Viral video : ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಪ್ರೇಮಿಗಳದ್ದೇ ಹಾವಳಿ. ರಸ್ತೆಯಾಗಲೀ, ಮಾಲ್ ಆಗಲಿ, ಮೆಟ್ರೋ ಆಗಲಿ ಬಸ್ಸೇ ಆಗಲಿ ಎಲ್ಲೆಡೆ ಎಲ್ಲರ ಗಮನವನ್ನು ತಮ್ಮತ್ತ ಸೆಳೆದು ಬಿಡುತ್ತಾರೆ. ಕೆಲವೊಮ್ಮೆ ಇವೆಲ್ಲಾ ಸಾಮಾನ್ಯ ಅನಿಸಿದರೂ ಒಮ್ಮೊಮ್ಮೆ ವಿಪರೀತ ಅನ್ನಿಸುವುದೂ ಇದೆ. ಇಲ್ಲೊಂದು ಜೋಡಿ ಮಾರ್ಗ ಮಧ್ಯೆ ಅಪ್ಪುಗೆಯಲ್ಲಿ ತಲ್ಲೀನವಾಗಿದೆ.
ಪ್ರೀತಿ ಕುರುಡು ಎನ್ನುವುದನ್ನು ಕೇಳಿದ್ದೇವೆ. ಆದರೆ ಈ ದೃಶ್ಯವನ್ನು ನೋಡಿದರೆ ಪ್ರೀತಿ ಕುರುಡು ಮಾತ್ರವಲ್ಲ ಕಿವುಡು ಕೂಡಾ ಎಂದನಿಸುತ್ತದೆ. ಯಾಕೆಂದರೆ ಇಲ್ಲಿ ಪ್ರೇಮಿಗಳಿಬ್ಬರು ಮುಖ್ಯ ರಸ್ತೆಯಲ್ಲಿ ಮಾರ್ಗ ಮಧ್ಯೆಯೇ ಒಬ್ಬರನ್ನೊಬ್ಬರು ತಬ್ಬಿಕೊಂಡು ನಿಂತಿದ್ದಾರೆ. ಟ್ರಾಫಿಕ್ ಲೈಟ್ ಕೂಡಾ ಬಿದ್ದಿದೆ. ಎಲ್ಲಾ ವಾಹನಗಳು ಟ್ರಾಫಿಕ್ ಸಿಗ್ನಲ್ ಯಾವಾಗ ತೆರವಾಗುತ್ತದೆಯೋ ಎಂದು ಕಾಯುತ್ತಿದ್ದಾರೆ.
ಇದನ್ನೂ ಓದಿ : Viral Video: ಯಾವುದೇ ರಕ್ಷಣಾ ಸಾಧನಗಳಿಲ್ಲದೆ ಸನ್ಯಾಸಿಯ ಈ ಬೆಟ್ಟ ಹತ್ತುವ ಪರಿಗೆ ನೀವೂ ಭೇಷ್ ಹೇಳಲೇಬೇಕು
ಟ್ರಾಫಿಕ್ ಸಿಗ್ನಲ್ ಬಿದ್ದಿರುವ ತನಕ ಇವರಿಬ್ಬರ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ಯಾರೋ ಬಹಳ ದಿನಗಳಿಂದ ಬೇರೆ ಬೇರೆಯಾಗಿದ್ದ ಜೋಡಿ ಸಿಕ್ಕಿದ್ದಿರಬಹುದು. ಇನ್ನೇನು ಮುಂದೆ ಸಾಗುತ್ತಾರೆ ಎಂದು ಎಲ್ಲಾ ಸವಾರರೂ ಸುಮ್ಮನಿದ್ದರು. ಆದರೆ ರೇಡ್ ಲೈಟ್ ಹೋಗಿ ಗ್ರೀನ್ ಸಿಗ್ನಲ್ ಬಂದರೂ ಈ ಜೋಡಿ ಮಾತ್ರ ಮಾರ್ಗ ಮಧ್ಯೆಯಿಂದ ಕದಲಲಿಲ್ಲ. ಹಾರ್ನ್ ಹಾಕಿದರೂ ಅಷ್ಟೇ, ಬೊಬ್ಬೆ ಇಟ್ಟು ಕರೆದರೂ ಅಷ್ಟೇ. ಇವರ ಕಿವಿಗೆ ಯಾವ ಸದ್ದು ಕೂಡಾ ಬೀಳಲಿಲ್ಲ.
ನಂತರ ತ ಟ್ರಾಫಿಕ್ ಪೋಲಿಸ್ ಸೇರಿದಂತೆ ವಾಹನ ಸವಾರರು ತಮ್ಮ ವಾಹನಗಳಿಂದ ಇಳಿದು ಬರಬೇಕಾಯಿತು. ಕೆಲ ಹೊತ್ತಿನ ರಾದ್ದಾಂತದ ಬಳಿಕ ಎಲ್ಲರೂ ಮಾರ್ಗ ಮಧ್ಯೆಯಿಂದ ತೆರವಾದರು. ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ವಾಹನ ಮತ್ತು ಸವಾರರು ಕೂಡಾ ತಮ್ಮ ಹಾದಿ ಹಿಡಿದರು.
ಇದನ್ನೂ ಓದಿ : Viral video : ರಸ್ತೆ ಮಧ್ಯೆಯೇ ಜುಟ್ಟು ಹಿಡಿದು ಹೊಡೆದಾಡಿಕೊಂಡ ಹೆಣ್ಣು ಮಕ್ಕಳು
ಈ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಲಾಗಿದೆ, ಶೇರ್ ಮಾಡುತ್ತಿದ್ದಂತೆಯೇ ಲಕ್ಷಾಂತರ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.