Peahen and Peacock:ನವಿಲು ನಮ್ಮ ರಾಷ್ಟ್ರೀಯ ಪಕ್ಷಿ. ಇದರ ಸೌಂದರ್ಯದಿಂದಲೇ ಎಂಥವರನ್ನು ಕೂಡಾ ಮಂತ್ರ ಮುಗ್ದಗೊಳಿಸಬಲ್ಲ ಪಕ್ಷಿ. ಇನ್ನು ನವಿಲುಗಳು ಎಂದಿಗೂ ಸಂಬಂಧಗಳನ್ನು ರೂಪಿಸುವುದಿಲ್ಲ ಎನ್ನುವ ಮಾತಿದೆ. ಕೆಲ ಸಮಯದ ಹಿಂದೆ, ಪ್ರಸಿದ್ಧ ವ್ಯಕ್ತಿಯೊಬ್ಬರು ಬೃಹತ್ ಜನಸಮೂಹದ ಸಮ್ಮುಖದಲ್ಲಿ ಒಂದು ಹೇಳಿಕೆ ನೀಡಿದ್ದರು. ಆ ಹೇಳಿಕೆ ಪ್ರಕಾರ,  ನವಿಲು ಅತ್ತಾಗ ಅದರ ಕಣ್ಣೀರು ಬೀಳುತ್ತದೆ,ಆ ಕಣ್ಣೀರನ್ನು ಹೆಣ್ಣು ನವಿಲು ಕುಡಿದಾಗ ಗರ್ಭ ಧರಿಸುತ್ತದೆ ಎಂದು. ಇದು ಕೇಳುವುದಕ್ಕೆ ನಿಜವಾಗಿಯೂ ಆಶ್ಚರ್ಯ ಎನಿಸುವ ಹಾಗೆಯೇ ಇದೆ. ಹಾಗಿದ್ದರೆ ಗಂಡು ನವಿಲಿನ ಕಣ್ಣೀರು ಸೇವಿಸಿಯೇ ಹೆಣ್ಣು ನವಿಲು ಗರ್ಭ ಧರಿಸುವುದೇ?  


COMMERCIAL BREAK
SCROLL TO CONTINUE READING

ಸತ್ಯ ಬಹಿರಂಗ :
ಇದು ಇಂಟರ್ನೆಟ್ ಯುಗ. ಇಲ್ಲಿ ಎಲ್ಲವೂ ದಾಖಲೆಗಳಲ್ಲಿಯೇ ಸಿಗುತ್ತವೆ.ಮೊಬೈಲ್ ಕ್ಯಾಮೆರಾಗಳ ಯುಗದಲ್ಲಿ, ಎಲ್ಲಾ ಗೊಂದಲಗಳಿಗೂ ವಿಡಿಯೋ ಮೂಲಕವೇ ಪರಿಹಾರ ಸಿಗುತ್ತದೆ. ಹಾಗೆಯೇ ನವಿಲು ಮೊಟ್ಟೆ ಇಡುವುದಕ್ಕೆ ಗಂಡು ನವಿಲಿನ ಕಣ್ಣೀರು ಕಾರಣಾನಾ ಎನ್ನುವ ಮಾತಿನ ಹಿಂದಿನ ರಹಸ್ಯ ಕೂಡಾ ವಿಡಿಯೋ ಮೂಲಕವೇ ಹೊರ ಬಿದ್ದಿದೆ.  


ಇದನ್ನೂ ಓದಿ : ಪ್ರಾಣಿಗಳೇ ಗುಣದಲಿ ಮೇಲು..! ಹಾವಿಗೆ ಮುತ್ತು ನೀಡಿದ ಎಮ್ಮೆ.. ಮುಗ್ದ ಪ್ರೀತಿಗೆ ಕರಗಿದ ನಾಗಪ್ಪ ಮಾಡಿದ್ದೇನು ಗೊತ್ತೇ?! ವಿಡಿಯೋ ನೋಡಿ


ಪ್ರಾಣಿಶಾಸ್ತ್ರದ ತಜ್ಞರ ಪ್ರಕಾರ,ಕೆಲವು ಪಕ್ಷಿಗಳು ವಿಶೇಷ ರೀತಿಯ 'ಕಿಸ್'ಮೂಲಕ ಸಂಬಂಧಗಳನ್ನು ರೂಪಿಸುತ್ತವೆ.ಈ ಪ್ರಕ್ರಿಯೆಯನ್ನು ಕ್ಲೋಕಲ್ ಕಿಸ್ ಎಂದು ಕರೆಯಲಾಗುತ್ತದೆ.ಅನೇಕ ವನ್ಯಜೀವಿ ಛಾಯಾಗ್ರಾಹಕರು ನವಿಲಿನ ಮಿಲನದ ಫೋಟೋ ವೀಡಿಯೊಗಳನ್ನು ಮಾಡಿದ್ದಾರೆ.ನವಿಲಿನ ಸಂತಾನೋತ್ಪತ್ತಿ ವಿಧಾನ ಇತರ ಪಕ್ಷಿಗಳಂತೆಯೇ ಇರುತ್ತದೆ. ನವಿಲುಗಳು ಸೇರಿದಂತೆ ಅನೇಕ ಪಕ್ಷಿಗಳು ಜೊತೆಯಾದಾಗ,ಗಂಡು ಹಕ್ಕಿ ಹೆಣ್ಣಿನ ಹಿಂಭಾಗದಲ್ಲಿ ಸವಾರಿ ಮಾಡುತ್ತದೆ. ಈ ಸಮಯದಲ್ಲಿ ಗಂಡು ತನ್ನ ವೀರ್ಯವನ್ನು ಹೆಣ್ಣಿನ ದೇಹಕ್ಕೆ ವರ್ಗಾಯಿಸುತ್ತದೆ. 


ವಿಡಿಯೋ :


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.