Bairagi movie Review : ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿ! ಇದುವೇ ನಟ ಶಿವಣ್ಣನ 'ಬೈರಾಗಿ' ಅಬ್ಬರ!

Bairagi movie Review: ಇಂದು ನಟ ಶಿವಣ್ಣ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಬೈರಾಗಿ' ರಿಲೀಸ್‌ ಆಗಿದ್ದು, ಕರುನಾಡಿನಾದ್ಯಂತ ಸಂಭ್ರಮ ಮನೆ ಮಾಡಿದೆ. ಹಾಗಾದ್ರೆ ಹೇಗಿದೆ 'ಬೈರಾಗಿ' ಅಂತಾ ಮುಂದೆ ನೋಡೋಣ ಬನ್ನಿ.

Written by - Malathesha M | Edited by - Yashaswini V | Last Updated : Jul 1, 2022, 05:45 PM IST
  • ಇಂದು ನಟ ಶಿವಣ್ಣ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಬೈರಾಗಿ' ರಿಲೀಸ್‌
  • 'ಬೈರಾಗಿ' ಅಂತಾ ಮುಂದೆ ನೋಡೋಣ ಬನ್ನಿ.
  • 'ಟಗರು' ಸಿನಿಮಾ ನಂತರ ಡಾ.ಶಿವರಾಜ್‌ಕುಮಾರ್‌ & ಡಾಲಿ ಧನಂಜಯ್‌ ಜೋಡಿ
Bairagi movie Review : ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿ! ಇದುವೇ ನಟ ಶಿವಣ್ಣನ 'ಬೈರಾಗಿ' ಅಬ್ಬರ! title=

ಭಾರತೀಯ ಚಿತ್ರರಂಗದ ಲೆಜೆಂಡ್‌ ಡಾ.ರಾಜ್‌ಕುಮಾರ್‌ ಅವರ ಪುತ್ರ ಡಾ. ಶಿವರಾಜ್‌ ಕುಮಾರ್‌ ತಮ್ಮ ಪ್ರತಿಯೊಂದು ಚಿತ್ರದಲ್ಲೂ ವಿಭಿನ್ನವಾದ ಕಥೆ ಆಯ್ಕೆ ಮಾಡಿಕೊಂಡು ಕನ್ನಡಿಗರ ಎದುರು ಇಡುತ್ತಿದ್ದಾರೆ. ಇಂದು ನಟ ಶಿವಣ್ಣ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಬೈರಾಗಿ' ರಿಲೀಸ್‌ ಆಗಿದ್ದು, ಕರುನಾಡಿನಾದ್ಯಂತ ಸಂಭ್ರಮ ಮನೆ ಮಾಡಿದೆ. ಹಾಗಾದ್ರೆ ಹೇಗಿದೆ 'ಬೈರಾಗಿ' ಅಂತಾ ಮುಂದೆ ನೋಡೋಣ ಬನ್ನಿ.

'ಟಗರು' ಸಿನಿಮಾ ನಂತರ ಡಾ.ಶಿವರಾಜ್‌ಕುಮಾರ್‌ & ಡಾಲಿ ಧನಂಜಯ್‌ ಜೋಡಿ ದೇಶಾದ್ಯಂತ ಕಮಾಲ್‌ ಮಾಡಿತ್ತು. 'ಟಗರು' ನೋಡಿ ಬಾಲಿವುಡ್‌ ಮಂದಿ ಕೂಡ ಬೆರಗಾಗಿದ್ದರು. ಅದರಲ್ಲೂ ಶಿವಣ್ಣ ಮತ್ತು ಡಾಲಿ ಜೋಡಿ ಸಖತ್‌ ಫೇಮಸ್‌ ಆಗಿಬಿಟ್ಟಿತ್ತು. ಹೀಗಾಗಿ ಇಬ್ಬರ ಕಾಂಬಿನೇಷನ್‌ನ ಹೊಸ ಸಿನಿಮಾಗಾಗಿ ಅಭಿಮಾನಿಗಳು ಹಲವು ವರ್ಷಗಳಿಂದ ಕಾಯುತ್ತಿದ್ದರು. ಈ ಕನಸು 'ಬೈರಾಗಿ' ಮೂಲಕ ನನಸಾಗಿದೆ.

ಇದನ್ನೂ ಓದಿ : ಜುಲೈ 2 ರಂದು ವಿಕ್ರಾಂತ ರೋಣ ಚಿತ್ರದ 'ರಾಜಕುಮಾರಿ' ಲಿರಿಕಲ್ ಸಾಂಗ್ ಬಿಡುಗಡೆ

'ಬೈರಾಗಿ' ಅಬ್ಬರ..!

