Good News: ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದ ಬಿಗ್ ಗಿಫ್ಟ್! ಸಾವಿರಾರು ಅಧಿಕಾರಿಗಳಿಗೆ ಬಡ್ತಿ ಯೋಗ

Central Employees Promotion: ಸೆಕ್ರೆಟರಿಯೇಟ್ ಸೇವೆಗಳಿಗೆ ಸಂಬಂಧಿಸಿದ 8,000 ಕ್ಕೂ ಅಧಿಕ ಸರ್ಕಾರಿ ಅಧಿಕಾರಿಗಳಿಗೆ ಏಕಕಾಲಕ್ಕೆ ಬಡ್ತಿ ನೀಡಲಾಗಿದೆ. ಈ ಎಲ್ಲ ನೌಕರರಿಗೆ ಸಾಮೂಹಿಕ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.  

Written by - Nitin Tabib | Last Updated : Jul 2, 2022, 09:41 PM IST
  • ಮೂರು ಪ್ರಮುಖ ಸೆಕ್ರೆಟರಿಯೇಟ್ ಸೇವೆಗಳಿಗೆ ಸಂಬಂಧಿಸಿದ 8,000 ಕ್ಕೂ ಅಧಿಕ
  • ಸರ್ಕಾರಿ ಅಧಿಕಾರಿಗಳಿಗೆ ಸಿಬ್ಬಂದಿ ಸಚಿವಾಲಯವು ಏಕಕಾಲಕ್ಕೆ ಬಡ್ತಿ ನೀಡಿದೆ
  • ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಶುಕ್ರವಾರ ಮಾಹಿತಿ ನೀಡಿದ್ದಾರೆ.
Good News: ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದ ಬಿಗ್ ಗಿಫ್ಟ್! ಸಾವಿರಾರು ಅಧಿಕಾರಿಗಳಿಗೆ ಬಡ್ತಿ ಯೋಗ title=
Central Employees Promotion

Centre s BIG gift to govt employees: ಮೂರು ಪ್ರಮುಖ ಸೆಕ್ರೆಟರಿಯೇಟ್ ಸೇವೆಗಳಿಗೆ ಸಂಬಂಧಿಸಿದ 8,000 ಕ್ಕೂ ಅಧಿಕ ಸರ್ಕಾರಿ ಅಧಿಕಾರಿಗಳಿಗೆ ಸಿಬ್ಬಂದಿ ಸಚಿವಾಲಯವು ಏಕಕಾಲಕ್ಕೆ ಬಡ್ತಿ ನೀಡಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಶುಕ್ರವಾರ ಮಾಹಿತಿ ನೀಡಿದ್ದಾರೆ. ಸೆಂಟ್ರಲ್ ಸೆಕ್ರೆಟರಿಯೇಟ್ ಸರ್ವಿಸ್ (ಸಿಎಸ್ಎಸ್), ಸೆಂಟ್ರಲ್ ಸೆಕ್ರೆಟರಿಯೇಟ್ ಸ್ಟೆನೋಗ್ರಾಫರ್ ಸರ್ವಿಸ್ (ಸಿಎಸ್ಎಸ್ಎಸ್) ಮತ್ತು ಸೆಂಟ್ರಲ್ ಸೆಕ್ರೆಟರಿಯೇಟ್ ಕ್ಲರಿಕಲ್ ಸರ್ವಿಸ್ (ಸಿಎಸ್ಸಿಎಸ್) ಗೆ ಸೇರಿದ ಈ ಉದ್ಯೋಗಿಗಳಿಗೆ 'ಸಾಮೂಹಿಕ ಬಡ್ತಿ' ನೀಡುವ ಆದೇಶಗಳನ್ನು ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಮೂರು ಸೇವೆಗಳು 'CSS, CSSS ಮತ್ತು CSCS' ಕೇಂದ್ರ ಸಚಿವಾಲಯದ ಆಡಳಿತಾತ್ಮಕ ಕೆಲಸದ ಬೆನ್ನೆಲುಬಾಗಿವೆ ಎಂಬುದು ಇಲ್ಲಿ ಉಲ್ಲೇಖನೀಯ.

