ಉಡುಪಿಯಲ್ಲಿ ಮತ್ತೊಮ್ಮೆ ಅಪರೂಪದ ಕರಿ ಚಿರತೆ ಪತ್ತೆ
Viral News: ಮಂದರ್ತಿ ಸಮೀಪದ ಶಿರೂರು ಹೆಮ್ಮಣಿಕೆ ಎಂಬಲ್ಲಿ ಶೇಖರ್ ಶೆಟ್ಟಿ ಎನ್ನುವವರ ರಬ್ಬರ್ ತೋಟದ ಸಮೀಪವೇ ಇರುವ ಕೃಷ್ಣ ನಾಯ್ಕ ಎಂಬುವರ ಜಾಗದಲ್ಲಿರುವ ತೆರೆದ ಬಾವಿಗೆ ತಡರಾತ್ರಿ ಕರಿ ಚಿರತೆ ಬಿದ್ದಿರಬಹುದು ಎನ್ನಲಾಗಿದೆ.
Black Leopard: ಉಡುಪಿಯಲ್ಲಿ ಮತ್ತೊಮ್ಮೆ ಅಪರೂಪದ ಕರಿ ಚಿರತೆ (Black Leopard) ಯೊಂದು ಪತ್ತೆಯಾಗಿದೆ. ಬೇಟೆ ಅರಸಿ ಬಂದ ಈ ಚಿರತೆ (Leopard) ಬಾವಿಗೆ ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದೆ. ಇಲ್ಲಿನ ಮಂದರ್ತಿ ಸಮೀಪದ ಶಿರೂರು ಹೆಮ್ಮಣಿಕೆ ಎಂಬಲ್ಲಿ ಈ ಘಟನೆ ನಡೆದಿದೆ.
ಇಲ್ಲಿನ ಸ್ಥಳೀಯ ನಿವಾಸಿ ಶೇಖರ್ ಶೆಟ್ಟಿ ಎನ್ನುವವರ ರಬ್ಬರ್ ತೋಟದ ಸಮೀಪವೇ ಇರುವ ಕೃಷ್ಣ ನಾಯ್ಕ ಎಂಬುವರ ಜಾಗದಲ್ಲಿರುವ ತೆರೆದ ಬಾವಿಯಲ್ಲಿ ಕರಿ ಚಿರತೆ (Black Leopard) ಬಿದ್ದಿದೆ. ಸಂಜೆ ವೇಳೆಗೆ ಬಾವಿಯಲ್ಲಿ ಚಿರತೆ (Leopard) ಬಿದ್ದ ಬಗ್ಗೆ ತಿಳಿದ ತಕ್ಷಣ ಶೇಖರ್ ಶೆಟ್ಟಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ- Leopard Hunt Viral Video: ಚಿರತೆಯನ್ನು ವಿಶ್ವದ ಅತ್ಯುತ್ತಮ ಬೇಟೆಗಾರ ಎನ್ನಲು ಇದೊಂದು ನಿದರ್ಶನ!
ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು (Forest Department officials) ಬಾವಿ ಸುತ್ತ ಬಲೆ ಹಾಕಿ ಕರಿ ಚಿರತೆ ರಕ್ಷಣೆಗೆ ಮುಂದಾಗಿದ್ದಾರೆ. ಆದಾಗ್ಯೂ, ಕಾರ್ಯಾಚರಣೆ ವೇಳೆ ಚಿರತೆ ಬಲೆಯಿಂದ ಸರಿದು ಸಮೀಪದ ತೋಟದೊಳಕ್ಕೆ ಓಡಿ ಹೋಯಿತು ಎನ್ನಲಾಗಿದೆ. ಈ ಮೂಲಕ ಕರಿ ಚಿರತೆ ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆ ಬಂದು ಕಾಡು ಪ್ರದೇಶ ಸೇರಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ- ಬಿಳಿಗಿರಿರಂಗನ ಬೆಟ್ಟದ ಮುಖ್ಯ ರಸ್ತೆ ಬಳಿಯೇ ಗಜರಾಜನ ಆರ್ಭಟ- ಆತಂಕದಲ್ಲಿ ಜನ
ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ ನಿರ್ದೇಶನದಲ್ಲಿ ಶಂಕರ ನಾರಾಯಣ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ, ಉಪವಲಯ ಅರಣ್ಯಾಧಿ ಕಾರಿ ನಾಗರಾಜ ಮತ್ತು ಸಿಬ್ಬಂದಿ, ಸ್ಥಳೀಯರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.