Chicken Marriage: ಮದುವೆ ಊಟದಲ್ಲಿ ಕೋಳಿ ಇಲ್ಲ ಅಂತಾ ವಿವಾಹವೇ ಕ್ಯಾನ್ಸಲ್: ಕೊನೆಗೆ ಆಗಿದ್ದೇನು?

Marriage cancelled for chicken: ಜಗದ್ಗಿರಿಗುಟ್ಟದ ರಿಂಗ್‌ಬಸ್ತಿಯ ವರ ಮತ್ತು ಕುತ್ಬುಳ್ಳಾಪುರದ ವಧು ಇತ್ತೀಚೆಗೆ ಹಿರಿಯರ ಸಮ್ಮುಖದಲ್ಲಿ ವಿವಾಹವಾಗಲು ನಿರ್ಧರಿಸಿದ್ದರು. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಶಹಪುರ ನಗರದ ಫಂಕ್ಷನ್ ಹಾಲ್‌ನಲ್ಲಿ ಮದುವೆಗೆ ವ್ಯವಸ್ಥೆ ಮಾಡಲಾಗಿತ್ತು. ನವೆಂಬರ್ 28ರಂದು ಮಧ್ಯಾಹ್ನ 3 ಗಂಟೆಗೆ ವಿವಾಹ ಸಮಾರಂಭ ನಡೆಯಬೇಕಿತ್ತು.

Written by - Bhavishya Shetty | Last Updated : Nov 29, 2022, 10:10 AM IST
    • ವರನ ಗೆಳೆಯರಿಗೆ ಚಿಕನ್ ಮಾಂಸ ನೀಡಿಲ್ಲ ಎಂದು ವಿವಾಹ ಕ್ಯಾನ್ಸಲ್
    • ಹೈದರಾಬಾದ್‌ನ ಶಹಪುರ ನಗರದಲ್ಲಿ ನಡೆದ ಘಟನೆ
    • ವಧುವಿನ ಕಡೆಯವರು ತಮಗೆ ಬೇಕಾದಂತೆ ಬಡಿಸಿಲ್ಲ ಎಂದು ವ್ಯಂಗ್ಯ
Chicken Marriage: ಮದುವೆ ಊಟದಲ್ಲಿ ಕೋಳಿ ಇಲ್ಲ ಅಂತಾ ವಿವಾಹವೇ ಕ್ಯಾನ್ಸಲ್: ಕೊನೆಗೆ ಆಗಿದ್ದೇನು?  title=
marriage

Marriage cancelled for chicken: ಕೆಲವೊಂದು ಬಾರಿ ಮದುವೆಗಳು ವರದಕ್ಷಿಣೆ, ಜಾತಕ ಸಮಸ್ಯೆ, ಹೀಗೆ ಯಾವ್ಯಾವುದೋ ವಿಚಾರಗಳಿಂದ ಮುರಿದು ಬೀಳುತ್ತವೆ. ಇನ್ನು ವರದಕ್ಷಿಣೆ ನೀಡದಿರುವುದು ಅಥವಾ ಮದುವೆಯಾಗಲು ಇಷ್ಟವಿಲ್ಲದೆ ಓಡಿಹೋಗುವುದು ಹೀಗೆ ಅನೇಕ ಕಾರಣಗಳಿಗಾಗಿ ಮದುವೆಗಳನ್ನು ನಿಲ್ಲಿಸಲಾಗುತ್ತದೆ. ಆದರೆ ಇತ್ತೀಚೆಗೆ ನಡೆದ ಮದುವೆಯೊಂದರಲ್ಲಿ ವರನ ಗೆಳೆಯರಿಗೆ ಚಿಕನ್ ಮಾಂಸ ನೀಡಿಲ್ಲ ಎಂದು ವಿವಾಹವೇ ಕ್ಯಾನ್ಸಲ್ ಆಗಿದೆ. ಈ ಘಟನೆ ನಡೆದಿರುವುದು ಹೈದರಾಬಾದ್‌ನ ಶಹಪುರ ನಗರದಲ್ಲಿ.

ಇದನ್ನೂ ಓದಿ: Road Cricket: ರಸ್ತೆಯಲ್ಲಿ ಕ್ರಿಕೆಟ್ ಆಡುವವರು ಈ ವಿಡಿಯೋ ನೋಡಲೇ ಬೇಕು!

