Funny Video : ಇತ್ತೀಚಿನ ದಿನಗಳಲ್ಲಿ ಮದುವೆ  ಸಮಾರಂಭದಲ್ಲಿಯೂ ಹೊಸ ಹೊಸ ಟ್ರೆಂಡ್ ಗಳನ್ನು ಪರಿಚಯಿಸಲಾಗುತ್ತಿದೆ. ವಧು ವರರ ಎಂಟ್ರಿಯಾಗಿರಲಿ, ವೇದಿಕೆಯ ಡೆಕೊರೆಶನ್ ಆಗಿರಲಿ, ಮದುವೆ ಮನೆಯಲ್ಲಿ ವಧು- ವರನ ಮನೆ ಮಂದಿ ಧರಿಸುವ ಧಿರಿಸಿನ ವಿಷಯದಲ್ಲಾಗಿರಲಿ ಹೊಸ ಹೊಸ ತಂತ್ರಗಳನ್ನು ಅಳವಡಿಸಲಾಗುತ್ತದೆ. ಪ್ರತಿಯೊಬ್ಬರಿಗೂ ತಮ್ಮ ಮದುವೆ ಬೇರೆಯವರಿಗಿಂತ ಭಿನ್ನವಾಗಿರಬೇಕು ಎನ್ನುವ ಸಣ್ಣ ಆಸೆ ಇದ್ದೇ ಇರುತ್ತದೆ. ಮೊದಲೆಲ್ಲಾ ಮದುವೆ ದಿನ ಆಗಲಿ ಮದರಂಗಿ ದಿನವಾಗಲೀ ಕೇವಲ  ಮನೆ ಮಂದಿ ಮಾತ್ರ ಡಾನ್ಸ್ ಮಾಡುತ್ತಿದ್ದರು. ಆದರೆ ಈಗ ಮದುವೆ  ದಿನ ವಧು ವರರ ಡಾನ್ಸ್ ಇರಲೇಬೇಕು ಎನ್ನುವಲ್ಲಿವರೆಗೆ ಬಂದಿದೆ.


COMMERCIAL BREAK
SCROLL TO CONTINUE READING

ಇಲ್ಲೊಂದು ಮದುವೆಯಲ್ಲಿ ವಧು- ವರರ ರೋಮ್ಯಾಂಟಿಕ್ ಡಾನ್ಸ್ ಆಯೋಜಿಸಲಾಗಿತ್ತು. ಇದಕ್ಕಾಗಿ ಭರ್ಜರಿ ತಯಾರಿ ಕೂಡಾ ನಡೆದಿತ್ತು. ಹಾಗೆಯೇ ಮದುವೆ ಶಾಸ್ತ್ರಗಳೆಲ್ಲಾ ಮುಗಿದ ನಂತರ ವಧು - ವರರ ಡಾನ್ಸ್   ಎಂದು ನಿಗದಿ ಪಡಿಸಲಾಗಿತ್ತು. ನಿಗದಿಯಂತೆಯೇ ಡಾನ್ಸ್ ಮಾಡುವುದಕ್ಕೆ ಇಬ್ಬರೂ ವೇದಿಕೆಯ ಮಧ್ಯ ಭಾಗಕ್ಕೆ ಬಂದಿದ್ದಾರೆ. 


ಇದನ್ನೂ ಓದಿ : Viral Video: ಅತ್ತಿಗೆಯ ಕೈ ಹಿಡಿದು ಡ್ಯಾನ್ಸ್ ಮಾಡಿದ ಮೈದುನ, ಮುಂದೇನಾಯ್ತು ಗೊತ್ತಾ? 


ಬಹಳ ಉತ್ಸಾಹದಿಂದಲೇ ವಧು ಮತ್ತು ವರ ತಮ್ಮ ನೃತ್ಯವನ್ನು ಆರಂಭಿಸಿದ್ದಾರೆ. ಆದರೆ ವಧುವಿನ ಬಟ್ಟೆ ಅಷ್ಟೊಂದು ಭಾರವಾಗಿತ್ತೋ, ಅಥವಾ ಬಟ್ಟೆ ಕಾಲಿಗೆ ಸಿಲುಕಿ ಹಾಕಿಕೊಂಡಿತ್ತೋ,  ವೇದಿಕೆಯಲ್ಲಿ ಯಾವುದೋ ವಸ್ತು ಅಡ್ಡ ಬಂತೋ ಗೊತ್ತಿಲ್ಲ ಇಬ್ಬರೂ ಆಯ ತಪ್ಪಿ ಬಿದ್ದು ಬೀಳುತ್ತಾರೆ. 



 


ಇದನ್ನೂ ಓದಿ : Viral Video: ಮದುವೆ ಶಾಸ್ತ್ರದ ವೇಳೆಯೇ ಲಿಪ್‌ಲಾಕ್‌ ಮಾಡಿದ ನವ ಜೋಡಿ..!


jaipur_weddings ಹೆಸರಿನ Instagram ಖಾತೆಯಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ವಧು-ವರರಿಗೆ ಸಂಬಂಧಿಸಿದ ಈ ವಿಡಿಯೋವನ್ನು ಬಹಳಷ್ಟು ಮಂದಿ ವೀಕ್ಷಿಸಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.