Bride Groom Video: ಸಾಮಾಜಿಕ ಮಾಧ್ಯಮಗಳಲ್ಲಿ ಮದುವೆಯ ವೈರಲ್ ವಿಡಿಯೋಗಳು ಹೆಚ್ಚಾಗಿ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತವೆ. ಕೆಲವರು ಮದುವೆ ಮೆರವಣಿಗೆಯ ವಿಡಿಯೋಗಳನ್ನು ಪೋಸ್ಟ್ ಮಾಡಿದರೆ, ಮತ್ತೆ ಕೆಲವರು ಮದುವೆಯ ದಿನದಂದು ವೇದಿಕೆಯ ಮೇಲಿನ ಕೆಲವು ದೃಶ್ಯಗಳನ್ನು ಪೋಸ್ಟ್‌ ಮಾಡುತ್ತಾರೆ. ವಧು ವರರ ಫನ್ನಿ ದೃಶ್ಯಗಳು, ಇಬ್ಬರ ನಡುವಿನ ಪ್ರೀತಿಯ ದೃಶ್ಯಗಳನ್ನು ಅಪ್‌ಲೋಡ್‌ ಮಾಡ್ತಾರೆ. ಕೆಲವೊಮ್ಮೆ ವಧು - ವರರ ನಡುವಿನ ಜಗಳಗಳು ಸಹ ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ. ಮದುವೆ ಮನೆಯ ಯಾವುದೇ ವಿಡಿಯೋ ಇರಲಿ ಅದನ್ನು ಜನರು ಇಷ್ಟಪಟ್ಟು ನೋಡುತ್ತಾರೆ. ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್‌ ಆಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Snake Video: ಇದು ಹಠಮಾರಿ ಹಾವು.. ತನ್ನನ್ನು ತಾನೇ ಹೇಗೆ ಕಚ್ಚಿಕೊಂಡು ಸಾಯುತ್ತದೆ ನೀವೇ ನೋಡಿ..


ಹಿಂದೂ ಸಂಪ್ರದಾಯದಲ್ಲಿ, ವಧು ಮತ್ತು ವರರು ಹೂವಿನ ಹಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ಆಚರಣೆಯು ಅವರ ಜೀವನ ಸಂಗಾತಿಯ ಸ್ವೀಕಾರದ ಭರವಸೆಯನ್ನು ಸಂಕೇತಿಸುತ್ತದೆ. ಅವರ ಜೀವನದುದ್ದಕ್ಕೂ ಒಬ್ಬರನ್ನೊಬ್ಬರು ಗೌರವಿಸುವ ಪ್ರತಿಜ್ಞೆಯ ಸಂಕೇತ ಇದಾಗಿದೆ. ಈ ವರಮಾಲಾ ಸಮಾರಂಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಧು-ವರರು ವೇದಿಕೆ ಮೇಲೆ ನಿಂತಿದ್ದಾರೆ, ಪರಸ್ಪರ ಹಾರ ಬದಲಿಸಿಕೊಳ್ಳುತ್ತಿದ್ದಾರೆ. ವಧು-ವರರು ಪರಸ್ಪರ ಎದುರು ನಿಂತು ಸಮಾರಂಭ ಪ್ರಾರಂಭವಾಗುವವರೆಗೆ ಕಾಯುತ್ತಿರುವುದನ್ನು ಕಾಣಬಹುದು. ಆದರೆ ವರನ ಕಣ್ಣಿಗೆ ಯಾವುದೋ ಹುಳ ಹೋಗುತ್ತದೆ.  


 



 


ವರನು ನೋವನ್ನು ಅನುಭವಿಸುತ್ತಾನೆ. ಇದಾದ ಬಳಿಕ ವಧು ಯಾರಿಗೂ ಕಾಯದೆ ಕರವಸ್ತ್ರ ತೆಗೆದುಕೊಂಡು ಎಲ್ಲರ ಮುಂದೆ ವರನ ಕಣ್ಣಿನಲ್ಲಿರುವ ಹುಳು ತೆಗೆಯಲು ಆರಂಭಿಸುತ್ತಾಳೆ. ನಂತರ ಅವಳು ವರನ ಮುಖವನ್ನು ಹಿಡಿದುಕೊಂಡು ನೋವು ನಿವಾರಿಸಲು ಅವನ ಕಣ್ಣುಗಳಲ್ಲಿ ಊದುವುದನ್ನು ಕಾಣಬಹುದು. ವಧುವಿನ ಈ ನಡವಳಿಕೆ ಎಲ್ಲರನ್ನು ಆಕರ್ಷಿಸಿದೆ. ಈ ವಿಡಿಯೋ ಬಹಳ ಮುದ್ದಾಗಿದ್ದು, Instagram ನಲ್ಲಿ ವೈರಲ್ ಆಗುತ್ತಿದೆ, ಇದನ್ನು itz_priynandan_00 ಖಾತೆಯಿಂದ ಹಂಚಿಕೊಳ್ಳಲಾಗಿದೆ. 335K ಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದಾರೆ. ಇದನ್ನು 5.3 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.


ಇದನ್ನೂ ಓದಿ: Shocking Video: ಅಪಾಯಕಾರಿ ಹಾವನ್ನು ಕಚ್ಚಿ ತಿನ್ನುವ ಜಿಂಕೆ, ವಿಡಿಯೋ ನೋಡಿ ಶಾಕ್‌ ಆಗ್ತೀರಾ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.