Viral Video On Internet: ಸಾಮಾಜಿಕ ಮಧ್ಯಮಗಳಲ್ಲಿ ಪ್ರಾಣಿಗಳ ಹಲವು ವಿಡಿಯೋಗಳು ವೈರಲ್ ಆಗುತ್ತಿರುವುದನ್ನು ನೀವು ನೋಡಿರಬಹುದು. ಬಹುತೇಕ ವಿಡಿಯೋಗಳಲ್ಲಿ ಪ್ರಾಣಿಗಳ ನಡುವಿನ ಸೆಣೆಸಾಟ ತೋರಿಸಲಾಗುತ್ತದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಅಪಾಯಕಾರಿ ಮೊಸಳೆಯೊಂದು ವ್ಯಕ್ತಿಯೊಬ್ಬನನ್ನು ಬಹುತೇಕ ನುಂಗಿ ಹಾಕಿದೆ ಎಂಬಂತೆ ತೋರುತ್ತಿದೆ. ಆದರೆ ಅಷ್ಟೊತ್ತಿಗೆ ಅಲ್ಲಿಗೆ ವ್ಯಕ್ತಿಯ ಲೈಫ್ ಲೈನ್ ರೂಪದಲ್ಲಿ ನೆರವಿಗೆ ಆತನ ಸ್ನೇಹಿತರು ಧಾವಿಸುತ್ತಾರೆ. ಈ ಸ್ನೇಹಿತರು ಹೇಗಾದರೂ ಮಾಡಿ ತಮ್ಮ ಸ್ನೇಹಿತನ ಜೀವ ಉಳಿಸಬೇಕು ಎಂಬ ಪ್ರಯತ್ನದಲ್ಲಿರುವುದನ್ನು ನೀವು ನೋಡಬಹುದು. 

COMMERCIAL BREAK
SCROLL TO CONTINUE READING

ತಮ್ಮ ಜೀವವನ್ನೇ ಅಪಾಯಕ್ಕೆ ಒಡ್ಡಿದ ಸ್ನೇಹಿತರು
ಈ ವಿಡಿಯೋದಲ್ಲಿ ನೀವು ಅಪಾಯಕಾರಿ ಮೊಸಳೆಯೊಂದನ್ನು ಗಮನಿಸಬಹುದು. ಓರ್ವ ವ್ಯಕ್ತಿ ಮೊಸಳೆಯ ಬಾಲದ ಭಾಗದಲ್ಲಿ ಕುಳಿತಿದ್ದಾನೆ. ಮತ್ತೊಬ್ಬ ವ್ಯಕ್ತಿ ಮೊಸಳೆಯ ಬಾಯಿಯ ಬಳಿ ನಿಂತಿದ್ದಾನೆ. ಈ ವ್ಯಕ್ತಿಗಳು ತಮ್ಮ ಪ್ರಾಣವನ್ನು ಏಕೆ ಪಣಕ್ಕಿಟ್ಟಿದ್ದಾರೆ? ಎಂದು ನೀವೂ ಕೂಡ ಯೋಚಿಸುತ್ತಿರಬಹುದು. ಉತ್ತರ ತಿಳಿದುಕೊಳ್ಳುವ ಮುನ್ನ ನೀವೂ ಕೂಡ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಒಮ್ಮೆ ವೀಕ್ಷೀಸಲೇಬೇಕು. 



ಇದನ್ನೂ ಓದಿ-ಕೋತಿಯ ಈ ಮನೆ ಕೆಲಸ ನೋಡಿದ್ರೆ ನಗು ಬರೋದು ಗ್ಯಾರಂಟಿ

ವ್ಯಕ್ತಿಯನ್ನೇ ನುಂಗಿ ಹಾಕಿದ ಮೊಸಳೆ
ಈ ಇಬ್ಬರು ವ್ಯಕ್ತಿಯನ್ನು ಹೊರತುಪಡಿಸಿ ವಿಡಿಯೋದಲ್ಲಿ ಮೂರನೆಯ ವ್ಯಕ್ತಿಯನ್ನು ನೀವು ಗಮನಿಸಬಹುದು. ಮೂರನೇ ವ್ಯಕ್ತಿ ಈ ಇಬ್ಬರು ವ್ಯಕ್ತಿಗಳಿಗೆ ಸ್ನೇಹಿತನಾಗಿದ್ದು, ಮೊಸಳೆ ಆತನನ್ನು ಬಹುತೇಕ ನುಂಗಿಹಾಕಿದೆ. ಹೊರಗಿರುವ ಇಬ್ಬರು ಹೇಗಾದರೂ ಮಾಡಿ ತಮ್ಮ ಸ್ನೇಹಿತನ ಪ್ರಾಣ ಕಾಪಾಡಬೇಕು ಎಂಬ ಪ್ರಯತ್ನದಲ್ಲಿದ್ದಾರೆ. ಹಿಂಭಾಗದಲ್ಲಿ ಕುಳಿತಿರುವ ವ್ಯಕ್ತಿ ಮೊಸಳೆಯ ಬಾಲನ್ನು ಹಿಡಿದಿದ್ದಾನೆ. ಮೊಸಳೆಯ ಮುಂಭಾಗದಲ್ಲಿ ನಿಂತ ವ್ಯಕ್ತಿಯು ಅಪಾಯಕಾರಿ ಮೊಸಳೆಯ ದವಡೆಯಿಂದ ತನ್ನ ಸ್ನೇಹಿತನನ್ನು ಹೊರಗೆಳೆಯುತ್ತಿರುವುದನ್ನು ನೀವು ನೋಡಬಹುದು. 


ಇದನ್ನೂ ಓದಿ-Cobra VS Mongoose: ಹಾವು ಮುಂಗುಸಿಯ ನಡುವೆ ಭೀಕರ ಕಾಳಗ, ಗೆದ್ದಿದ್ದು ಯಾರು? ವಿಡಿಯೋ ನೋಡಿ

ವೈರಲ್ ಆಗಿದೆ ಈ ವಿಡಿಯೋ
ಆದರೆ, ಈ ಮೊಸಲಿ ಅಸಲಿಯಾಗಿದೆಯೋ ಅಥವಾ ನಕಲಿಯಾಗಿದೆಯೋ ಎಂಬುದನ್ನು ಹೇಳುವುದು ಸ್ವಲ್ಪ ಕಷ್ಟ ಸಾಧ್ಯವೇ ಎಂಬಂತೆ ತೋರುತ್ತಿದೆ. ವಿಡಿಯೋದ ಕಾಮೆಂಟ್ ಸೆಕ್ಷನ್ ನಲ್ಲಿ ಹಲವು ಬಳಕೆದಾರರು ಇದೊಂದು ನಕಲಿ ಮೊಸಳೆಯಾಗಿದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೂ ಕೂಡ ಈ ವಿಡಿಯೋ ಇಂಟರ್ನೆಟ್ ಮೇಲೆ ಭಾರಿ ವೈರಲ್ ಆಗುತ್ತಿದೆ. 3 ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಎರಡು ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋಗೆ ತಮ್ಮ ಲೈಕ್ ನೀಡಿದ್ದಾರೆ. 


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.