elephant video : ಆನೆ ಅತಿ ಬುದಿವಂತ ಜೀವಿ. ಆನೆಗೆ ಭಾವನೆ ಜಾಸ್ತಿ. ಹಾಗಾಗಿಯೇ ಮಾನವರೊಂದಿಗೆ ಅದರ ಒಡನಾಟ ಕೂಡಾ ಹೆಚ್ಚು.ಆನೆಗಳು ಭೂಮಿಯಲ್ಲಿ ವಾಸಿಸುವ ಅತಿದೊಡ್ಡ ಪ್ರಾಣಿಗಳು.ಕಾಡಿನಲ್ಲಿ ಆನೆಗಳು 70 ವರ್ಷಗಳವರೆಗೆ ಬದುಕಬಲ್ಲವು. ಸ್ಪರ್ಶ, ದೃಷ್ಟಿ, ವಾಸನೆ ಮತ್ತು ಧ್ವನಿಯ ಮೂಲಕ ಆನೆಗಳು ಸಂವಹನ ನಡೆಸುತ್ತವೆ.
ಇತ್ತೀಚಿನ ದಿನಗಳಲ್ಲಿ ಆನೆಗಳು ಕಾಡಿನಿಂದ ನಾಡಿಗೆ ಬರುತ್ತಿರುವ ವಿಚಾರಾ ಸಾಮಾನ್ಯವಾಗಿ ಬಿಟ್ಟಿದೆ.ಹೆಚ್ಚಾಗಿ ಆಹಾರವನ್ನು ಅರಸಿಕೊಂಡೆ ಅವುಗಳು ನಾಡಿನತ್ತ ಹೆಜ್ಜೆ ಹಾಕುತ್ತವೆ. ಮೊದಲೇ ಹೇಳಿದ ಹಾಗೆ ಆನೆಗಳು ವಾಸನೆಯನ್ನು ತುಂಬಾ ಚೆನ್ನಾಗಿ ಗ್ರಹಿಸುತ್ತವೆ.
ಇದನ್ನೂ ಓದಿ : ಏರ್‌ಪೋರ್ಟ್ ರನ್‌ವೇಯಲ್ಲಿ ಹಾವನ್ನು ಅಟ್ಯಾಕ್ ಮಾಡಿದ 3 ಮುಂಗುಸಿಗಳು: ವಿಡಿಯೋ ವೈರಲ್
ಇದೀಗ ಆನೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅನೆ ಗ್ರೌಂಡ್ ಫ್ಲೋರ್ ನಲ್ಲಿ ನಿಂತುಕೊಂದಿರುವುದನ್ನು ಕಾಣಬಹುದು. ಆದ್ರೆ ಅದು ಒಂದನೇ ಮಹಡಿಯ ಅಡುಗೆಯ ಮನೆಯಿಂದ ಬರುವ ಅಡುಗೆಯ ಘಮವನ್ನು ಗುರುತಿಸಿ ಬಿಟ್ಟಿದೆ. ಹಾಗಾಗಿ ಗ್ರೌಂಡ್ ಫ್ಲೋರ್ ನಿಂದ ಒಂದನೇ ಮಹಡಿಯ ಅಡುಗೆ ಮನೆಗೆ ತನ್ನ ಸೊಂಡಿಲನ್ನು ಚಾಚಿದೆ.
ಇಲ್ಲಿದೆ ವಿಡಿಯೋ :
Reaching to the 1st floor…
With two thousands kg plus weight on the hind limbs, the sense of addiction to human food must have been gigantic 😳 pic.twitter.com/yllj7i9r3p— Susanta Nanda (@susantananda3) August 4, 2024
ಇದನ್ನೂ ಓದಿ : Viral Video: ವಿಭಿನ್ನ ನವಿಲಿನ ಅದ್ಭುತ ದೃಶ್ಯ ಕಣ್ತುಂಬಿಕೊಂಡ ನೆಟ್ಟಿಗರು! ಇದನ್ನು ನೋಡಿದ ಜನರೆ ಅದೃಷ್ಟವಂತರು
ತನ್ನ ಇಡೀ ದೇಹದ ಭಾರವನ್ನು ಎರಡೇ ಕಾಲಿನಲ್ಲಿ ಬಿಟ್ಟು ಎರಡು ಕಾಲನ್ನು ಮೇಲಕೆತ್ತಿ ಹೇಗೂ ಸರ್ಕಸ್ ಮಾಡಿ ಅಡುಗೆ ಮನೆಯಿಂದ ಆಹಾರ ತೆಗೆದುಕೊಳ್ಳುವಲ್ಲಿ ಸಕ್ಸಸ್ ಆಗಿದೆ. ಆನೆಯ ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ವೈರಲ್ ಆಗಿದೆ.
ಈ ವಿಡಿಯೋ ವೀಕ್ಷಿದವರು ಕೂಡಾ ಆನೆಯ ಬುದ್ದಿವಂತಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಸುಶಾಂತ್ ನಂದ ಎನ್ನುವವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.