ನವದೆಹಲಿ: ಮದುವೆ ಅಂದರೆ ಅಲ್ಲಿ ಸಂಭ್ರಮದ ವಾತಾವರಣವಿರುತ್ತದೆ. ವಧು ಮತ್ತು ವರನ ಸಂಬಂಧಿಕರು ಸ್ನೇಹಿತರು ಹೀಗೆ ಪ್ರತಿಯೊಬ್ಬರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿರುತ್ತಾರೆ. ಈ ವೇಳೆ ವಿವಿಧ ರೀತಿಯ ತಮಾಷೆ ಪ್ರಸಂಗಗಳು ನಡೆಯುತ್ತವೆ. ವಧು-ವರರಿಗೆ ಕಿಚಾಯಿಸುವುದು, ಚಿತ್ರ-ವಿಚಿತ್ರ ಗಿಫ್ಟ್ ನೀಡುವುದು ಹೀಗೆ ಫನ್ನಿ ಘಟನೆಗಳು ನಡೆಯುತ್ತಿರುತ್ತವೆ.
ಮದುವೆ ಅಂದರೆ ಹಾಡುವುದು, ಡ್ಯಾನ್ಸ್ ಮಾಡುವುದು ಸಾಮಾನ್ಯ. ಅದೇ ರೀತಿಯ ಮತ್ತೊಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮೈದುನನೊಬ್ಬ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತನ್ನ ಅತ್ತಿಗೆಯೊಂದಿಗೆ ವೇದಿಕೆಯಲ್ಲಿಯೇ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾನೆ.
ಇದನ್ನೂ ಓದಿ: Cobra Video: ಒಂದೇ ಬಾರಿಗೆ ಲೀಟರ್ ನೀರು ಕುಡಿದ ಹಾವು: ಯಾಕೆ ಅಂತ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ!!
ಡಿಜೆ ಹಾಡಿಗೆ ಅತ್ತಿಗೆ ಜೊತೆ ಮೈದುನನ ನೃತ್ಯ!
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧು ಡಿಜೆ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಆಗ ಮೈದುನ ಬಂದು ಅತ್ತಿಗೆಯ ಕೈ ಹಿಡಿದು ನೃತ್ಯ ಮಾಡಿದ್ದಾನೆ. ಬಾಲಿವುಡ್ನ ಜನಪ್ರಿಯ ‘ಊಫ್ ಕ್ಯಾ ರಾತ್ ಆಯಿ ಹೈ, ಮೊಹಬ್ಬತ್ ರಂಗ್ ಲೈ ಹೈ’ ಹಾಡಿಗೆ ಇಬ್ಬರು ಸೇರಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಅತ್ತಿಗೆಯ ಎರಡೂ ಕೈಗಳನ್ನು ಹಿಡಿದುಕೊಳ್ಳುವ ಮೈದುನ ಹಾಡಿಗೆ ತಕ್ಕಂತೆ ಸ್ಟೆಪ್ಸ್ ಹಾಕಿದ್ದಾನೆ. ಈ ವೇಳೆ ಅತ್ತಿಗೆ ಕೂಡ ನಗು ನಗುತ್ತಲೇ ಡ್ಯಾನ್ಸ್ ಮಾಡುತ್ತಾಳೆ.
ಮೈದುನನ ಜೊತೆಗೆ ಅತ್ತಿಗೆ ನಗುತ್ತಾ, ನಾಚಿಕೊಳ್ಳುತ್ತಾ ಡ್ಯಾನ್ಸ್ ಮಾಡುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ವರ ಅಲ್ಲಿಗೆ ಆಗಮಿಸುತ್ತಾನೆ. ಬಂದವನೇ ಡಿಜೆಗೆ ಹಾಡನ್ನು ಬದಲಾಯಿಸುವಂತೆ ಕೇಳುತ್ತಾನೆ. ಆದರೆ ಇದನ್ನು ಗಮನಿಸದ ಮೈದುನ ಅತ್ತಿಗೆ ಜೊತೆ ಡ್ಯಾನ್ಸ್ ಮುಂದುವರೆಸುತ್ತಾನೆ. ವೇದಿಕೆ ಮೇಲೆ ಬರುವ ವರ ಅತ್ತಿಗೆ ಹಿಡಿದುಕೊಂಡಿದ್ದ ಮೈದುನನ ಕೈ ಬಿಡಿಸುತ್ತಾನೆ. ಬಳಿಕ ವಧು ವರನೊಂದಿಗೆ ನೃತ್ಯ ಮಾಡಲು ಶುರು ಮಾಡುತ್ತಾಳೆ. ಕೆಲವೇ ಸೆಕೆಂಡ್ ಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: Anjan Das Murder Case: ತಾಯಿ ಸಹಾಯದಿಂದ ತಂದೆಯನ್ನ ಪೀಸ್ ಪೀಸ್ ಮಾಡಿದ ಮಗ: ರುಂಡ ಎಸೆಯುವ ದೃಶ್ಯ ಸೆರೆ
ಈ ವೈರಲ್ ವೀಡಿಯೊವನ್ನು SD singh ಹೆಸರಿನ ಚಾನಲ್ ಯೂಟ್ಯೂಬ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅನೇಕರು ವಿವಿಧ ರೀತಿಯಲ್ಲಿ ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.