Leopard Hunt Viral Video: ಚಿರತೆಯನ್ನು ವಿಶ್ವದ ಅತ್ಯುತ್ತಮ ಬೇಟೆಗಾರ ಎನ್ನಲು ಇದೊಂದು ನಿದರ್ಶನ!

Leopard Hunt Viral Video: ಬೆಕ್ಕಿನ ಕುಟುಂಬಕ್ಕೆ ಸೇರಿದ ಚಿರತೆಯನ್ನು ವಿಶ್ವ್ಕದ ಅತ್ಯುತ್ತಮ ಬೇಟೆಗಾರ ಎಂದು ಹೇಳಲಾಗುತ್ತದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಇದಕ್ಕೆ ಕನ್ನಡಿ ಹಿಡಿದಂತಿದೆ. 

Written by - Yashaswini V | Last Updated : Jun 7, 2024, 12:53 PM IST
  • ಜನವಸತಿ ಪ್ರದೇಶದಲ್ಲಿ ಚಿರತೆ ಬೇಟೆ
  • ಮನೆಯ ಕಾಂಪೌಂಡ್ ಮೇಲೆ ಕುಳಿತಿದ್ದ ಕೋಳಿ ಬೇಟೆಯಾಡಿದ ಚಿರತೆ
  • ಚಿರತೆ ಬೇಟೆಯಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Leopard Hunt Viral Video: ಚಿರತೆಯನ್ನು ವಿಶ್ವದ ಅತ್ಯುತ್ತಮ ಬೇಟೆಗಾರ ಎನ್ನಲು ಇದೊಂದು ನಿದರ್ಶನ! title=

Leopard Hunt Viral Video: ಬೆಕ್ಕಿನ ಕುಟುಂಬಕ್ಕೆ ಸೇರಿದ ಪ್ರಾಣಿಗಳನ್ನು ವಿಶ್ವದ ಅತ್ಯುತ್ತಮ ಬೇಟೆಗಾರರು ಎಂದು ಹೇಳಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಅವು  ತಮ್ಮ ಬೇಟೆ ಮಿಸ್ ಆಗದಂತೆ ಹೊಂಚು ಹಾಕಿ, ತಾಳ್ಮೆಯಿಂದ ಕಾದು ಬೇಟೆಯಾಡುತ್ತವೆ. ಚಿರತೆಯೂ ಕೂಡ ಬೆಕ್ಕಿನ ಕುಟುಂಬಕ್ಕೆ ಸೇರಿದ ಒಂದು ಪ್ರಾಣಿಯಾಗಿದ್ದು, ಇತ್ತೀಚೆಗೆ ಚಿರತೆ  ಬೇಟೆಯಾಡುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಹೌದು, ಚಿರತೆಗಳು (Leopard) ಅದ್ಭುತ, ನಿಗೂಢ ಮತ್ತು ಅತ್ಯಂತ ಚುರುಕಾದ ಬೇಟೆಗಾರರು. ಸಾಮಾನ್ಯವಾಗಿ ನೀವು ಸಫಾರಿಗಳಲ್ಲಿ, ವಿಚಿತ್ರ ಸಂದರ್ಭಗಳಲ್ಲಿ, ಅರಣ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಗಳು ಬೇಟೆಯಾಡುವ (Leopard Hunting)  ದೃಶ್ಯವನ್ನು ನೋಡಿರಬಹುದು. ಆದರೆ, ಇತ್ತೀಚೆಗೆ ಚಿರತೆಯೊಂದು ತಮಿಳುನಾಡಿನ ವಸತಿ ಪ್ರದೇಶದಲ್ಲಿ ಕೋಳಿಯನ್ನು ಬೇಟೆಯಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಇದನ್ನೂ ಓದಿ- Viral Video: ಸಿಕ್ಸರ್ ಬಾರಿಸಿ ಮೈದಾನದಲ್ಲೇ ಕುಸಿದುಬಿದ್ದು ಪ್ರಾಣಬಿಟ್ಟ ಯುವಕ!

ವೈರಲ್ ವಿಡಿಯೋದಲ್ಲಿ (Viral Video), ಸುಮಾರು 10 ಅಡಿ ಎತ್ತರದ ಕಾಂಪೌಂಡ್ ಮೇಲೆ ಕುಳಿತಿದ್ದ ಕೋಳಿಯನ್ನು ಚಿರತೆ ಹೇಗೆ ಬೇಟೆಯಾಡಿದೆ ಎಂಬುದನ್ನು ನೋಡಬಹುದು. ಮೊದಲಿಗೆ ಈ ವಿಡಿಯೋದಲ್ಲಿ ಜನವಸತಿ ಪ್ರದೇಶದಲ್ಲಿ ಇಕ್ಕೆಲಗಳಲ್ಲಿ ವಾಹನಗಳು ನಿಂತಿರುವುದನ್ನು ಕಾಣಬಹುದು. ಈ ವೇಳೆ ಮೊದಲಿಗೆ ಮನೆಯ ಕಾಂಪೌಂಡ್ ಗೋಡೆಯ ಮೇಲೆ ಕೋಳಿ ಕಾಣಿಸಿಕೊಳ್ಳುತ್ತದೆ. ಆಗ ತಕ್ಷಣವೇ ಎದುರುಬದಿಯಿಂದ ಚಿರತೆ ಬಂದು ಜಂಪ್ ಮಾಡಿ ಕೋಳಿಯನ್ನು ಹಿಡಿಯಲು ಪ್ರಯತ್ನಿಸುತ್ತದೆ. ಕೋಳಿ ತಕ್ಷಣ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆಯಾದರೂ ಯಾವುದೇ ಪ್ರಯೋಜನವಾಗುವುದಿಲ್ಲ. 

ಇದನ್ನೂ ಓದಿ- Viral Video: ʼಹಲೋ ಹುಲಿʼ ಎಂದ ಸಿಎಂ ಯೋಗಿಗೆ ಗುರ್‌..‌ ಗುರ್... ಎಂದ ವ್ಯಾಘ್ರ!

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ (Social Media)ಎಕ್ಸ್ ನಲ್ಲಿ ಸುದ್ದಿ ಸಂಸ್ಥೆ ಎಎನ್‌ಐ ಶೇರ್ ಮಾಡಿದೆ. ಇದರಲ್ಲಿ ತಮಿಳುನಾಡು: ಕೊಯಮತ್ತೂರಿನಲ್ಲಿ ಚಿರತೆಯೊಂದು ಕೋಳಿಯನ್ನು ಜಿಗಿದು ಹಿಡಿಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಬರೆಯಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News