'ಬೈರಾಗಿ' ಸಿನಿಮಾ ಅಬ್ಬರ ಹೇಗಿದೆ ಅಂದರೆ, ಮೊದಲಿಗೆ ಸುಮಾರು 300 ಸ್ಕ್ರೀನ್‌ಗಳಲ್ಲಿ ಚಿತ್ರವನ್ನ ರಿಲೀಸ್‌ ಮಾಡಲು ಯೋಜಿಸಲಾಗಿತ್ತು. ಆದರೆ 'ಬೈರಾಗಿ' ಅಬ್ಬರ ಕಂಡು ಖುದ್ದು ಸಿನಿಮಾ ತಂಡವೇ ಶಾಕ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಚಿತ್ರಮಂದಿರಗಳ ಸಂಖ್ಯೆಯನ್ನು 400ಕ್ಕೆ ಏರಿಸಲಾಗಿದ್ದು, 400ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ 'ಬೈರಾಗಿ' ರಿಲೀಸ್‌ ಆಗಿದೆ. ನಟ ಶಿವಣ್ಣ ಇಂದು ಬೆಳಗ್ಗೆಯಿಂದಲೇ ಹಲವು ಥಿಯೇಟರ್‌ಗಳಿಗೆ ಭೇಟಿ ನೀಡಿ, ಅಭಿಮಾನಿಗಳ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.

ಲೆಜೆಂಡ್ ಜೋಡಿ..!

ನಟ ಶಿವಣ್ಣ ಹಾಗೂ ಡಾಲಿ ಜೋಡಿ ಮತ್ತೊಮ್ಮೆ ಮೋಡಿ ಮಾಡಿದೆ. ಚಿತ್ರ ವೀಕ್ಷಿಸಿದ ಪ್ರೇಕ್ಷಕ ಪ್ರಭು 'ಬೈರಾಗಿ' ಸಿನಿಮಾಗೆ ಫುಲ್‌ ಮಾರ್ಕ್ಸ್‌ ನೀಡಿದ್ದು, ಫ್ಯಾಮಿಲಿ ಎಂಟರ್ಟೈನ್‌ಮೆಂಟ್‌ ಇದು ಅಂತಾ ಹೆಮ್ಮೆಯಿಂದ ರಿವ್ಯೂವ್‌ ಕೊಟ್ಟಿದ್ದಾನೆ. ಅದರಲ್ಲೂ ಶಿವಣ್ಣನ ಅಭಿನಯಕ್ಕೆ ಮತ್ತೊಮ್ಮೆ ಕನ್ನಡಿಗರು ಫಿದಾ ಆಗಿದ್ದು, ಡಾಲಿಯ ಅಬ್ಬರ ಹಾಗೂ ಸೈಲೆಂಟ್‌ ಸೀನ್‌ ಆಕ್ಟಿಂಗ್‌ ನೋಡಿ ಭಾವುಕರಾಗಿದ್ದಾರೆ ಫ್ಯಾನ್ಸ್ಸ. ಹೀಗೆ 'ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿ' ಅನಾವರಣವೇ 'ಬೈರಾಗಿ' ಸಿನಿಮಾ ಮೂಲಕ ನಡೆದು ಹೋಗಿದೆ.

ಡೈರೆಕ್ಟರ್ ವಿಜಯ್ ಮಿಲ್ಟನ್ ಅಚ್ಚುಕಟ್ಟಾಗಿ 'ಬೈರಾಗಿ' ಸಿನಿಮಾ ನಿರ್ದೇಶನ ಮಾಡಿದ್ದು, ಅನೂಪ್ ಸೀಳಿನ್ ಸಂಗೀತ ಇಂಪಾಗಿದೆ. ಇನ್ನು ನಟ ಶಿವಣ್ಣನ ಎದುರು ಮತ್ತೊಮ್ಮೆ ನೆಗೆಟಿವ್ ಶೇಡ್‌ನಲ್ಲಿ ಡಾಲಿ ಧನಂಜಯ್‌ ಎಂಟ್ರಿಯನ್ನ ಕೊಟ್ಟರೂ ರೋಚಕ ತಿರುವು ಈ ಸಿನಿಮಾಗೆ ಇದೆ. ಇವರಿಗೆ ಪೃಥ್ವಿ ಅಂಬರ್, ಅಂಜಲಿ ಸೇರಿ ದೊಡ್ಡ ತಾರಾ ಬಳಗವೇ ಸಾಥ್‌ ನೀಡಿದೆ. ನಿರ್ಮಾಪಕ ಕೃಷ್ಣ ಸಾರ್ಥಕ್ ಯಾವುದಕ್ಕೂ ಕೊರತೆ ಬಾರದಂತೆ ಸಿನಿಮಾಗೆ ಸಾಥ್‌ ನೀಡಿದ್ದು, 'ಬೈರಾಗಿ' ಮತ್ತೊಂದು ಬ್ಲಾಕ್‌ ಬಸ್ಟರ್‌ ಅನ್ನೋದರಲ್ಲಿ ಎರಡನೇ ಮಾತಿಲ್ಲ.

ಇದನ್ನೂ ಓದಿ : Naresh Babu : 'ನಾನು ಡೈವೋರ್ಸ್ ಕೊಡುತ್ತಿರುವುದನ್ನ ಪವಿತ್ರ ಲೋಕೇಶ್ ಗೆ ಕನೆಕ್ಟ್ ಮಾಡಬೇಡಿ'

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News