ಪ್ರತಿಯೊಬ್ಬ ಮನುಷ್ಯನಿಗೆ ಸ್ವಂತ ಮನೆ ಹೊಂದಬೇಕು ಎಂಬ ಕನಸಿರುತ್ತದೆ. ಆ ಕನಸಿಗಾಗಿ ಅನೇಕ ತ್ಯಾಗಗಳನ್ನು ಸಹ ಮಾಡೋ ಮನೋಭಾವ ಹೊಂದಿರುತ್ತಾರೆ. ಇನ್ನು ಇತ್ತೀಚಿನ ಕಾಲದಲ್ಲಿ ಸೇವಿಂಗ್ಸ್‌ ಮಾಡೋದೇ ದೊಡ್ಡ ಸಮಸ್ಯೆ. ಉಳಿಸಿದ ಹಣ ಮಾತ್ರ ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬ ಉದ್ದೇಶವನ್ನಿಟ್ಟುಕೊಂಡು ಅನೇಕರು ಸೇವಿಂಗ್ಸ್‌ ಮೊರೆ ಹೋಗುತ್ತಾರೆ. ಹಣದುಬ್ಬರದ ಯುಗದಲ್ಲಿ ಜನರು ಭವಿಷ್ಯದ ಬಗ್ಗೆ ಚಿಂತಿಸದೆ ಹಣವನ್ನು ವ್ಯರ್ಥ ಮಾಡುತ್ತಾರೆ. ಆದರೆ ಪ್ರತಿ ಪೈಸೆಗೂ ಬೆಲೆ ಕೊಡುವವರು, ಆಗ ಅವರು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದೀಗ ಅಂತೆಯೇ ಇಲ್ಲೊಂದು ಜೋಡಿ ತಮ್ಮ ಮನೆ ನಿರ್ಮಾಣದ ಕನಸು ನನಸು ಮಾಡಲು ತ್ಯಾಗವನ್ನೇ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Health Tips: ಉತ್ತಮ ಆರೋಗ್ಯದ ಆಗರ ಕ್ಯಾರೆಟ್‌ 


ಈ ಸುದ್ದಿಯ ವಿಶೇಷತೆ ಎಂದರೆ ಈ ಯುವ ಜೋಡಿ ಕೇವಲ 19 ವರ್ಷದಲ್ಲಿಯೇ ಸ್ವಂತ ಮನೆ ಖರೀದಿಸಿದ್ದಾರೆ. ಇದು ಹೇಗೆ ಸಾಧ್ಯವಾಯಿತು ಎಂಬ ಕುತೂಹಲವಿದೆಯೇ? ಹಾಗಾದ್ರೆ ಈ ವರದಿ ಓದಿ.


ಒಲಿವಿಯಾ ಗಿಲ್ ಮತ್ತು ಜ್ಯಾಕ್ ಇಕಾಟ್ ಎಂಬ ಜೋಡಿ ಕಳೆದ ವರ್ಷ ಜುಲೈನಲ್ಲಿ ತಮ್ಮ ಮನೆಯನ್ನು ಖರೀದಿಸಿದರು. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಹಣವನ್ನು ಉಳಿತಾಯ ಮಾಡಲು ಪ್ರಾರಂಭಿಸಿದರು. ಅಷ್ಟೇ ಅಲ್ಲದೆ, ದುಬಾರಿ ಹೊಟೇಲ್‌ಗಳಲ್ಲಿನ ಊಟ, ಪಬ್‌ ಕ್ಲಬ್‌ಗಳಲ್ಲಿ ಕಾಲ ಕಳೆಯುವಂತಹದ್ದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದರು. ಈ ಮೂಲಕ ಹಣವನ್ನು ಸಂಗ್ರಹಿಸಿ ಇದೀಗ ಮನೆಯನ್ನೇ ನಿರ್ಮಿಸಿದ್ದಾರೆ. 


ಇನ್ನು ಈ ಬಗ್ಗೆ ಒಲಿವಿಯಾ ಮಾತನಾಡಿದ್ದು, "ನಾವು ನಮ್ಮ ಸ್ವಂತ ನಿರ್ಮಿಸಿದ್ದೇವೆ. ಇದಕ್ಕೆ ಕಾರಣ ನಾವು ಕೆಲವು ಅಭ್ಯಾಸಗಳನ್ನು ತ್ಯಜಿಸಿರುವುದು. ನಾವು ಜಂಟಿ ಬ್ಯಾಂಕ್ ಖಾತೆಯನ್ನು ತೆರೆದು ಅದರಲ್ಲಿ ಹಣವನ್ನು ಸಂಗ್ರಹಿಸಿದೆವು. ಇದು ಹಣವನ್ನು ಉಳಿಸಲು ನಮಗೆ ಸಹಾಯ ಮಾಡಿತು" ಎಂದು ಹೇಳಿದರು. 


ಇದನ್ನೂ ಓದಿ: India vs England: ಭಾರತ-ಇಂಗ್ಲೆಂಡ್‌ ಟೆಸ್ಟ್: ಎಷ್ಟನೇ ಸ್ಥಾನದಲ್ಲಿ ಆಡಲಿದ್ದಾರೆ ಕೊಹ್ಲಿ!


"ಲಾಕ್‌ಡೌನ್‌ನಿಂದಾಗಿ ಎಲ್ಲಿಗೂ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಉಳಿತಾಯವನ್ನು ಮುಂದುವರೆಸಿದೆವು. ಮನೆಯಲ್ಲಿಯೇ ಲಾಕ್‌ ಆಗಿದ್ದದ್ದು, ಹಣ ಸೇವಿಂಗ್ಸ್‌ ಮಾಡಲು ಸಹಕಾರಿಯಾಯಿತು. ಅಷ್ಟೇ ಅಲ್ಲದೆ, ನಮ್ಮಲ್ಲಿರುವ ಬಜೆಟ್‌ನ್ನು ಇನ್ನಷ್ಟು ಹೆಚ್ಚಿಸಲು ಸರ್ಕಾರದ ಯೋಜನೆಯ ಸಹಾಯ ಪಡೆದೆವು" ಎಂದರು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.