OMG: ಮಾಲೆ ಹಾಕುವ ಬದಲು ವರನ ಕೊರಳಿಗೆ ಅಪಾಯಕಾರಿ ಹಾವನ್ನು ಹಾಕಿದ ವಧು, ವರ ಮಾಡಿದ್ದೇನು ಗೊತ್ತಾ?

Viral Video - ಈ ವಿಡಿಯೋ ನೋಡಿ ನೆಟ್ಟಿಗರ ರಾತ್ರಿ ನಿದ್ರೆಯೇ ಹಾರಿಹೋಗಿದೆ. ವಧು ತನ್ನ ಕೈಯಲ್ಲಿ ಒಂದು ಅಪಾಯಕಾರಿ ಹಾವನ್ನು ಹಿಡಿದುಕೊಂಡು ಬರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ಬಳಿಕ ಆಕೆ ಆ ಹಾವನ್ನು ವರಮಾಲೆಯ ರೂಪದಲ್ಲಿ ವರನ ಕೊರಳಿಗೆ ಹಾಕುತ್ತಾಳೆ.  

Written by - Nitin Tabib | Last Updated : May 28, 2022, 04:04 PM IST
  • ಮದುವೆಗಳಲ್ಲಿ ವಧುವರರು ಪರಸ್ಪರ ಮಾಲೆ ಬದಲಾಯಿಸಿಕೊಳ್ಳುವುದನ್ನು ನೀವು ನೋಡಿರಬಹುದು.
  • ಹಾವನ್ನು ಬದಲಾಯಿಸಿಕೊಳ್ಳುವುದು ಎಂದಾದರೂ ನೋಡಿದ್ದೀರಾ?
  • ಇಲ್ಲ ಎಂದಾದರೆ ಈ ಸುದ್ದಿಯನ್ನೊಮ್ಮೆ ಓದಿ ವೀಡಿಯೊವನ್ನೊಮ್ಮೆ ವೀಕ್ಷಿಸಿ.
OMG: ಮಾಲೆ ಹಾಕುವ ಬದಲು ವರನ ಕೊರಳಿಗೆ ಅಪಾಯಕಾರಿ ಹಾವನ್ನು ಹಾಕಿದ ವಧು, ವರ ಮಾಡಿದ್ದೇನು ಗೊತ್ತಾ? title=
Bride And Groom Video

Bizarre Video - ಮದುವೆ ಸಮಾರಂಭಗಳಲ್ಲಿ ವಿಚಿತ್ರ ಪದ್ಧತಿಗಳು ಇರುವುದನ್ನು ನೀವು ನೋಡಿರಬಹುದು. ಆದರೆ, ಮದುವೆಗಳಲ್ಲಿ ನಡೆಸಲಾಗುವ ಒಂದು ಸಂಪ್ರದಾಯದ ಇಂದು ನಾವು ನಿಮಗೆ ತೋರಿಸುತ್ತಿದ್ದು, ಅದನ್ನು ನೋಡಿ ನೀವೂ ಕೂಡ ಒಂದು ಕ್ಷಣ ತಬ್ಬಿಬ್ಬಾಗುವಿರಿ. ಸಾಮಾನ್ಯವಾಗಿ ವಿವಾಹ ಸಮಾರಂಭದಲ್ಲಿ ವರಮಾಲೆಯ ಕಾರ್ಯಕ್ರಮವಿರುವುದನ್ನು ನೀವೆಲ್ಲರೂ ಗಮನಿಸಿರಬಹುದು. ಈ ಕಾರ್ಯಕ್ರಮದಲ್ಲಿ ವಧು-ವರರು ಪರಸ್ಪರ ವರಮಾಲೆಯನ್ನು ಹಾಕುತ್ತಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧು-ವರರು ಪರಸ್ಪರ ಕೊರಳಿಗೆ ಹೂವಿನ ಹಾರನ್ನು ಹಾಕುವ ಬದಲು ಹಾವನ್ನು ಹಾರದ ರೂಪದಲ್ಲಿ ಹಾಕುತ್ತಿದ್ದಾರೆ. 

