‌Viral Video: ಹಸಿವು ಎಲ್ಲರಿಗೂ ಒಂದೇ.. ತಾಯಿಯೂ ಅಷ್ಟೇ.. ತಾಯಿಯ ಪ್ರೀತಿಗೆ ಸಾಟಿ ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಅಂತಹ ತಾಯಿಯ ಬಳಿ ಹಸಿವಿನಿಂದ ಬರುವ ಯಾರಿಗಾದರೂ ಹಸಿವು ನೀಗುತ್ತೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. 


COMMERCIAL BREAK
SCROLL TO CONTINUE READING

ಹೌದು ಹಸಿವಿನಿಂದ ಬಳಲುತ್ತಿದ್ದ ಹಂದಿಯೊಂದಕ್ಕೆ ಹಸು ಹಾಲುಣಿಸಿದ ವಿಚಿತ್ರ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಪಿಯ ಶ್ರೀಕಾಕುಳಂ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಪಟಪಟ್ಟಣಂನಲ್ಲಿರುವ ರಾಮ ಮಂದಿರದ ಬಳಿ ಹಸುವೊಂದು ವಿಶ್ರಾಂತಿ ಪಡೆಯುತ್ತಿದೆ. 


ಇದನ್ನೂ ಓದಿ-ಬೆಸ್ಟ್ ಫ್ರೆಂಡ್ ಗಂಡನನ್ನೇ ಮದುವೆಯಾದ ಖ್ಯಾತ ನಟಿ !


ಅದೇ ಸಮಯಕ್ಕೆ ಹಸಿವಿನಿಂದ ಬಳಲುತ್ತಿದ್ದ ಹಂದಿ ಮರಿಯು ಯಾವುದೇ ಭಯವಿಲ್ಲದೆ ಹಸುವಿನ ಬಳಿಗೆ ಹೋಗಿ ಹಾಲು ಕುಡಿಯುತ್ತಿದೆ.. ಆದರೆ, ಹಸು ಬೆದರದೆ ವರಾಹಕ್ಕೆ ಹಾಲುಣಿಸಿತು. ಇದೇ ವೇಳೆ ಕೆಲ ಸ್ಥಳೀಯರು ಇದನ್ನೆಲ್ಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸಖತ್‌ ವೈರಲ್ ಆಗುತ್ತಿದೆ.  


ಈ ವಿಡಿಯೋಗೆ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದ್ದು, ತಾಯಿ ಎಂದರೇ ಎಲ್ಲರಿಗೂ ಒಂದೇ.. ತಾಯಿ ಪ್ರೀತಿಗೆ ಸರಿಸಾಟಿಯೇ ಇಲ್ಲ.. ಗೋಮಾತೆ ಎಂದು ಕರೆಯುವುದೇ ಈ ಕಾರಣಕ್ಕೆ.. ಭಾರತೀಯ ಸಂಸ್ಕೃತಿ ಹಸಿದವರಿಗೆ ಅನ್ನ ನೀಡುವುದು ಎಂದೆಲ್ಲ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.. 


ಇದನ್ನೂ ಓದಿ-ನಟನೆಯ ಹೊರತಾಗಿ ಕಿಚ್ಚ ಸುದೀಪ್‌ ಆಯ್ದುಕೊಂಡಿದ್ದ ದಾರಿ ಏನು ಗೊತ್ತಾ? ಅವರು ಮಾಡಿದ ವಿದ್ಯಾಭ್ಯಾಸ ಏನು ಅಂತಾ ಗೊತ್ತಾದ್ರೆ ನೀವು ಶಾಕ್‌ ಆಗ್ತೀರ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.