Viral Video: ಮದುವೆ ಶಾಸ್ತ್ರದ ವೇಳೆಯೇ ಲಿಪ್‌ಲಾಕ್‌ ಮಾಡಿದ ನವ ಜೋಡಿ..!

Traditional Indian Wedding Viral Video: ಮದುವೆ ಮಂಟಪದಲ್ಲಿ ಮಂಗಳಸೂತ್ರ ಕಟ್ಟಿದ ವರನೊಬ್ಬ ವಧುವಿಗೆ ಲಿಪ್‍ಲಾಕ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.  

Written by - Puttaraj K Alur | Last Updated : Nov 29, 2022, 05:57 PM IST
  • ಮದುವೆ ಮಂಪಟದಲ್ಲಿ ಸಾರ್ವಜನಿಕವಾಗಿ ವಧುವಿಗೆ ಲಿಪ್‍ಲಾಕ್ ಮಾಡಿದ ವರ
  • ತಾಳಿ ಕಟ್ಟಿದ ಖುಷಿಯಲ್ಲಿ ವಧುವಿಗೆ ಕಿಸ್ ಮಾಡಿ ನಾಚಿನೀರಾದ ವರ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
Viral Video: ಮದುವೆ ಶಾಸ್ತ್ರದ ವೇಳೆಯೇ ಲಿಪ್‌ಲಾಕ್‌ ಮಾಡಿದ ನವ ಜೋಡಿ..! title=
ವಧುವಿಗೆ ಲಿಪ್‍ಲಾಕ್ ಮಾಡಿದ ವರ

ನವದೆಹಲಿ: ಮದುವೆ ಸೀಸನ್‍ನಲ್ಲಿ ಮದುವೆಯ ಫನ್ನಿ ವಿಡಿಯೋಗಳನ್ನು ನೀವು ನೋಡೇ ಇರ್ತಿರಿ. ಮದುವೆ ವೇಳೆ ಸಂಭ್ರಮದ ಜೊತೆಗೆ ನಗು ತರಿಸುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಕಾಲ ಬದಲಾದಂತೆ ಮದುವೆ ಸಂಪ್ರದಾಯಗಳು ಬದಲಾಗಿವೆ. ಪ್ರೀತಿ ಸಾರ್ವಜನಿಕ ಪ್ರದರ್ಶನವಾಗಬಾರದು ಅನ್ನೋದು ಹಿಂದಿನವರ ಭಾವನೆ. ಆದರೆ ಇಂದಿನ ಯುವ ಜೋಡಿಗಳು ಸಾರ್ವಜನಿಕವಾಗಿಯೆ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ. ಇದಕ್ಕೆ ನಿದರ್ಶನವೆಂಬಂತೆ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ವಧು-ವರ ಸಾಂಪ್ರದಾಯಿಕ ಉಡುಗೆ ತೊಟ್ಟು ಕಲ್ಯಾಣ ಮಂಟಪದಲ್ಲಿ ಕುಳಿತುಕೊಂಡಿದ್ದಾರೆ. ಈ ವೇಳೆ ಈ ಜೋಡಿಯ ಸಂಬಂಧಿಕರು ಸಹ ಮದುವೆ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಅತ್ತ ಪೂಜಾರಿ ಮಂತ್ರ ಹೇಳುತ್ತಾ ಮದುವೆ ವಿಧಿ-ವಿಧಾನಗಳನ್ನು ನೆರವೇರಿಸುತ್ತಿರುತ್ತಾನೆ. ವರನು ವಧುವಿನ ಕುತ್ತಿಗೆಗೆ ಮಂಗಳಸೂತ್ರ ಕಟ್ಟುವ ಪ್ರಯತ್ನದಲ್ಲಿದ್ದಾಗ ನೆರೆದಿದ್ದ ಮಹಿಳೆಯರು ಸಹಾಯ ಮಾಡುತ್ತಿರುತ್ತಾರೆ. ಈ ವೇಳೆ ತಾಳಿ ಕಟ್ಟಿದ ಖುಷಿಯಲ್ಲಿ ವರ ವಧುವಿಗೆ ಲಿಪ್‍ಲಾಕ್ ಮಾಡುತ್ತಾನೆ.

ಇದನ್ನೂ ಓದಿ: Funny Video: ಮೇಕೆ ಮರಿ ಮುಂದೆ ಹಾರಾಡಿ ಕೆಣಕಿದ ಕೋಳಿ, ಕಲಿತ ಪಾಠ ಲೈಫ್ ಲಾಂಗ್ ಮರೆಯಲ್ಲ

ಈ ಲಿಪ್‍ಲಾಕ್ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ವೇಳೆ ಸಂಪೂರ್ಣ ಆಶ್ಚರ್ಯದಿಂದ ನೋಡುತ್ತಿದ್ದ ವರನು ವಧುವಿನ ಜೊತೆ ನಗುವನ್ನು ಹಂಚಿಕೊಂಡಿದ್ದಾನೆ. ಈ ವಿಡಿಯೋವನ್ನು ‘witty_wedding’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ‘ಸಂಬಂಧಿಕರ ಮುಂದೆಯೇ ಪತ್ನಿಗೆ ಪತಿ ಮುತ್ತು ಕೊಡಲು ಧೈರ್ಯ ಮಾಡಿದ ಕ್ಷಣ’ವೆಂದು ಈ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.

ವೈರಲ್ ಆಗಿರುವ ಈ ವಿಡಿಯೋವನ್ನು 30 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಅನೇಕರು ಶೇರ್ ಮಾಡಿದ್ದು, ನೂತನ ವಧು-ವರನಿಗೆ ಶುಭ ಹಾರೈಸಿದ್ದಾರೆ. ಕೆಲವರು ಇದು ಭಾರತೀಯ ಮದುವೆ ಸಂಪ್ರದಾಯವಲ್ಲ, ಪಾಶ್ಚಿಮಾತ್ಯ ಸಂಪ್ರದಾಯ ಪಾಲಿಸಲಾಗಿದೆ ಅಂತಾ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಯುವ ಜೋಡಿಗೆ ಶುಭ ಹಾರೈಸಿ ಒಳಿತಾಗಲಿ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: Viral News: ಮದುವೆ ಸಂದರ್ಭದಲ್ಲಿಯೂ ಲ್ಯಾಪ್ ಟಾಪ್ ಹಿಡಿದು ಕೆಲಸಕ್ಕೆ ನಿಂತ ಭೂಪ....!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News