Trending Video: ಮನುಷ್ಯರಂತೆ ಪ್ರಾಣಿಗಳು ಕೂಡ ತಮ್ಮದೇ ಆದ ಪ್ರಪಂಚವನ್ನು ಹೊಂದಿವೆ, ಅವುಗಳ ಪ್ರೀತಿ, ಅವುಗಳ ಜಗಳಗಳು ವಿಭಿನ್ನ ಮಟ್ಟದಲ್ಲಿರುತ್ತವೆ ಪ್ರಾಣಿಗಳ ನಡುವಿನ ಜಗಳಗಳು ತುಂಬಾ ಆಸಕ್ತಿದಾಯಕವಾಗಿವೆ, ಅನೇಕ ಬಾರಿ ದುರ್ಬಲವಾಗಿ ಕಾಣುವ ಪ್ರಾಣಿ ಕೂಡ ದೊಡ್ಡ ಪ್ರಾಣಿಯನ್ನು ಸೋಲಿಸುತ್ತದೆ. ಕಾಡುಕೋಣ ಕಾಡಿನ ರಾಜನಾದ ಸಿಂಹವನ್ನು ಹೊಡೆದುರುಳಿಸಬಹುದು ಎಂಬುದನ್ನೂ ನೀವೆಂದಾದರೂ ಊಹಿಸಿದ್ದೀರಾ? ಇಲ್ಲ ಎಂದಾದರೆ, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ವಿಡಿಯೋವನ್ನು ನೀವೊಮ್ಮೆ ನೋಡಲೆಬೇಕು. ಏಕೆಂದರೆ, ಪ್ರಸ್ತುತ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನಿಮಗೆ ಅಂತಹದ್ದೊಂದು ದೃಶ್ಯ ನೋಡಲು ಸಿಗಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ಹುಡ್ಗಿಗಿ ಏನ್ ಮಾಡಾಕ್ ಹೋಗಿದ್ದ್ ಇಂವಾ ಇವನ್ ಗತಿ ಹಿಂಗಾಯ್ತ್ ! ವಿಡಿಯೋ ನೋಡ್ರಿ..


ವೀಡಿಯೊವನ್ನು ಇಲ್ಲಿ ವೀಕ್ಷಿಸಿ



ಸಿಂಹಗಳ ಹಿಂದಿನ ಎದುರು ತೊಡೆತಟ್ಟಿದ ಕಾಡುಕೋಣ
Instagram ನಲ್ಲಿ ಹಂಚಿಕೊಳ್ಳಲಾಗಿರುವ ಈ ವೀಡಿಯೊದಲ್ಲಿ, ಸಿಂಹಗಳ ಹಿಂಡಿನ ಮುಂದೆ ಏಕಾಂಗಿಯಾಗಿ ನಿಂತ ಕಾದುಕೊಂಡವೊಂದು ನಂತರ ತೊಡೆತಟ್ಟಿ ಹಿಂದನ್ನು ಪ್ರವೇಶಿಸುತ್ತಿರುವುದನ್ನು ನೀವು ನೋಡಬಹುದು. ಅದು ಕೇವಲ ಸಿಂಹಗಳ ಹಿಂದಿನ ಎದುರು ಸೆಡ್ಡು ಮಾತ್ರ ಹೊಡೆಯದೆ, ಅವುಗಳನ್ನು ಹಿಮ್ಮೆಟ್ಟಿಸುವಲ್ಲಿ ಕೂಡ ಯಶಸ್ವಿಯಾಗಿದೆ. ಈ ಕಾಡುಕೋಣ ಓಡಿ ಬಂದು ನೇರವಾಗಿ ಸಿಂಹವೊಂದನ್ನು ತನ್ನ ಕೊಂಬುಗಳಿಂದ ಗುದ್ದಿ ಗಾಳಿಯಲ್ಲಿ ತೂರುವುದನ್ನು ನೀವು ವೈರಲ್ ವಿಡಿಯೋದಲ್ಲಿ ಕಾಣಬಹುದು. ಸಿಂಹವು ಕೂಡ ತಾನು ಕಾಡಿನ ರಾಜ ಎಂಬುದನ್ನೂ ನೆನಪಿಸಿಕೊಂಡು ತೀವ್ರ ಫೈಟ್ ನೀಡಿ ಕೊಂಡವನ್ನು ತನ್ನ ದವಡೆ ಹಾಗೂ ಪಂಜಗಳ ಸಹಾಯದಿಂದ ಮಣಿಸಲು ಯತ್ನಿಸುತ್ತದೆ.  ಆದರೆ ಆದರೆ ತಂತ್ರ ಫಲಕಾರಿಯಾಗುವುದಿಲ್ಲ ಮತ್ತು ಕಾಡುಕೋಣ ತನ್ನ ಎರಡು ಕೊಂಬುಗಳ ಸಹಾಯದಿಂದ ಸಿಂಹವನ್ನು ಫೂಟ್ಬಾಲ್ ರೀತಿ ಗಾಳಿಯಲ್ಲಿ ಎರಡು-ಮೂರು ಸಾರಿ ತೂರಿ ಕೆಳಗೆ ಬೀಸಾಡುತ್ತದೆ. ಕಾಡುಕೋಣದ ಈ ರೌದ್ರಾವತಾರವನ್ನು ಕಂಡು ಇತರ ಸಿಂಹಗಳೂ ಸಿಂಹವನ್ನು ರಕ್ಷಿಸಲು ಧಾವಿಸುವ ಮುನ್ನವೇ ಅಪಾಯವನ್ನು ಮನಗಂಡ ಕಾಡುಕೋಣ ತಕ್ಷಣ ಅಲ್ಲಿಂದ ತನ್ನನ್ನು ತಾನು ರಕ್ಷಿಸಿಕೊಂಡು ಓಡಿಹೋಗುತ್ತದೆ.


 


ಇದನ್ನೂ ಓದಿ-Viral Video: ಹುಡ್ಗೀನ ಪಾರ್ಕ್ ಗೆ ಕರೆದು ಅಂಥದ್ದೇನ್ ಮಾಡಿದ ಹುಡ್ಗ, ನೆಟ್ಟಿಗರ ಪಿತ್ತ ನೆತ್ತಿಗೇರಿದೆ!


ಕಾಡಿನ ರಾಜನನ್ನು ಕಂಡ 'ಬಡಪಾಯಿ ಸಿಂಹ' ಎಂದ ನೆಟ್ಟಿಗರು
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಸುಳಿದಾಡುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋಗೆ ಇದುವರೆಗೆ 18 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ವೀಡಿಯೊ ಕುರಿತು ಪ್ರತಿಕ್ರಿಯಿಸಿದ ಬಳಕೆದಾರರು, 'ಬಡಪಾಯಿ ಸಿಂಹ ತೀವ್ರವಾಗಿ ಗಾಯಗೊಂಡಿದೆ' ಎಂದು ಬರೆದಿದ್ದಾರೆ. ಅದೇ ಸಮಯದಲ್ಲಿ, ಇನ್ನೊಬ್ಬ ಬಳಕೆದಾರರು, 'ಎಲ್ಲಾ ಸಿಂಹಗಳು ಸೇರಿ ಅದನ್ನು ಸಾಯಿಸಲು ಯತ್ನಿಸುತ್ತಿವೆ ಇದು ತಪ್ಪು' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಬರೆದಾಗ, 'ಪಾಪ ಬಡಪಾಯಿ ಸಿಂಹ ಚೇತರಿಸಿಕೊಂಡಿದೆ ಎಂದು ನಾನು ಭಾವಿಸುತ್ತೇನೆ' ಎಂದು ಬರೆದಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.