ಮದುವೆ ಸಂಭ್ರಮದ ನಡುವೆಯೂ ಕುಳಿತಲ್ಲೇ ನಿದ್ದೆಗೆ ಜಾರಿದ ವರ .! ವಧು ಮಾಡಿದ್ದೇನು ಗೊತ್ತಾ ?
ಇದೀಗ ಮದುವೆಯ ಸೀಸನ್ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮದುವೆಗೆ ಸಂಬಂಧಿಸಿದ ಲಕ್ಷಾಂತರ ವಿಡಿಯೋಗಳು ಸಿಗುತ್ತವೆ. ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ವಿಡಿಯೋಗಳನ್ನು ಅಪ್ ಲೋಡ್ ಮಾಡಲಾಗುತ್ತದೆ.
ಬೆಂಗಳೂರು : ಮದುವೆ ಎಂದರೆ ಅಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಮನೆ ತುಂಬಾ ಜನ. ನಗು, ಮಾತು, ಓಡಾಟ ಹೀಗೆ ಗಿಜಿ ಗಿಜಿ ಸದ್ದು ಕೇಳಿ ಬರುತ್ತಿರುತ್ತದೆ. ಇನ್ನು ಮದುವೆ ಎಂದರೆ ಅದು ಆ ದಿನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಮದುವೆಗೂ ಮುನ್ನ ಮೂರು ನಾಲ್ಕು ದಿನಗಳ ಶಾಸ್ತ್ರ ಸಂಪ್ರದಾಯಗಳನ್ನು ಕೂಡಾ ಅನುಸರಿಸಬೇಕಾಗುತ್ತದೆ. ಕೆಲವೊಮ್ಮೆ ಈ ಶಾಸ್ತ್ರಗಳನ್ನು ಪೂರೈಸುವುದರೊಳಗೆ ವಧು ಮತ್ತು ವರ ಸುಸ್ತಾಗಿ ಬಿಡುತ್ತಾರೆ. ಸರಿಯಾಗಿ ನಿದ್ದೆಯೂ ಇರುವುದಿಲ್ಲ. ಇದರ ನಡುವೆ ಫೋಟೋ, ವಿಡಿಯೋ ಎಂದೆಲ್ಲಾ ಸುಸ್ತಾಗಿ ಬಿಡುತ್ತಾರೆ.
ಇದೀಗ ಮದುವೆಯ ಸೀಸನ್ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮದುವೆಗೆ ಸಂಬಂಧಿಸಿದ ಲಕ್ಷಾಂತರ ವಿಡಿಯೋಗಳು ಸಿಗುತ್ತವೆ. ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ವಿಡಿಯೋಗಳನ್ನು ಅಪ್ ಲೋಡ್ ಮಾಡಲಾಗುತ್ತದೆ. ಇವುಗಳಲ್ಲಿ ಕೆಲವನ್ನು ನೋಡಿದರೆ ನಗು ತಡೆಯುವುದಕ್ಕು ಆಗುವುದಿಲ್ಲ. ಇನ್ನು ಕೆಲವನ್ನು ನೋಡಿದರೆ ಹೀಗೂ ನಡೆಯುವುದಕ್ಕೆ ಸಾಧ್ಯಾನಾ ಎಂದು ಬೆರಗಾಗುತ್ತದೆ. ಇದೀಗ ಇಂಥದ್ದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ : Crocodile Video- ನೀರಿನಲ್ಲಿ ಮೊಸಳೆಯೊಂದಿಗೆ ವ್ಯಕ್ತಿ ನೃತ್ಯ!
ಮದುವೆಯ ಶಾಸ್ತ್ರಗಳನ್ನು ಮುಗಿಸಿ ಬಂದ ವರ ಎಷ್ಟು ಸುಸ್ತಾಗಿದ್ದಾನೆಂದರೆ ಕುಳಿತಲ್ಲೇ ನಿದ್ದೆಗೆ ಜಾರಿದ್ದಾನೆ. ಮತ್ತೆ ಅಲ್ಲಿಗೆ ನೀರಿನೊಂದಿಗೆ ಬಂದ ವಧು ವರನಿಗೆ ನೀರು ಕುಡಿಸುತ್ತಾಳೆ. ನೀರು ಕುಡಿದ ವರ ಮತ್ತ ನಿದ್ದೆ ಹೋಗುತ್ತಾನೆ. ಆದರೆ ವಧು ಮತ್ತೆ ಕೈಯ್ತಲ್ಲಿ ಏನೋ ತಿಂಡಿಯನು ತಂದು ತಿನ್ನಿಸುತ್ತಾಳೆ. ಆದರೆ ವರನಿಗೆ ತನ್ನ ಸುತ್ತ ಮುತ್ತ ಏನು ಆಗುತ್ತಿದೆ ಎನ್ನುವುದೇ ತಿಳಿದಂತೆ ಕಾಣುತ್ತಿಲ್ಲ. ವರನ ಈ ಅವಸ್ಥೆಯನ್ನು ನೋಡಿ ಅಲ್ಲಿ ಸೇರಿದ್ದವರಿಗೂ ನಗು ತಡೆಯುವುದು ಸಾಧ್ಯವಾಗುವುದಿಲ್ಲ.
ಈ ತಮಾಷೆಯ ವೀಡಿಯೊವನ್ನು ದುಲ್ಹನಿಯಾ ಹೆಸರಿನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ. ವೀಡಿಯೋ ನೆಟಿಜನ್‌ಗಳು ಕೂಡ ಸಾಕಷ್ಟು ಲೈಕ್ ಮಾಡಿದ್ದು, ಕಾಮೆಂಟ್‌ಗಳನ್ನು ಕೂಡಾ ಹಾಕುತ್ತಿದ್ದಾರೆ.
ಇದನ್ನೂ ಓದಿ : Slapping Game: ವಿಚಿತ್ರ ಆಟಕ್ಕಿಳಿದ ಹುಡುಗಿಯರಿಂದ ಪರಸ್ಪರರ ಕೆನ್ನೆಗೆ ಕಪಾಳಮೋಕ್ಷ, ಇದೆಂಥಾ ಆಟ?
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.