Snake video : ಸಾಮಾಜಿಕ ಮಾಧ್ಯಮದಲ್ಲಿ ಒಂದಕ್ಕಿಂತ ಒಂದು  ಅಪಾಯಕಾರಿ ವೀಡಿಯೊಗಳನ್ನು ಶೇರ್ ಮಾಡಲಾಗುತ್ತಿರುತ್ತದೆ.  ಈ ವಿಡಿಯೋಗಳನ್ನು ನೋಡುವಾಗ ಮೈ ಜುಮ್ಮೆನ್ನುತ್ತದೆ. ಅದರಲ್ಲೂ ಹಾವಿನ ವಿಡಿಯೋಗಳನ್ನು ನೋಡುವಾಗಲಂತೂ ಭಯ ಆವರಿಸಿ ಬಿಡುತ್ತದೆ. ಹಾವು ಚಿಕ್ಕದೆ ಆಗಲಿ, ದೊಡ್ಡದೇ ಆಗಲಿ ಒಂದು ಕ್ಷಣಕ್ಕೆ ಹೌಹಾರಿಸಿ ಬಿಡುತ್ತದೆ. ಅಂಥದ್ದರಲ್ಲಿ ಒಬ್ಬ ಬಾಲಕಿ ಅಪಾಯಕಾರಿ ಹಾವಿನ ಜೊತೆ ತುಂಬಾ ಸ್ನೇಹದಿಂದ ವರ್ತಿಸುತ್ತಿರುವಂತೆ ಕಾಣುತ್ತಿದೆ. ಈ ವಿಡಿಯೋ ಎಂಥವರನ್ನು ಕೂಡಾ ನಡುಗಿಸಿ ಬಿಡುತ್ತದೆ. 


COMMERCIAL BREAK
SCROLL TO CONTINUE READING

ಯುವತಿಯ ಕಾಲಿಗೆ ಸುತ್ತು ಹಾಕಿ ಕುಳಿತಿರುವ ಹಾವು : 
ಈ ವೀಡಿಯೊದ ಆರಂಭದಲ್ಲಿ, ಅಪಾಯಕಾರಿ ಹಾವು ಹುಡುಗಿಯ ಕಾಲಿಗೆ ಸುತ್ತಿರುವುದನ್ನು ಕಾಣಬಹುದು. ಹಾವು ಬಹಳ ದಪ್ಪಗಾಗಿ ಮತ್ತು ಉದ್ದವಾಗಿ ಇದೆ ಎನ್ನುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಇಷ್ಟು ದೊಡ್ಡದಾಗಿರುವ ಹಾವು  ಬಾಲಕಿಯ ಕಾಲನ್ನು ಸುತ್ತು ಹಾಕಿರುವ ಕಾರಣ,  ಆಕೆಗೆ ನಡೆಯಲು ಕೂಡಾ ಬಹಳ ಕಷ್ಟವಾಗುತ್ತಿದೆ.  ಇಲ್ಲಿ ನಿಜವಾಗಿಯೂ ಏನಾಗಿದೆ ಎನ್ನುವುದನ್ನು ತಿಳಿಯಲು ಈ ವಿಡಿಯೋ ನೋಡಲೇ ಬೇಕು . 


ಇದನ್ನೂ ಓದಿ : Viral Video : ಸದ್ದಿಲ್ಲದೆ ಮರಿಗಳ ನುಂಗಿದ ಹಾವು, ಕರುಳು ಹಿಂಡುವಂತಿದೆ ತಾಯಿ ಪಕ್ಷಿಯ ರೋಧನೆ


ಹುಡುಗಿಯ ಮುಖದಲಿಲ್ಲ ಕಿಂಚಿತ್ತೂ ಭಯ : 
ಇಲ್ಲಿ ಹಾವು ಈ ರೀತಿ ಸುತ್ತು ಹಾಕಿಕೊಂಡಿದ್ದರೂ  ಹುಡುಗಿ ಮಾತ್ರ ಒಂದು ಚೂರು ಕೂಡಾ ಹೆದರಿದಂತೆ ಕಾಣಿಸುವುದಿಲ್ಲ. ಬಾಲಕಿ ತನ್ನ ಕಾಲಿನಿಂದ ಹಾವನ್ನು ಬಿಡಿಸಿ  ಅಲ್ಲೇ ಇರುವ ವ್ಯಕ್ತಿಯೊಬ್ಬನಿಗೆ ಒಪ್ಪಿಸುವುದನ್ನು ಕಾಣಬಹುದು.  ಹುಡುಗಿಯ ಶೂ ಕೂಡಾ ಹಾವಿನ ಬಳಿ ಉಳಿದುಕೊಂಡಿರುವುದನ್ನು ಕಾಣಬಹುದು. ಹುಡುಗಿ ಓಡಿ ಹೋಗಿ ಹಾವಿನ ಬಳಿ ಇರುವ ತನ್ನ ಶೂವನ್ನು ಹಿಡಿದುಕೊಂಡು ಬರುತ್ತಾಳೆ. 


 



ವೀಡಿಯೊ ವೈರಲ್ ಆಯಿತು  ವೀಡಿಯೋ : 
ಈ ವಿಡಿಯೋವನ್ನು  Instagram ನಲ್ಲಿ  ಶೇರ್ ಮಾಡಲಾಗಿದೆ. ವೀಡಿಯೊವನ್ನು ಹಲವು ಬಾರಿ ವೀಕ್ಷಿಸಲಾಗಿದೆ. ಅಷ್ಟೇ ಅಲ್ಲ ಸಾವಿರಾರು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು  ಕೂಡಾ ನೀಡುತ್ತಿದ್ದಾರೆ. 


ಇದನ್ನೂ ಓದಿ : ಕೇವಲ ಒಂದು ಹಪ್ಪಳಕ್ಕಾಗಿ ರಣಾಂಗಣವಾಯಿತು ಮದುವೆ ಮನೆ, ಹೊಡೆದಾಟದ ವಿಡಿಯೋ ಇಲ್ಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.