ಸಿಬ್ಬಂದಿ ಸಚಿವಾಲಯ ನೀಡಿದ ಮಾಹಿತಿ ಇದು
ಬಡ್ತಿ ನೀಡಲಾಗಿರುವ ಒಟ್ಟು 8,089 ಉದ್ಯೋಗಿಗಳಲ್ಲಿ 4,734 ಸಿಎಸ್‌ಎಸ್‌, 2,966 ಸಿಎಸ್‌ಎಸ್‌ಎಸ್ ಮತ್ತು 389 ಸಿಎಸ್‌ಸಿಎಸ್‌ ಸಿಬ್ಬಂದಿಗಳು ಶಾಮೀಲಾಗಿದ್ದಾರೆ ಎಂದು ಸಿಬ್ಬಂದಿ ಸಚಿವಾಲಯ ಮಾಹಿತಿ ನೀಡಿದೆ. ಸಿಎಸ್‌ಎಸ್, ಸಿಎಸ್‌ಎಸ್‌ಎಸ್ ಮತ್ತು ಸಿಎಸ್‌ಸಿಎಸ್‌ಗೆ ಸಂಬಂಧಿಸಿದ ಈ ಉದ್ಯೋಗಿಗಳಿಗೆ ಭಾರಿ ಬಡ್ತಿ ನೀಡುವ ಆದೇಶಗಳನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (DoPT) ಅಧ್ಯಕ್ಷತೆಯಲ್ಲಿ ಕಳೆದ ಎರಡು ತಿಂಗಳುಗಳ ಅವಧಿಯಲ್ಲಿ ಹಲವು ಸುತ್ತಿನ ಉನ್ನತ ಮಟ್ಟದ ಸಭೆಗಳ ಬಳಿಕ ಹೊರಡಿಸಲಾಗಿದೆ ಎಂದು ಸಿಬ್ಬಂದಿ ರಾಜ್ಯ ಸಚಿವ ಸಿಂಗ್ (ಎಂಒಎಸ್) ಹೇಳಿದ್ದಾರೆ. 

ಇದನ್ನೂ ಓದಿ-Cobra VS Mongoose: ಹಾವು ಮುಂಗುಸಿಯ ನಡುವೆ ಭೀಕರ ಕಾಳಗ, ಗೆದ್ದಿದ್ದು ಯಾರು? ವಿಡಿಯೋ ನೋಡಿ

ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು
ಕೆಲವು ಆದೇಶಗಳು ಬಾಕಿ ಉಳಿದಿರುವ ರಿಟ್ ಅರ್ಜಿಗಳ ಫಲಿತಾಂಶಕ್ಕೆ ಒಳಪಟ್ಟಿರುವ ಕಾರಣ ಕಾನೂನು ತಜ್ಞರ ಜೊತೆಗೂ ಕೂಡ ವ್ಯಾಪಕ ಸಮಾಲೋಚನೆ ನಡೆಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಸರ್ಕಾರಿ ನೌಕರರು ಸರಿಯಾದ ಬಡ್ತಿ ಇಲ್ಲದೆ ಸೇವೆಯಿಂದ ನಿವೃತ್ತಿ ಪಡೆಯುತ್ತಿರುವುದು ನಿರಾಶಾದಾಯಕ ಸಂಗತಿ ಎಂದ ಸಿಂಗ್, ಇಂತಹ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ-"ಬಂಡಾಯ ಶಾಸಕರನ್ನು ಸೇರಲು ನಂಗೂ ಆಫರ್ ಬಂದಿತ್ತು"

ಇದಕ್ಕೂ ಮುನ್ನ ಭಾರೀ ಪ್ರಚಾರ ನಡೆದಿತ್ತು
ಸಿಎಸ್ಎಸ್, ಸಿಎಸ್ಎಸ್ಎಸ್ ಮತ್ತು ಸಿಎಸ್ಸಿಎಸ್ ಈ ಮೂರು ಸೇವೆಗಳು ಕೇಂದ್ರ ಸಚಿವಾಲಯದ ಆಡಳಿತಾತ್ಮಕ ಕಾರ್ಯಗಳ ಬೆನ್ನೆಲುಬಾಗಿವೆ ಎಂದು ಹೇಳಿರುವ ಸಚಿವರು, ಹಲವಾರು ಸಂದರ್ಭಗಳಲ್ಲಿ ಕೇಂದ್ರ ಸಚಿವಾಲಯದ ಅಧಿಕಾರಿಗಳ ನಿಯೋಗಗಳನ್ನು ಭೇಟಿ ಮಾಡುವ ಮೂಲಕ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದಿದ್ದಾರೆ. ಮೂರು ವರ್ಷಗಳ ಹಿಂದೆ ಡಿಒಪಿಟಿಯು ವಿವಿಧ ಇಲಾಖೆಗಳಲ್ಲಿ ವಿವಿಧ ಹಂತದ ಸುಮಾರು 4,000 ಅಧಿಕಾರಿಗಳಿಗೆ ಬೃಹತ್ ಬಡ್ತಿ ನೀಡಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಅವರು ಹೇಳಿದ್ದಾರೆ. ಸಚಿವಾಲಯದ ಸೇವೆಗಳು ಆಡಳಿತದ ಅತ್ಯಗತ್ಯ ಸಾಧನಗಳಾಗಿವೆ ಎಂದು ಸಿಂಗ್ ಹೇಳಿದ್ದಾರೆ, ಏಕೆಂದರೆ ಅವರು ಸಿದ್ಧಪಡಿಸಿದ ಟಿಪ್ಪಣಿಗಳು ಮತ್ತು ಕರಡುಗಳು ಸರ್ಕಾರದ ನೀತಿಗಳ ಆಧಾರವಾಗಿರುತ್ತವೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News