Bride Bridegroom Fighting Video : ಮದುವೆ ಅಂದರೆ ಅಲ್ಲಿ ಎಲ್ಲಾ ರೀತಿಯ ದೃಶ್ಯಗಳು ಕಂಡುಬರುತ್ತವೆ. ಕೆಲವೊಮ್ಮೆ ವಧು ಮತ್ತು ವರರು ತಮ್ಮ ವಿಶಿಷ್ಟ ರೀತಿಯ ಎಂಟ್ರಿಯಿಂದ ಎಲ್ಲರ ಗಮನ ಸೆಳೆಯುತ್ತಾರೆ. ಇನ್ನು ಕೆಲವೊಮ್ಮೆ ಮನೆ ಮಂದಿ ವಧು ವರರಿಗೆ ನೀಡುವ ಸರ್ಪೈಸ್ ಮೂಲಕ  ಎಲ್ಲರನ್ನೂ ಬೆರಗಾಗಿಸುತ್ತಾರೆ.  ಇನ್ನು ಕೆಲವೊಮ್ಮೆ ಮದುವೆಯ ವಿಚಿತ್ರಗಳಿಂದಲೇ ಹೌ ಹಾರಿ ಬಿಡುತ್ತೇವೆ. ಒಮ್ಮೊಮ್ಮೆ ಮಾಡುವೆ ಮನೆಯಲ್ಲಿ ಗಂಡು ಹೆಣ್ಣಿನ ವರ್ತನೆಯೇ ವಿಚಿತ್ರವಾಗಿರುತ್ತವೆ. 


COMMERCIAL BREAK
SCROLL TO CONTINUE READING

ಮದುವೆ  ಎನ್ನುವುದು ಜೀವನದ ಪ್ರಮುಖ ಘಟ್ಟ.  ಹೆಣ್ಣಿಗಾಗಲೀ ,ಗಂಡಿಗಾಗಲಿ  ಮದುವೆಯ ದಿನ ಭಯ, ಆತಂಕ, ಸಂತೋಷ ಎಲ್ಲವೂ ಒಟ್ಟಿಗೆ ಆಗುತ್ತಿರುತ್ತದೆ. ಆ ಸಂದರ್ಭದಲ್ಲಿ ಹೆಣ್ಣು ಗಂಡು ಸ್ವಲ್ಪ ಸಂಕೋಚದಿಂದ ಇರುವುದು ಸಹಜ. ಆದರೆ ಕೆಲವೊಮ್ಮೆ ಕೆಲವು ಜೋಡಿಗಳನ್ನು ನೋಡುವಾಗ ಹೀಗೂ ಇರುತ್ತಾರಾ ಎಂದು ಹುಬ್ಬೇರಿ ಬಿಡುತ್ತದೆ. 


ಇದನ್ನೂ ಓದಿ : Viral Video: ಜೀನ್ಸ್ ತೊಟ್ಟು ಯುವತಿ ಕೆನ್ನೆಗೆ ಮುತ್ತಿಕ್ಕುವ ಚಿಂಪಾಂಜಿ


ಹೌದು ಈ ವಧು ವರರನ್ನು ನೋಡುವಾಗ ಇವರಿಗೆ ಮದುವೆ  ಮಾಡಲಾಗುತ್ತಿದೆಯೋ ಅಥವಾ ಕುಸ್ತಿ ಅಖಾಡಕ್ಕೆ ಇಳಿಸಲಾಗುತ್ತಿದೆಯೋ ಎಂಬ ಭಾವನೆ ಮೂಡುತ್ತದೆ. ಯಾಕಂದರೆ ಇಲ್ಲಿ ಮಾಡುವೆ ಶಾಸ್ತ್ರಗಳು ನಡೆಯುತ್ತಿವೆ ಎನ್ನುವುದು ಈ ವಿಡಿಯೋ ನೋಡುವಾಗ ತಿಳಿಯುತ್ತದೆ. ಇನ್ನೇನು ಸಪ್ತಪದಿಗೆ ವಧು ವರ ಎದ್ದು ನಿಲ್ಲಬೇಕು ಅಷ್ಟೇ. ವರ ಅದ್ಯಾಕೋ ತಮಾಷೆ ಮಾಡುವ ಮೂಡಿಗೆ ಬಂದಿದ್ದಾನೆ. ಹಾಗೆ ಸುಮ್ಮನೆ, ವಧುವಿನ ಕೆನ್ನೆ ಮುಟ್ಟುತ್ತಾನೆ. ವಧುವಿಗೆ ರಂಪ ಮಾಡಲು ಇಷ್ಟೇ ಸಾಕಾಯಿತು. ವರನಿಗೆ ಬಾರಿಸಿಯೇ ಬಿಡುತ್ತಾಳೆ. ಇಷ್ಟು ಜನರ ಮುಂದೆ ವಧು ಹೀಗೆ ವರಿಸಿದರೆ ವರ ಬಿದುತ್ತಾನಾ? ತಾನೂ ವಾಪಸ್ ಹೊಡೆಯುತ್ತಾನೆ. ಒಟ್ಟಿನಲ್ಲಿ  ಸಪ್ತಪದಿ ತುಳಿಯಬೇಕಾಗಿದ್ದ ಜೋಡಿ, ಮಂಟಪದಲ್ಲಿ ಕುಸ್ತಿಗಿಳಿದು ಬಿಡುತ್ತಾರೆ. 



 


ಇದನ್ನೂ ಓದಿ : Viral video : ಟ್ರಾಫಿಕ್ ಗೂ ಕ್ಯಾರೆನ್ನದೆ ಮಾರ್ಗ ಮಧ್ಯೆಯೇ ಪರಸ್ಪರರಲ್ಲಿ ತಲ್ಲೀನರಾಗಿರುವ ಜೋಡಿ ..!


ವಧು-ವರರು ಹೀಗೆ ಬಡಿದಾಡಿಕೊಳ್ಳುತ್ತಿರುವುದನ್ನು ನೋಡಿ ಮದುವೆಗೆ ಬಂದಿದ್ದವರು ಬೆಚ್ಚಿ ಬಿದ್ದಿದ್ದಾರೆ. ಈ ವೀಡಿಯೊವನ್ನು viralclips ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ಕ್ಲಿಪ್ ನೇಪಾಳಿ ಜೋಡಿಯ ಮದುವೆಯದ್ದಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.