ಜಗದ್ಗಿರಿಗುಟ್ಟದ ರಿಂಗ್‌ಬಸ್ತಿಯ ವರ ಮತ್ತು ಕುತ್ಬುಳ್ಳಾಪುರದ ವಧು ಇತ್ತೀಚೆಗೆ ಹಿರಿಯರ ಸಮ್ಮುಖದಲ್ಲಿ ವಿವಾಹವಾಗಲು ನಿರ್ಧರಿಸಿದ್ದರು. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಶಹಪುರ ನಗರದ ಫಂಕ್ಷನ್ ಹಾಲ್‌ನಲ್ಲಿ ಮದುವೆಗೆ ವ್ಯವಸ್ಥೆ ಮಾಡಲಾಗಿತ್ತು. ನವೆಂಬರ್ 28ರಂದು ಮಧ್ಯಾಹ್ನ 3 ಗಂಟೆಗೆ ವಿವಾಹ ಸಮಾರಂಭ ನಡೆಯಬೇಕಿತ್ತು. ಆದರೆ ಮದುವೆಗೂ ಮುನ್ನ ಭಾನುವಾರ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ವಧು-ವರರು ಬಿಹಾರದ ಮಾರ್ವಾಡಿ ಕುಟುಂಬದವರಾಗಿದ್ದರಿಂದ ಈ ಸಂದರ್ಭದಲ್ಲಿ ಸಸ್ಯಾಹಾರಿ ಖಾದ್ಯಗಳನ್ನು ತಯಾರಿಸಿದರು. ಡಿನ್ನರ್ ಬಹುತೇಕ ಮುಗಿದಿತ್ತು.

ಆದರೆ ಕೊನೆಯಲ್ಲಿ ಬಂದ ಮದುಮಗನ ಸ್ನೇಹಿತರು ಔತಣಕೂಟದಲ್ಲಿ ಕೋಳಿ ಯಾಕೆ ಇಲ್ಲ ಎಂದು ತಕರಾರು ತೆಗೆದಿದ್ದಾರೆ. ಜೊತೆಗೆ ವಿಷಯ ತಿಳಿದ ವರನ ಸಂಬಂಧಿಕರು ವಧುವಿನ ಕಡೆಯವರು ತಮಗೆ ಬೇಕಾದಂತೆ ಬಡಿಸಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಈ ವೇಳೆ ಎರಡು ಕಡೆಯವರ ನಡುವೆ ಮಾತಿನ ಚಕಮಕಿ ನಡೆದು ಮಾರಾಮಾರಿ ನಡೆದಿದೆ. ಎರಡೂ ಕಡೆಯ ಸಂಬಂಧಿಕರು ಹೊಡೆದಾಡಿಕೊಳ್ಳುವವರೆಗೂ ಪರಿಸ್ಥಿತಿ ಮುಂದುವರೆದಿದೆ.

ಇದನ್ನೂ ಓದಿ: Monkey Video : ಕೋತಿ ಕೈಗೆ ಶುಂಠಿ ಕೊಟ್ರೆ ಏನಾಗುತ್ತೆ? ಈ ವಿಡಿಯೋ ನೋಡಿ ಗೊತ್ತಾಗುತ್ತೆ!

ಇನ್ನು ಕೆಲವೇ ಗಂಟೆಗಳಲ್ಲಿ ನಡೆಯಬೇಕಿದ್ದ ಮದುವೆ ಜಗಳದಿಂದ ರದ್ದಾಗಿದೆ. ಕೂಡಲೇ ಮದುಮಗಳ ಮನೆಯವರು ಜೇಡಿಮೆಟ್ಲ ಸಿಐ ಪವನ್ ಅವರಿಗೆ ವಿಷಯ ತಿಳಿಸಿದ್ದಾರೆ. ಸಿಐ ಎರಡೂ ಕುಟುಂಬದವರನ್ನು ಠಾಣೆಗೆ ಕರೆಸಿ ಕೌನ್ಸೆಲಿಂಗ್ ಮಾಡಿದ್ದಾರೆ. ಬಳಿಕ ಎರಡೂ ಕುಟುಂಬದವರೊಂದಿಗೆ ಮಾತನಾಡಿ ರಾಜಿ ಸಂಧಾನ ಮಾಡಿದ್ದಾರೆ. ಸದ್ಯ ಜಗಳ ಅಂತ್ಯವಾಗಿದ್ದು, ನವೆಂಬರ್ 30ರಂದು ಮದುವೆ ಮಾಡಲು ವಧು-ವರರ ಕುಟುಂಬಸ್ಥರು ನಿರ್ಧರಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News