ನಟನೆಯ ಹೊರತಾಗಿ ಕಿಚ್ಚ ಸುದೀಪ್‌ ಆಯ್ದುಕೊಂಡಿದ್ದ ದಾರಿ ಏನು ಗೊತ್ತಾ? ಅವರು ಮಾಡಿದ ವಿದ್ಯಾಭ್ಯಾಸ ಏನು ಅಂತಾ ಗೊತ್ತಾದ್ರೆ ನೀವು ಶಾಕ್‌ ಆಗ್ತೀರ!

sudeep birthday: ಇಂದು ( ಸೆಪ್ಟೆಂಬರ್‌ 02) ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಕಿಚ್ಚನ ಜನ್ಮದಿನ, 51 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಸುದೀಪ್‌ ಅವರ ಕುರಿತು ಅನೇಕ ತಿಳಿಯದ ಮಾಹಿತಿಗಳು ಏನೆಂದು ನೋಡೋಣ...
 

1 /10

ಇಂದು ( ಸೆಪ್ಟೆಂಬರ್‌ 02) ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಕಿಚ್ಚನ ಜನ್ಮದಿನ, 51 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಸುದೀಪ್‌ ಅವರ ಕುರಿತು ಅನೇಕ ತಿಳಿಯದ ಮಾಹಿತಿಗಳು ಏನೆಂದು ನೋಡೋಣ...

2 /10

ಶ್ರೀಮಂತ ಕುಟುಂದಲ್ಲಿ ಕಿಚ್ಚ ಸುದೀಪ್‌ ಸೆಪ್ಟೆಂಬರ್‌ 02ರ 1973 ರಲ್ಲಿ ಜನಿಸಿದರು. ನಟನ ತಂದೆ ಹೋಟೆಲ್‌ ಉದ್ಯಮಿ.

3 /10

ಇಂಜಿನಿಯರಿಂಗ್‌ ಮುಗಿಸಿರುವ ಅವರು ಕ್ರಿಕೆಟ್‌ ಕಡೆಗೆ ಹೆಚ್ಚು ಆಸಕ್ತಿ ಹೊಂದಿದ್ದರು, ನಂತರ ಕಿರುತೆರೆಗೆ ಎಂಟ್ರಿ ಕೊಟ್ಟ ಸುದೀಪ್‌ ನಿಧಾನವಾಗಿ ನಟಿಸ ತೊಡಗಿದರು.  

4 /10

ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಕಿಚ್ಚ ಮೊದಲು ನಟಿಸಿದ್ದು, ʻಪ್ರೇಮದ ಕಾದಂಬರಿʼ ಎನ್ನುವ ಧಾರವಾಹಿಯಲ್ಲಿ.

5 /10

ಇಲ್ಲಿಂದ ಪ್ರಾರಂಭವಾದ ಅವರ ನಟನೆಯ ಪಯಣ ಇಂದು ಅವರನ್ನು ಸ್ಟಾರ್‌ ಹೀರೋ ಎಂಬ ಪಟಕ್ಕೆ ಏರಿಸಿದೆ.

6 /10

ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಒಡನೆ ಯಾರಿಗೂ ಅಷ್ಟು ಸುಲಭವಾಗಿ ಗೆಲುವು ಸಿಗಲು ಸಾಧ್ಯ ಇಲ್ಲ, ಕಿಚ್ಚ ಕೂಡ ಇದೇ ರೀತಿಯ ಅನುಭವಗಳನ್ನು ಪಡೆದು ಬಂದವರು. ಸಿನಿಮಾದಲ್ಲಿ ಹಿಟ್‌ ಆಗುವ ಮುಂಚೆ ಬಹಳಷ್ಟು ಕಷ್ಟಗಳನ್ನು ದಾಟಿ ಬಂದವರು.

7 /10

ಕಿಚ್ಚ ನಾಯಕನಾಗಿ ಸಿನಿಮಾಗೆ ಎಂಟ್ರಿ ಏನೋ ಕೊಟ್ಟಿದ್ದರು, ಆದರೆ ಈ ಸಿನಿಮಾಗಳು ಅವರಿಗೆ ಅಷ್ಟೇನು ಫೇಮ್‌ ತಂದು ಕೊಡಲಿಲ್ಲ, ಇನ್ನೂ ಅವರು ನಟಿಸಿದ ಮೂರನೇ ಸಿನಿಮಾ ಅಂತು ಅವರಿಗೆ ಬ್ರೇಕ್‌ ತಂದು ಕೊಟ್ಟಿತ್ತು.

8 /10

ಸತತ ಮೂರು ಸಿನಿಮಾಗಳ ಗೆಲುವಿಲ್ಲದೆ ಕಿಚ್ಚ ಕಂಗಾಲಾಗಿದ್ದರು, ಬ್ರೇಕ್‌ ತೆಗೆದುಕೊಂಡು ಹುಚ್ಚ ಸಿನಿಮಾ ಮೂಲಕ ಕಿಚ್ಚ ಎನರ್ಜಿಟಿಕ್‌ ಆಗಿ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ ಕಿಚ್ಚ ಅವರ ಜೀವನದಲ್ಲಿ ಒಂದು ದೊಡ್ಡ ತಿರುವು ತಂದುಕೊಟ್ಟಿತ್ತು.

9 /10

ಇನ್ನೂ ಹುಚ್ಚ ಸಿನಿಮಾದ ನಂತರ ಕಿಚ್ಚನ ಹಲವಾರು ಸಿನಿಮಾಗಳು ತರೆಕಂಡವಾದರೂ ಅಷ್ಟೇನು ಸೌಂಡ್‌ ಮಾಡಲಿಲ್ಲ. ಆದರೆ, ಯೋಗರಾಜ್‌ ಭಟ್‌ ನಿರ್ದೇಶನದ ರಂಗ ಎಸ್‌. ಎಸ್‌.ಎಲ್‌. ಸಿ ಸಿನಿಮಾ ಸುದೀಪ್‌ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು.

10 /10

ಹೀಗೆ ಕಿರುತೆರೆಯ ಮೂಲಕ ಎಂಟ್ರಿ ಕೊಟ್ಟ ಸುದೀಪ್‌ ಇಂದು ಸಾಲು ಸಾಲು ಹಿಟ್‌ ಸಿನಿಮಾಗಳ ಸರದಾರ, ಕರುನಾಡಲ್ಲಿ ಸಾಗರದಷ್ಟು ಅಭಿಮಾನಿಗಳು ಹೊಂದಿರುವ ಕಿಚ್ಚ ಇಂದು ತಮ್ಮ 51 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.