Viral News : ಮಾನವನ ಅತಿಯಾಸೆ, ಕ್ರೌರ್ಯಕ್ಕೆ ಮೂಕ ಪ್ರಾಣಿಗಳು ಬಲಿಯಾಗುತ್ತಲೇ ಇವೆ. ಕಾಂಕ್ರೀಟ್‌ ಕಾಡಿನ ಮಧ್ಯ ಅಲ್ಲಲ್ಲಿ ಉಳಿದಿರುವ ಮರಗಳ ಮೇಲೆ ಪುಟ್ಟ ಗೂಡು ಕಟ್ಟಿಕೊಂಡು ವಾಸವಿರುವ ಹಕ್ಕಿಗಳ ತಾಣಕ್ಕೂ ಮಾನವನ ವಕ್ರ ದೃಷ್ಟಿ ಬಿದ್ದಿದೆ. ಇದಕ್ಕೆ ಉದಾರಹಣೆಯಂತೆ ಕೇರಳದ ಮಲಪ್ಪುರಂನಲ್ಲಿ ನಡೆದ ಘಟನೆಯ ವಿಡಿಯೋ ಮನಕಲಕುವಂತಿದೆ.


COMMERCIAL BREAK
SCROLL TO CONTINUE READING

ಹೌದು, ಐಎಫ್​ಎಸ್​ ಅಧಿಕಾರಿ ಪರವೀನ್ ಕಸ್ವಾನ್ ಅವರು ತಮ್ಮ ಟ್ಟೀಟರ್‌ನಲ್ಲಿ ವಿಡಿಯೋ ಒಂದು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಬೃಹತ್ ಮರವನ್ನು ಬುಡಸಮೇತ ನೆಲಕ್ಕುರುಳಿಸಿದಾಗ ಅದರಲ್ಲಿದ್ದ ಸಾಕಷ್ಟು ಹಕ್ಕಿಮರಿಗಳು ಸಾವನ್ನಪ್ಪಿದ ಹೃದಯವಿದ್ರಾವಕ  ದೃಶ್ಯವನ್ನು ನೋಡಿದ್ರೆ ಎಂತವರ ಕಣ್ಣಂಚಿನಲ್ಲಿ ನೀರು ಬಾರದೆ ಇರದು.


ಇದನ್ನೂ ಓದಿ: Viral News: ಹೆಂಡತಿಯ ತೂಕ ಹೆಚ್ಚಾಗಿದ್ದಕ್ಕೆ ಕೋಪಗೊಂಡು ವಿಚ್ಛೇದನ ನೀಡಿದ ಪತಿ!


44 ಸೆಕೆಂಡ್‌ ಇರುವ ವಿಡಿಯೋವನ್ನು ನೋಡಲು ನಿಜಕ್ಕೂ ಕಷ್ಟವಾಗುತ್ತದೆ. ಇನ್ನು ಜೀವ ಕಳೆದುಕೊಂಡ ಹಕ್ಕಿಗಳು, ಅವುಗಳ ಕಂದಮ್ಮಗಳ ನರಳಾಟವನ್ನು ನೀವೇ ಊಹಿಸಿಕೊಳ್ಳಿ. ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ವಿಡಿಯೋ ಮಲಪ್ಪುರಂ ಜಿಲ್ಲೆಯ ತಿರುರಂಗಡಿಯ ವಿಕೆ ಪಾಡಿಯಿಂದ ವರದಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಈ ಮರವನ್ನು ಜೆಸಿಬಿಯಿಂದ ನೆಲಕ್ಕುರುಳಿಸಿದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.


ಸಚಿವ ಎ.ಕೆ. ಸಸೀಂದ್ರನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜೆಸಿಬಿ ಚಾಲಕನನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಅಧಿಕೃತ ಪರವಾನಿಗೆ ಇಲ್ಲದೆ ಈ ಮರವನ್ನು ಕಡಿಯಲಾಗಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Viral Video: ಸ್ನೇಹಿತನ ಮೇಲೆ ಹೆಬ್ಬಾವು ದಾಳಿ: ಪ್ರಾಣ ಪಣಕ್ಕಿಟ್ಟು ಹಾವಿನೊಂದಿಗೆ ಹೋರಾಡಿದ ಜಿಂಕೆ, ಮುಂದೇನಾಯ್ತು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.