ಹಾರದ ರೂಪದಲ್ಲಿ ಹಾವು ಮತ್ತು ಹೆಬ್ಬಾವು ವಿನಿಮಯ
ವಿಡಿಯೋದಲ್ಲಿ ವಧು-ವರರು ವರಮಾಲೆಯ ರೂಪದಲ್ಲಿ ಅಪಾಯಕಾರಿ ಹಾವುಗಳನ್ನು ವಿಮಿಮಯ ಮಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಇಂಟರ್ನೆಟ್ ಬಳಕೆದಾರರ ರಾತ್ರಿ ನಿದ್ದೆಯೇ ಹಾರಿಹೋಗಿದೆ. ವಿಡಿಯೋ ನೋಡಿ ಪ್ರತಿಯೊಬ್ಬರೂ ಕೂಡ ತಬ್ಬಿಬ್ಬಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಪ್ರಸಾರಗೊಳ್ಳುತ್ತಲೇ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಆದರೆ, ಈ ವಿಡಿಯೋ ಎಲ್ಲಿಂದ ಹೊರಹೊಮ್ಮಿದೆ ಎಂಬುದು ಮಾತ್ರ ಇದುವರೆಗೆ ಗೊತ್ತಾಗಿಲ್ಲ.

ಇದನ್ನೂ ಓದಿ-Viral Video: ಏಕಾಏಕಿ ಚರಂಡಿಗೆ ಬಿದ್ದ ಮಗು ರಕ್ಷಿಸಲು ಈ ಮಹಿಳೆ ಮಾಡಿದ್ದೇನು ನೋಡಿ..!

ಖಾಲಿ ಇರುವ ಮೈದಾನವೊಂದರಲ್ಲಿ ಮದುವೆ ನಡೆಯುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಈ ಸಂದರ್ಭದಲ್ಲಿ ವಧು-ವರರ ವರಮಾಲೆಯ ಕಾರ್ಯಕ್ರಮವನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದಾರೆ. ಈ ವೇಳೆ ವರಮಾಲೆ ಕಾರ್ಯಕ್ರಮದಲ್ಲಿ ಜನರಿಗೆ ಟ್ವಿಸ್ಟ್ ವೊಂದು ಕಂಡು ಬಂದಿದೆ. ಅದೇನೆಂದರೆ, ವರಮಾಲೆ ಕಾರ್ಯಕ್ರಮದಲ್ಲಿ ವಧು ತನ್ನ ಕೈಯಲ್ಲಿ ಅಪಾಯಕಾರಿ ಹಾವನ್ನು ಹಿಡುದು ಬರುತ್ತಿದ್ದಾಳೆ ಮತ್ತು ವರ ಕೂಡ ಅಪಾಯಕಾರಿ ಹೆಬ್ಬಾವನ್ನು ಹಿಡಿದುಕೊಂಡು ಬರುತ್ತಾನೆ. ಅವರು ಪರಸ್ಪರರ ಕೊರಳಿಗೆ ಈ ಹಾವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ವಿಡೀಯೋ ನೋಡಿ...

ಇದನ್ನೂ ಓದಿ-'RCB..RCB' ಎಂದು ಕೂಗಲು ಅಭಿಮಾನಿಗಳಿಗೆ ಹೇಳಿದ ವಿರಾಟ್ ಕೊಹ್ಲಿ..!

ವರಮಾಲೆಯ ಈ ಪರಂಪರೆಯನ್ನು ನೋಡಿ ಕಂಗಾಲಾದ ಜನ 
ವಧು-ವರರ ಕೊರಳಿಗೆ ಹಾವು-ಹೆಬ್ಬಾವು ಬಿದ್ದ ಬಳಿಕ ಈ ವರಮಾಲೆ ಕಾರ್ಯಕ್ರಮ ಅಂತ್ಯವಾಗುತ್ತದೆ. ಈ ರೀತಿಯಾದ ಪರಂಪರೆ ನೋಡಲು ಸಿಗುವುದು ಅತಿ ವಿರಳ. ವಿಡಿಯೋ ನೋಡಿದ ಜನರು ತರಹೇವಾರಿ ಕಾಮೆಂಟ್ ಗಳನ್ನು ಮಾಡುತಿದ್ದಾರೆ. ಈ ವಿಡಿಯೋವನ್ನು psycho_biharii ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News