುವುದಕ್ಕೆ ವಿಚಿತ್ರ ಎಂದೆನಿಸಿದರೂ ಸತ್ಯ. ವಿಯೆಟ್ನಾಂನಲ್ಲಿ ವಿಶಿಷ್ಟವಾದ ಹಾವಿನ ಉದ್ಯಾನವಿದೆ. ಇದನ್ನು ಟ್ರೈ ರಾನ್ ಡಾಂಗ್ ಟಾಮ್ ಎಂದು ಕರೆಯಲಾಗುತ್ತದೆ.  12 ಹೆಕ್ಟೇರ್‌ಗಳಷ್ಟು ವಿಸ್ತಾರವಾಗಿರುವ ಈ ತೋಟದ ಗಿಡಗಳ ತುಂಬಾ ಹಾವೇ ಇರುವುದು. 

ಇದನ್ನೂ ಓದಿ : Viral Video: ಮಾರ್ಗ ಮಧ್ಯೆ ಕೋಲಿನಂತೆ ನೆಟ್ಟಗೆ ಎದ್ದು ನಿಂತ ನಾಗರ! ಮೈನವಿರೇಳಿಸೋ ವಿಡಿಯೋ

 ಮರದ ರೆಂಬೆ ಕೊಂಬೆಗಳಲೆಲ್ಲಾ ಹಾವು  : 
ಈ ಗಾರ್ಡನ್ ಬಹಳ ವಿಶೇಷವಾದದ್ದು. ಏಕೆಂದರೆ ಇಲ್ಲಿರುವ ಸಸಿಯ ರೆಂಬೆ ಕೊಂಬೆಗಳಲ್ಲಿ ಹಣ್ಣುಗಳ ಬದಲಿಗೆ ಹಾವುಗಳಿವೆ. ಕೊಂಬೆಗಳ ಮೇಲೆ ಹಾವುಗಳೇ  ನೇತಾಡುತ್ತದೆ. ಇಲ್ಲಿ  400ಕ್ಕೂ ಹೆಚ್ಚು ಜಾತಿಯ ವಿಷಕಾರಿ ಹಾವುಗಳಿವೆ. ಈ ಹಾವುಗಳನ್ನು ಅವುಗಳ ವಿಷಕ್ಕಾಗಿಯೇ ಸಾಕಲಾಗುತ್ತದೆ. ಇದನ್ನು ಔಷಧಗಳು ಮತ್ತು ಆಂಟಿ ಡಾಟ್ಸ್  ಉತ್ಪಾದಿಸಲು ಬಳಸಲಾಗುತ್ತದೆ. 

ಇಲ್ಲಿದೆ ಸ್ನೇಕ್ ಗಾರ್ಡನ್ ವೀಡಿಯೊ  : 

ಇದನ್ನೂ ಓದಿ : Viral Video: ಸಾರಾಯಿ ಕುಡಿದು ರಸ್ತೆಯಲ್ಲಿ ಮಂಗನಾಟ: ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ವಿಡಿಯೋ

 ಇವುಗಳ ವಿಷದಿಂದಲೇ ಅನೇಕರಿಗೆ ಜೀವದಾನ : 
ಈ ಸ್ಥಳವು ಸಂಶೋಧನೆ ಆಧಾರಿತವಾಗಿದೆ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಡಾಂಗ್ ಟಾಮ್ ಸ್ನೇಕ್ ಫಾರ್ಮ್‌ಗೆ ಭೇಟಿ ನೀಡುತ್ತಾರೆ. ಮರದ ಕೊಂಬೆಗಳಿಂದ ನೇತಾಡುವ ಹಾವುಗಳನ್ನು ಕಂಡು  ಮಂತ್ರಮುಗ್ಧರಾಗುತ್ತಾರೆ.  ಪ್ರತಿ ವರ್ಷ ಸುಮಾರು 1,500 ಜನರು ಹಾವಿನ ದಾಳಿಗೆ ಒಳಗಾದ ನಂತರ ಡಾಂಗ್ ಟಾಮ್ ಸ್ನೇಕ್ ಫಾರ್ಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಾರೆ. ವಿಶೇಷ ಚಿಕಿತ್ಸೆಗಳ ಲಭ್ಯತೆ ಮತ್ತು ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಯು ಹಾವು ಕಡಿತದ ಘಟನೆಗಳನ್ನು ನಿಭಾಯಿಸುವಲ್ಲಿ ಪ್ರಮುಖ ಕೊಡುಗೆ ನೀಡುತ್ತದೆ.  ಸಾಮಾಜಿಕ ಜಾಲತಾಣಗಳಲ್ಲಿ ಟ್ರಿನ್ ಡ್ಯಾಂಗ್ ಟಾಮ್ ಹಾವಿನ ಸಾಕಣೆಯ ವಿಡಿಯೋ ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News