ಮಳೆ ನೀರಿನ ಪರಿಹಾರಗಳು: ಭಾರತದ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಇದರಿಂದಾಗಿ ಬಿಸಿಲಿನ ಬೇಗೆಯಿಂದ ಜನರಿಗೆ ಪರಿಹಾರ ದೊರೆತಂತಾಗಿದೆ. ಅದೇ ಸಮಯದಲ್ಲಿ ಮಳೆ ನೀರು ಸಾಲದಿಂದ ಮುಕ್ತಿ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಜ್ಯೋತಿಷ್ಯ ಶಾಸ್ತ್ರದಲ್ಲಿ ಮಳೆ ನೀರಿನ ಬಗ್ಗೆ ಹಲವು ವಿಶೇಷ ಕ್ರಮಗಳನ್ನು ಹೇಳಲಾಗಿದೆ. ಹೆಚ್ಚುತ್ತಿರುವ ಸಾಲ ಮತ್ತು ಆರ್ಥಿಕ ಬಿಕ್ಕಟ್ಟನ್ನು ಮಳೆ ನೀರಿನಿಂದ ಹೇಗೆ ನೀಗಿಸಬಹುದು ಎಂಬುದನ್ನು ತಿಳಿಯೋಣ.
ವ್ಯಾಪಾರದಲ್ಲಿ ನಷ್ಟವಾಗುತ್ತಿದ್ದರೆ ಮಳೆ ನೀರಿನ ಪರಿಹಾರ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ವ್ಯವಹಾರದಲ್ಲಿ ನಿರಂತರವಾಗಿ ನಷ್ಟವನ್ನು ಎದುರಿಸುತ್ತಿದ್ದರೆ, ಅಂತಹವರು ಹಿತ್ತಾಳೆಯ ಪಾತ್ರೆಯಲ್ಲಿ ಮಳೆ ನೀರನ್ನು ಸಂಗ್ರಹಿಸಿ. ಇದರ ನಂತರ, ಏಕಾದಶಿಯ ದಿನದಂದು, ಈ ನೀರಿನಿಂದ ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವಿಗೆ ಅಭಿಷೇಕ ಮಾಡಿ. ಇದರಿಂದ ವ್ಯಾಪಾರದಲ್ಲಿ ನಷ್ಟವಾಗುವುದರಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.
ಸಾಲದಿಂದ ಮುಕ್ತಿ ಪಡೆಯಲು:
ಯಾವುದೇ ಒಬ್ಬ ವ್ಯಕ್ತಿ ನಿರಂತರವಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಅಂತಹವರಿಗೂ ಮಳೆ ನೀರಿನ ಪರಿಹಾರ ಪ್ರಯೋಜನಕಾರಿ ಆಗಿದೆ. ಮಳೆ ನೀರನ್ನು ಸಂಗ್ರಹಿಸಿ ಹನುಮಂತನಿಗೆ ಅರ್ಪಿಸಿ. ಇದರೊಂದಿಗೆ ಶ್ರಾವಣ ಮಾಸದಲ್ಲಿ ಹನುಮಾನ್ ಚಾಲೀಸಾವನ್ನು 52 ಬಾರಿ ಪಠಿಸಿ. ಈ ನೀರನ್ನು ಮನೆಯ ಮೂಲೆ ಮೂಲೆಗಳಲ್ಲಿ ಚಿಮುಕಿಸಿದರೆ ಮನೆಯಲ್ಲಿನ ನಕಾರಾತ್ಮಕ ಶಕ್ತಿ ಹೊರಹೋಗುವುದರ ಜೊತೆಗೆ ಸಾಲದಿಂದ ಮುಕ್ತಿ ಪಡೆಯಲು ಅನುಕೂಲಕರ ಎಂಬ ನಂಬಿಕೆ ಇದೆ.
ಇದನ್ನೂ ಓದಿ- Vastu Tips: ವೃತ್ತಿಜೀವನದಲ್ಲಿ ತ್ವರಿತ ಯಶಸ್ಸಿಗಾಗಿ ನಿಮ್ಮ ಮನೆಯಲ್ಲಿಯೂ ಇರಲಿ ಈ ಸಸ್ಯ
ಆರ್ಥಿಕ ತೊಂದರೆಗಳಿಂದ ಮುಕ್ತಿ ಪಡೆಯಲು-
ಯಾವುದೇ ಒಬ್ಬ ವ್ಯಕ್ತಿಯು ಕಷ್ಟ ಪಟ್ಟು ಸಂಪಾದಿಸೈದರೂ ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದರೆ ಮಳೆ ನೀರನ್ನು ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿ ಉತ್ತರ ದಿಕ್ಕಿನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಹಣಕಾಸಿನ ತೊಂದರೆ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
ಹಣದ ಕೊರತೆ ನೀಗಿಸಲು-
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಣದ ಕೊರತೆ ನೀಗಿಸಲು ಬಟ್ಟಲಲ್ಲಿ ಮಳೆ ನೀರು ತುಂಬಿ. ಈ ನೀರನ್ನು ಬಿಸಿಲಿನಲ್ಲಿ ಇರಿಸಿ ನಂತರ ಇಷ್ಟದೇವನ ಹೆಸರನ್ನು ಜಪಿಸಿ ಮಾವಿನ ಎಲೆಗಳ ಮೇಲೆ ಸಿಂಪಡಿಸಿ. ಇದರಿಂದ ಲಕ್ಷ್ಮಿಯ ಕೃಪೆ ಉಳಿಯುತ್ತದೆ.
ಇದನ್ನೂ ಓದಿ- Vastu Tips: ನಿಮ್ಮ ಪರ್ಸ್‌ನಲ್ಲಿರುವ ಈ ವಸ್ತುಗಳು ಬಡತನಕ್ಕೆ ಕಾರಣವಾಗಬಹುದು!
ಬಕೆಟ್‌ನಲ್ಲಿ ಮಳೆಯ ನೀರನ್ನು ತುಂಬಿಸಿ-
ವಾಸ್ತು ಪ್ರಕಾರ, ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಪಡೆಯಲು ಬಕೆಟ್‌ನಲ್ಲಿ ಮಳೆ ನೀರನ್ನು ತುಂಬಿಸಿ ಆ ನೀರಿನಲ್ಲಿ ಹಾಲನ್ನು ಬೆರೆಸಿ ಇಷ್ಟ ದೇವರನ್ನು ಸ್ಮರಿಸಿ ಆ ನೀರಿನಿಂದ ಸ್ನಾನ ಮಾಡುವುದು ಪ್ರಯೋಜನಕಾರಿ ಎಂಬ ನಂಬಿಕೆಯಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.