Trending Video: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಹಲವಾರು ವಿಡಿಯೋಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಇಂತಹದೊಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾನಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಮೊದಲ ಬಾರಿಗೆ ದಾಖಲಾಗಿರುವ ಈ ವಿಡಿಯೋ ನೋಡಿದ ನಂತರ ನೀವು ಬಹುಶಃ ಶಾಕ್ ಆಗುವಿರಿ. ಹೌದು, ವಾಸ್ತವದಲ್ಲಿ ಈ ವಿಡಿಯೋನಲ್ಲಿ ಓರ್ವ ವ್ಯಕ್ತಿ ವಿಶಿಷ್ಟವಾದ ವಿಶ್ವ ದಾಖಲೆಯನ್ನು ಮಾಡಿದ್ದಾನೆ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ.(Viral News In Kannada)
ಮೊಹಮ್ಮದ್ ರಶೀದ್ (Mohammed Rashid) ಅವರು ಒಂದೇ ನಿಮಿಷದಲ್ಲಿ 77 ಬಾಟಲಿಗಳ ಮುಚ್ಚಳವನ್ನು ತಲೆಯಿಂದ ತೆರೆದು (Uncaping Bottles) ಅದ್ಭುತ ದಾಖಲೆ ಮಾಡಿದ್ದಾರೆ. ರಶೀದ್ ಅವರ ಸಾಧನೆಯ ವೀಡಿಯೊವನ್ನು Instagram ನ @guinnessworldrecords ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ವ್ಯಕ್ತಿಯು ಹಲವಾರು ಗಾಜಿನ ಬಾಟಲಿಗಳನ್ನು ಒಂದರ ನಂತರ ಒಂದರಂತೆ ಆನ್ ಕ್ಯಾಪ್ ಮಾಡುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ-Viral Video: ಎಚ್ಚರ! ಲಿಫ್ಟ್ ನಲ್ಲಿ ಹೋಗುವಾಗ ನಿಮ್ಮೊಂದಿಗೂ ಈ ಘಟನೆ ಸಂಭವಿಸಬಹುದು!
ವೈರಲ್ ಆಗುತ್ತಿರುವ ವಿಡಿಯೋ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ. ಇದುವರೆಗೆ ಸುಮಾರು 1 ಲಕ್ಷ ಬಳಕೆದಾರರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಈ ವಿಡಿಯೋಗೆ ಹಲವರು ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಈ ವಿಶ್ವ ದಾಖಲೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಕೆಲ ಬಳಕೆದಾರರು, ಇದೇನು ಅಂತಹ ಆಸಕ್ತಿದಾಯಕ ದಾಖಲೆ ಅಲ್ಲ ಎಂದಿದ್ದಾರೆ.
ಇದನ್ನೂ ಓದಿ-Viral Video: ಸಾರಾಯಿ-ಚಕನಾ ಹಿಡಿದು ಸ್ಕೂಲ್ ಗೆ ಆಗಮಿಸಿದ ಶಿಕ್ಷಕ, ಮೇಜಿನ ಮೇಲೆಯೇ ಪೆಗ್ ತಯಾರಿಸಿ ಗುಟುಕ್!
ಜನರ ಕಾಮೇಟ್ ಹೀಗಿವೆ
ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ 'ನೈಜೀರಿಯಾದ ನನ್ನ ಸಹೋದರರು ಮತ್ತು ಸಹೋದರಿಯರು ಎಲ್ಲಿದ್ದೀರಾ, ಬಂದು ಈ ದಾಖಲೆಯನ್ನು ಮುರಿಯಿರಿ' ಎಂದಿದ್ದಾನೆ. ಮತ್ತೊರ್ವ ಬಳಕೆದಾರ "ಇದು ಮನೆಯಲ್ಲಿ ತಯಾರಿಸಿದ ಒಪ್ನರ್' ಎಂದಿದ್ದಾನೆ. ಮೂರನೇ ಬಳಕೆದಾರರು - 'ಬ್ರೋ, ನಿಮ್ಮ ಕೆಲಸ ಆಗಿದ್ದರೆ, ಬೇಗ ಹೋಗಿ ಪ್ಯಾರಸಿಟಮಾಲ್ ಮಾತ್ರೆ ನುಂಗಿ' ಎಂದಿದ್ದಾನೆ. ನಾಲ್ಕನೇ ಬಳಕೆದಾರರು ಬರೆದಿದ್ದಾರೆ - ಈ ದಾಖಲೆಯು ಅಸ್ಪೃಶ್ಯವಾಗಿ ಉಳಿಯುತ್ತದೆ ಎಂದರೆ, ಆರನೇ ಬಳಕೆದಾರರು - ಯಾರಾದರೂ ದಯವಿಟ್ಟು ಖಚಿತಪಡಿಸಿ ಮತ್ತು ಅವರ ಸ್ಥಿತಿ ಚೆನ್ನಾಗಿದೆ ಎಂದು ಹೇಳಿ ಎಂದಿದ್ದಾರೆ. ಒಂದು ವೇಳೆ ನಿಮಗೂ ಕೂಡ ಈ ವಿಡಿಯೋ ಇಷ್ಟವಾಗಿದ್ದರೆ, ಕಾಮೆಂಟ್ ವಿಭಾಗದಲ್ಲಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