Viral Video: ಸ್ನೇಹಿತನ ಮೇಲೆ ಹೆಬ್ಬಾವು ದಾಳಿ: ಪ್ರಾಣ ಪಣಕ್ಕಿಟ್ಟು ಹಾವಿನೊಂದಿಗೆ ಹೋರಾಡಿದ ಜಿಂಕೆ, ಮುಂದೇನಾಯ್ತು!

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಈ ಸ್ನೇಹದ ಕಥೆ ಜನರ ಹೃದಯವನ್ನು ಮುಟ್ಟುತ್ತಿದೆ. ಕೆಲವು ಸೆಕೆಂಡುಗಳ ಈ ವೀಡಿಯೊ ಜನರ (ಸಾಮಾಜಿಕ ಮಾಧ್ಯಮ ಬಳಕೆದಾರರ) ಕಣ್ಣುಗಳಲ್ಲಿ ನೀರುಬರುವಂತೆ ಮಾಡಿದೆ.

Written by - Bhavishya Shetty | Last Updated : Sep 2, 2022, 12:28 PM IST
    • ಜಿಂಕೆ ಮೇಲೆ ದಾಳಿ ನಡೆಸಿದ ಹೆಬ್ಬಾವು
    • ಸ್ನೇಹಿತನನ್ನು ಕಾಪಾಡಲು ಹೋರಾಡಿದ ಜಿಂಕೆ
    • ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಕಾಣಿಸಿಕೊಂಡಿದೆ
Viral Video: ಸ್ನೇಹಿತನ ಮೇಲೆ ಹೆಬ್ಬಾವು ದಾಳಿ: ಪ್ರಾಣ ಪಣಕ್ಕಿಟ್ಟು ಹಾವಿನೊಂದಿಗೆ ಹೋರಾಡಿದ ಜಿಂಕೆ, ಮುಂದೇನಾಯ್ತು!  title=
Python

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಕಿತ್ತಾಟದ ವಿಡಿಯೋ ನಾವೆಲ್ಲರೂ ನೋಡಿರುತ್ತೇವೆ. ಹಾವುಗಳು ಜಗಳವಾಡುವ ವಿಡಿಯೋಗಳ ಸಹ ಇಂಟರ್ನೆಟ್ನಲ್ಲಿ ಕಂಡುಬರುತ್ತವೆ, ಆದರೆ ಇಂತಹ ಆಘಾತಕಾರಿ ವಿಡಿಯೋವನ್ನು ನೀವು ನೋಡಿರಲು ಸಾಧ್ಯವಿಲ್ಲ. ಹಾವಿನ ಹೆಸರನ್ನು ಕೇಳಿದರೆ ಸಾಕು ಅನೇಕ ಜನರು ಭಯಭೀತರಾಗಲು ಪ್ರಾರಂಭಿಸುತ್ತಾರೆ. ಅಂತಹವರು ಈ ವಿಡಿಯೋವನ್ನು ನೋಡುವಾಗ ಬೆಚ್ಚಿ ಬೀಳುವುದು. ಹೌದು ಅಪಾಯಕಾರಿ ಹೆಬ್ಬಾವು ಜಿಂಕೆಯ ಮೇಲೆ ದಾಳಿ ಮಾಡುತ್ತದೆ. ಆ ಬಳಿಕ ಏನಾಗುತ್ತದೆ ಎಂದು ಮುಂದೆ ನೋಡೋಣ. 

ಇದನ್ನೂ ಓದಿ: Viral Video : ಸದ್ದಿಲ್ಲದೆ ಮರಿಗಳ ನುಂಗಿದ ಹಾವು, ಕರುಳು ಹಿಂಡುವಂತಿದೆ ತಾಯಿ ಪಕ್ಷಿಯ ರೋಧನೆ

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಕಾಣಿಸಿಕೊಂಡಿದೆ. ಇದು ನಿಮ್ಮ ಕಣ್ಣುಗಳಲ್ಲಿ ನಂಬಲು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಇದೆ. ಈ ವೀಡಿಯೋ ನೋಡಿದ ನಂತರ ನೀವೂ ಜಿಂಕೆಯ ಧೈರ್ಯವನ್ನು ಹೊಗಳುತ್ತೀರಿ.  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಟ್ರೆಂಡಿಂಗ್ ವಿಡಿಯೋವನ್ನು ಮೊದಲು ನೋಡಿ.

ವಾಸ್ತವವಾಗಿ ಈ ವಿಡಿಯೋದಲ್ಲಿ ಅಪಾಯಕಾರಿ ಹೆಬ್ಬಾವು ಜಿಂಕೆಯನ್ನು ಬೇಟೆಯಾಡುತ್ತಿರುವುದನ್ನು ಕಾಣಬಹುದು. ಆದರೆ ನಂತರ ಈ ಜಿಂಕೆಯ ಸ್ನೇಹಿತ ಬಂದು ಅದನ್ನು ಕಾಪಾಡಲು ಪ್ರಯತ್ನಿಸುತ್ತದೆ. ಇಷ್ಟೇ ಅಲ್ಲ, ಜಿಂಕೆ ತನ್ನ ಸ್ನೇಹಿತನ ಜೀವವನ್ನು ಉಳಿಸಲು ತನ್ನ ಜೀವವನ್ನು ಪಣಕ್ಕಿಡುತ್ತದೆ. ಹೆಬ್ಬಾವು ಹಿಡಿದ ಜಿಂಕೆ ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ನೋಡಿ ಕೆಲವರ ಕಣ್ಣುಗಳಲ್ಲಿ ನೀರು ಬಂದಿದೆ. 

 

 

ಇದನ್ನೂ ಓದಿ: Viral Video: ಮದುವೆ ಮಂಟಪಕ್ಕೆ ಗನ್ ಹಿಡಿದುಕೊಂಡು ಹೋದ ವಧು: ವೇದಿಕೆ ಮೇಲೆಯೇ ಫೈರಿಂಗ್ ಮಾಡಿಬಿಟ್ಳು!

ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಈ ಸ್ನೇಹದ ಕಥೆ ಜನರ ಹೃದಯವನ್ನು ಮುಟ್ಟುತ್ತಿದೆ. ಕೆಲವು ಸೆಕೆಂಡುಗಳ ಈ ವೀಡಿಯೊ ಜನರ (ಸಾಮಾಜಿಕ ಮಾಧ್ಯಮ ಬಳಕೆದಾರರ) ಕಣ್ಣುಗಳಲ್ಲಿ ನೀರುಬರುವಂತೆ ಮಾಡಿದೆ. ಈ ವಿಡಿಯೋವನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News