Viral Video: ಸಾರ್ವಜನಿಕರ ಎದುರೆ ವಧುವಿನ ಜೊತೆ ವರ ಮಾಡಿದ ಈ ಕೃತ್ಯ, ನಂತರ ನಡೆದಿದ್ದು ... ತಾಂಡವ
Funny Video: ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಇದನ್ನು ನೀವೂ ಕೂಡ ಹೊಟ್ಟೆ ಹಿಡಿದು ನಗುವಿರಿ.
Trending Video: ಪ್ರಸ್ತುತ ದೇಶಾದ್ಯಂತ ಮದುವೆಯ ಸೀಸನ್ ಆರಂಭಗೊಂಡಿದೆ. ಈ ಅವಧಿಯಲ್ಲಿ ಜನರು ಒಂದೊಂದಾಗಿ ತಮಾಷೆಯ ದೃಶ್ಯಗಳನ್ನು ನೋಡುತ್ತಿದ್ದಾರೆ. ಮದುವೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಕೆಲ ವಿಡಿಯೋಗಳನ್ನು ಕಂಡರೆ ತಡೆಯಲಾರದಷ್ಟು ನಗು ಬರುತ್ತದೆ. ಆದರೆ, ಕೆಲ ವಿಡಿಯೋಗಳನ್ನು ನೋಡಿ ಜನ ಬೆಚ್ಚಿ ಬೀಳುತ್ತಾರೆ. ಅಷ್ಟೇ ಅಲ್ಲ, ಬಳಕೆದಾರರು ಮದುವೆಯ ತಮಾಷೆಯ ವೀಡಿಯೊಗಳಲ್ಲಿ ಹಂಚಿಕೊಳ್ಳುತ್ತಾರೆ. ವಧು-ವರರಿಗೆ ಸಂಬಂಧಿಸಿದ ಇಂತಹುದೇ ಒಂದು ಟ್ರೆಂಡಿಂಗ್ ವೀಡಿಯೊ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ, ಇದನ್ನು ನೋಡಿ ನೀವು ಖಂಡಿತವಾಗಿಯೂ ಹೊಟ್ಟೆ ಹಿಡಿದುಕೊಂಡು ನಗುವಿರಿ.
ಇದನ್ನೂ ಓದಿ-Chicken Marriage: ಮದುವೆ ಊಟದಲ್ಲಿ ಕೋಳಿ ಇಲ್ಲ ಅಂತಾ ವಿವಾಹವೇ ಕ್ಯಾನ್ಸಲ್: ಕೊನೆಗೆ ಆಗಿದ್ದೇನು?
ಪ್ರತಿಯೊಬ್ಬರು ತಮ್ಮ ವಿವಾಹವನ್ನು ಅವಿಸ್ಮರನೀಯವಾಗಿ ಮತ್ತು ವಿಶೇಷವಾಗಿಸಲು ಬಯಸುತ್ತಾರೆ. ಇದಕ್ಕಾಗಿ, ಇತ್ತೀಚಿನ ದಿನಗಳಲ್ಲಿ ಅನೇಕ ದಂಪತಿಗಳು ಚಿತ್ರ-ವಿಚಿತ್ರ ಕೆಲಸಗಳಿಗೆ ಇಳಿಯುವುದನ್ನು ನೀವು ನೋಡಿರಬಹುದು. ಅಷ್ಟೇ ಅಲ್ಲ ಅವರು ಮಾಡುವ ಕೃತ್ಯವನ್ನು ನೋಡಿ ಮದುವೆಗೆ ಬಂದ ಅತಿಥಿಗಳೂ ಕೂಡ ಬೆಚ್ಚಿ ಬೀಳುತ್ತಾರೆ. ಆದರೆ, ಈ ವೈರಲ್ ವಿಡಿಯೋದಲ್ಲಿ ವಧು-ವರರು ತಾಂಡವವನ್ನೇ ನಡೆಸಿದ್ದಾರೆ. ವೀಡಿಯೊದಲ್ಲಿ, ವರನು ವಧುವಿಗೆ ಸಾರ್ವಜನಿಕವಾಗಿ ಬಾಳೆಹಣ್ಣುನ್ನು ತಿನ್ನಿಸಲು ಪ್ರಯತ್ನಿಸುತ್ತಿರುವುದನ್ನು ನೀವು ನೋಡಬಹುದು. ಆದರೆ ವಧು ಬಾಳೆಹಣ್ಣು ತಿನ್ನಲು ಸಿದ್ಧವಾಗಿರಲಿಲ್ಲ. ಹೀಗಾಗಿ ವರ ಅವಳ ಮೇಲೆ ತನ್ನ ಬಲ ಪ್ರಯೋಗ ಮಾಡಲು ಪ್ರಾರಂಭಿಸುತ್ತಾನೆ. ವರನು ವಧುವನ್ನು ಬಲವಂತಪಡಿಸುವ ರೀತಿಯಿಂದ, ವಧು ಕೋಪಗೊಂಡು ವರನಿಗೆ ಕಪಾಳಮೋಕ್ಷ ಮಾಡುತ್ತಾಳೆ. ವಧುವಿನ ಈ ಕೃತ್ಯದಿಂದ ವರ ಕೂಡ ಬೆಚ್ಚಿಬಿದ್ದು ವಧುವಿಗೆ ಬಲವಾಗಿ ಕಪಾಳಮೋಕ್ಷ ಮಾಡುತ್ತಾನೆ. ಇದಾದ ನಂತರ ಇಬ್ಬರ ನಡುವೆ ಪರಸ್ಪರ ಹೊಡೆದಾಟ ಶುರುವಾಗುತ್ತದೆ. ವಿಡಿಯೋ ನೋಡಿ..
ಇದನ್ನೂ ಓದಿ-Road Cricket: ರಸ್ತೆಯಲ್ಲಿ ಕ್ರಿಕೆಟ್ ಆಡುವವರು ಈ ವಿಡಿಯೋ ನೋಡಲೇ ಬೇಕು!
ಈ ವೀಡಿಯೋ ನೋಡಿ ನೀವೂ ಕೂಡ ಒಂದು ಕ್ಷಣ ಬೆಚ್ಚಿ ಬಿದ್ದಿರಬಹುದು. ಅಷ್ಟೇ ಅಲ್ಲ ನಂತರ ಇಬ್ಬರ ಆ್ಯಕ್ಷನ್ ನೋಡಿ ನಿಮಗೂ ಕೂಡ ನಗು ಬಂದಿರಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ 'pariwarik___memes' ಹೆಸರಿನ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. ಇದುವರೆಗೆ ಲಕ್ಷಾಂತರ ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಆದರೆ, 31 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಇದೇ ವೇಳೆ, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಕುರಿತು ಚರ್ಚಿಸುತ್ತಿರುವ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ಕೆಲವರು ಈ ವೀಡಿಯೋ ನೋಡಿ 'ಮಜಾ ಬಂತು' ಎಂದೂ ಕೂಡ ಹೇಳುತ್ತಿದ್ದಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.