Road Cricket: ರಸ್ತೆಯಲ್ಲಿ ಕ್ರಿಕೆಟ್ ಆಡುವವರು ಈ ವಿಡಿಯೋ ನೋಡಲೇ ಬೇಕು!

Road Cricket Video : ಇಂದಿಗೂ ಅನೇಕ ಮಕ್ಕಳು ರಸ್ತೆಯಲ್ಲಿ ಕ್ರಿಕೆಟ್ ಆಡುತ್ತಾರೆ ಮತ್ತು ಅನೇಕ ಬಾರಿ ಅಪಘಾತಗಳಿಗೆ ಬಲಿಯಾಗುತ್ತಾರೆ. ಹೀಗೆ ನಡು ಬೀದಿಯಲ್ಲಿ ಆಡುವ ಕ್ರಿಕೆಟ್‌ ಎಂತಹ ಅಪಾಯ ತರಬಹುದು ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. 

Written by - Chetana Devarmani | Last Updated : Nov 28, 2022, 07:22 PM IST
  • ರಸ್ತೆಯಲ್ಲಿ ಕ್ರಿಕೆಟ್ ಆಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ
  • ಇಂದಿಗೂ ಅನೇಕ ಮಕ್ಕಳು ರಸ್ತೆಯಲ್ಲಿ ಕ್ರಿಕೆಟ್ ಆಡುತ್ತಾರೆ
  • ರಸ್ತೆಯಲ್ಲಿ ಕ್ರಿಕೆಟ್ ಆಡುವವರು ಈ ವಿಡಿಯೋ ನೋಡಲೇ ಬೇಕು!
Road Cricket: ರಸ್ತೆಯಲ್ಲಿ ಕ್ರಿಕೆಟ್ ಆಡುವವರು ಈ ವಿಡಿಯೋ ನೋಡಲೇ ಬೇಕು!  title=
ರಸ್ತೆಯಲ್ಲಿ ಕ್ರಿಕೆಟ್ ಆಟ

Accident Video Viral : ಭಾರತದಲ್ಲಿ ಕ್ರಿಕೆಟ್ ಕ್ರೇಜ್‌ ಬಲು ಜೋರಾಗಿದೆ. ಏಕೆಂದರೆ ಇಡೀ ಜಗತ್ತು ಈಗ ಭಾರತೀಯ ಕ್ರಿಕೆಟ್ ನತ್ತ ತಿರುಗಿ ನೋಡುತ್ತಿದೆ. ಭಾರತದ ಹಳ್ಳಿ, ಮೊಹಲ್ಲಾ, ನಗರ, ಪಟ್ಟಣಗಳಲ್ಲಿ ಎಲ್ಲರೂ ಕ್ರಿಕೆಟ್ ಆಡುತ್ತಾರೆ. ಈ ಗಲ್ಲಿ ಕ್ರಿಕೆಟ್‌ ಭಾರತದಲ್ಲಿ ಬಲು ಫೇಮಸ್‌. ಕೆಲವರು ಕ್ರೀಡಾಂಗಣ ಅಥವಾ ಮೈದಾನದ ಬದಲು ತೆರೆದ ರಸ್ತೆಯಲ್ಲಿ ಕ್ರಿಕೆಟ್ ಆಡುತ್ತಾರೆ. ಹೀಗೆ ನಡು ಬೀದಿಯಲ್ಲಿ ಆಡುವ ಕ್ರಿಕೆಟ್‌ ಎಂತಹ ಅಪಾಯ ತರಬಹುದು ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. 

ಇದನ್ನೂ ಓದಿ : Monkey Video : ಕೋತಿ ಕೈಗೆ ಶುಂಠಿ ಕೊಟ್ರೆ ಏನಾಗುತ್ತೆ? ಈ ವಿಡಿಯೋ ನೋಡಿ ಗೊತ್ತಾಗುತ್ತೆ!

ಬಳಕೆದಾರರೊಬ್ಬರು ಈ ವಿಡಿಯೋವನ್ನು Twitter ನಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಯಲ್ಲಿ ಕೆಲವರು ಕ್ರಿಕೆಟ್ ಆಡುತ್ತಿರುವುದು ಕಂಡು ಬರುತ್ತಿದೆ. ರಸ್ತೆಯನ್ನೇ ಪಿಚ್ ಮಾಡಿಕೊಂಡು ಕ್ರಿಕೆಟ್‌ ಆಡುತ್ತಿದ್ದಾರೆ. ವಿಡಿಯೋ ನೋಡಿದರೆ ಇದು ಯಾವುದೋ ಹಳ್ಳಿ ಅಥವಾ ಪಟ್ಟಣದಲ್ಲಿ ನಡೆದ ಘಟನೆ ಅನ್ನಿಸುತ್ತಿದೆ. ವಿಡಿಯೋ ಹಿನ್ನೆಲೆಯಲ್ಲಿ ಕಾಮೆಂಟರಿಯ ಸದ್ದು ಕೂಡ ಕೇಳಿ ಬರುತ್ತಿದೆ. 

 

 

ಬ್ಯಾಟ್ಸ್ ಮನ್ ಬ್ಯಾಟ್ ಹಿಡಿದು ನಿಂತಿರುವ ರಸ್ತೆಯ ಮಧ್ಯದಲ್ಲಿ ಮೂರು ಸ್ಟಂಪ್ ಗಳೂ ಇವೆ. ಇಲ್ಲಿ ಗಲ್ಲಿ ಕ್ರಿಕೆಟ್ ಪಂದ್ಯವೊಂದು ಅದ್ಧೂರಿಯಾಗಿ ನಡೆಯುತ್ತಿದೆ. ಬೌಲರ್ ಚೆಂಡನ್ನು ಎಸೆಯುತ್ತಾನೆ ಮತ್ತು ಅದನ್ನು ಹೊಡೆಯಲು, ಬ್ಯಾಟ್ಸ್‌ಮನ್ ಬ್ಯಾಕ್‌ಫೂಟ್‌ನಲ್ಲಿ ಹೋದ ತಕ್ಷಣ ಕ್ರೀಸ್‌ನಿಂದ ಹೊರಗೆ ಹೋಗುತ್ತಾನೆ. ಬೈಕ್ ಸವಾರ ಹಿಂದಿನಿಂದ ವೇಗವಾಗಿ ಬರುತ್ತಾನೆ.

ಇದನ್ನೂ ಓದಿ :  Vande Bharat Expressನಲ್ಲಿ ಪ್ರಯಾಣಿಸುವವರಿಗೆ ಸಂತಸದ ಸುದ್ದಿ!

ಬ್ಯಾಟ್ಸ್‌ಮನ್‌ಗೆ ಡಿಕ್ಕಿ ಹೊಡೆಯುತ್ತಾನೆ. ಈ ವೇಳೆ ಮೊದಲು ಬ್ಯಾಟ್ಸ್‌ಮನ್‌ನ ಬ್ಯಾಟ್ ಬಿದ್ದು ಮಹಿಳೆ ಸಮೇತ ಬೈಕ್ ಸವಾರ ಕೆಳಗೆ ಬಿದ್ದಿದ್ದಾನೆ. ವಿಡಿಯೋ ಇಲ್ಲಿಗೆ ಮುಗಿಯುತ್ತದೆ. ಆದರೆ ಇಬ್ಬರೂ ತೀವ್ರವಾಗಿ ಗಾಯಗೊಂಡಿಬಹುದೆಂಬುದು ಖಚಿತವಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News