Chimpanji Flying Drone Viral Video: ಕೋತಿಗಳು ನಮ್ಮ ಪೂರ್ವಜರು ಎಂಬ ಸಂಗತಿಯನ್ನು ನೀವು ಬಾಲ್ಯದಲ್ಲಿ ಇರುವಾಗ ಪುಸ್ತಕಗಳಲ್ಲಿ ಓದಿರಬಹುದು ಅಂದರೆ, ಮಾನವರು ಮೊದಲು ಕೋತಿಗಳಾಗಿದ್ದರು, ನಂತರ ಅವರು ಕ್ರಮೇಣ ವಿಕಸನಗೊಂಡು ಮಾನವರಾದರು ಮತ್ತು ಇಂದು ಮಾನವರು ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಜೀವಿ ಎಂದು ಪರಿಗಣಿಸಲಾಗುತ್ತದೆ. ಆದರೂ ಕೂಡ, ಕೆಲ ಪ್ರಾಣಿಗಳ ಬುದ್ಧಿವಂತಿಕೆಯು ಸಾಮಾನ್ಯವಾಗಿ ಅಸಾಮಾನ್ಯವಾಗಿರುತ್ತದೆ. ಅವುಗಳಲ್ಲಿ  ಚಿಂಪಾಂಜಿಯ ಹೆಸರೂ ಕೂಡ ಶಾಮಿಲಾಗಿದೆ. ಅನೇಕ ಬಾರಿ ಕೆಲವು ಚಿಂಪಾಂಜಿಗಳು ತಮ್ಮ ಬುದ್ಧಿವಂತಿಕೆಯ ಉದಾಹರಣೆಯನ್ನು ನೀಡುತ್ತವೆ ಮತ್ತು ಅವುಗಳನ್ನು ನೋಡುವ ವೀಕ್ಷಕರು ಕಣ್ಬಿಟ್ಟು ನೋಡುತ್ತಲೇ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ, ಅಂತಹುದೇ ಒಂದು ಚಿಂಪಾಂಜಿಯ ವಿಡಿಯೋ (Trending Video) ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಅದನ್ನು ನೋಡಿ ಕೆಲ ಕ್ಷಣಕಾಲ ನಿಮ್ಮ ಕಣ್ಣುಗಳ ಮೇಲಿನ ಭರವಸೆಯೇ ನಿಮಗೆ ಹೊರಟುಹೋಗುತ್ತದೆ (Viral News In Kannada)


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral News: ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗುತ್ತಿದೆ 'Modi Ka Parivar', ವಿಭಿನ್ನ ಶೈಲಿಯಲ್ಲಿ 'ಮನ್ ಕೀ ಬಾತ್' ಹೇಳಿದ ಬಳಕೆದಾರರು!


ವಾಸ್ತವದಲ್ಲಿ, ಈ ವೀಡಿಯೊದಲ್ಲಿ, ಚಿಂಪಾಂಜಿಯು ರಿಮೋಟ್ ಸಹಾಯದಿಂದ ಡ್ರೋನ್ ಅನ್ನು ಹಾರಿಸುತ್ತಿರುವುದನ್ನು ನೀವು ನೋಡಬಹುದು, ಇನ್ನೊಂದೆಡೆ ಅದರ  ಸಂಗಾತಿಯು ಅದರ  ಪಕ್ಕದಲ್ಲಿ ಕುಳಿತು ಈ ತಂತ್ರಜ್ಞಾನವನ್ನು ಬಹಳ ಎಚ್ಚರಿಕೆಯಿಂದ ವೀಕ್ಷಿಸುತ್ತಿದೆ. ‘ಪ್ಲಾನೆಟ್ ಆಫ್ ದಿ ಏಪ್ಸ್’ ಸಿನಿಮಾ ಒಮ್ಮೆ ನೆನಪಿಸಿಕೊಂಡು ನೋಡಿ,  ಅದರಲ್ಲಿ ಚಿಂಪಾಂಜಿಯೊಂದು ಚುಚ್ಚುಮದ್ದಿನ ಸಹಾಯದಿಂದ ಮನುಷ್ಯರಂತೆ ಬುದ್ದಿವಂತರಾಗುವ ಜತೆಗೆ ಅವರಂತೆಯೇ ಮಾತನಾಡಲು ಆರಂಭಿಸುತ್ತದೆ ಎಂಬುದನ್ನು ತೋರಿಸಲಾಗಿದೆ. ನಂತರ ಅದು ತನ್ನದೇ ಆದ ಸೈನ್ಯವನ್ನು ರಚಿಸುತ್ತದೆ ಮತ್ತು ಮನುಷ್ಯರ ವಿರುದ್ಧ ಬಂಡಾಯ ಏಳುತ್ತದೆ. ಈ ವೀಡಿಯೋ (Trending News In Kannada) ನೋಡಿದ ನಂತರ ಜನರಿಗೆ ಆ ಚಿತ್ರ ಸ್ಮೃತಿಪಟಲಕ್ಕೆ ಮರುಕಳಿಸುತ್ತದೆ.  ಒಂದೇ ವ್ಯತ್ಯಾಸವೆಂದರೆ ಚಿತ್ರದಲ್ಲಿ ಚಿಂಪಾಂಜಿಯು ಗನ್ ಹಿಡಿದಿತ್ತು, ಈ ವೀಡಿಯೊದಲ್ಲಿ ಅದು ಡ್ರೋನ್ ಹಾರಿಸುತ್ತಿದೆ. 


ಇದನ್ನೂ ಓದಿ-Viral Video: ನರೇಂದ್ರ ಮೋದಿ ಯಾರು? ವಿದ್ಯಾರ್ಥಿಗಳಿಗೆ ಪ್ರಶ್ನಿಸಿದ ಪತ್ರಕರ್ತೆ, ಉತ್ತರ ಕೇಳಿ ನೀವೂ...!


ಈ ಅಚ್ಚರಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ @TheFigen_ ಹೆಸರಿನ ಐಡಿಯೊಂದಿಗೆ ಹಂಚಿಕೊಳ್ಳಲಾಗಿದೆ. ಕೇವಲ 15 ಸೆಕೆಂಡ್ ಗಳ ಈ ವೀಡಿಯೋವನ್ನು ಇಲ್ಲಿಯವರೆಗೆ ಮೂರು ಲಕ್ಷ 56 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ.


ಇಲ್ಲಿದೆ ವೈರಲ್ ವೀಡಿಯೋ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