ಲಕ್ನೋ: ವರದಕ್ಷಿಣೆ ಕೊಡುವುದು-ತೆಗೆದುಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದ್ದರೂ ಇಂದಿಗೂ ಈ ಪದ್ಧತಿ ಮುಂದುವರೆದುಕೊಂಡು ಬಂದಿದೆ. ವರದಕ್ಷಿಣೆಯ ಶಾಪದಿಂದ ಇಂದಿಗೂ ಅನೇಕ ಯುವತಿಯರ ಜೀವನವೇ ಹಾಳಾಗುತ್ತಿದೆ. ಕೆಲವೊಬ್ಬರು ತಮಗೆ ವರದಕ್ಷಿಣೆ ಬೇಡವೆಂದು ಉದಾರತೆ ತೋರಿದ್ರೆ, ಇನ್ನೂ ಕೆಲವರು ವರದಕ್ಷಿಣೆ ನೀಡದ್ದಕ್ಕೆ ಮದುವೆಯನ್ನೇ ನಿಲ್ಲಿಸುತ್ತಾರೆ. ಅನೇಕರು ಹೆಣ್ಣು ಗಂಡನ ಮನೆಗೆ ಬಂದ ಕೂಡಲೇ ವರದಕ್ಷಿಣೆ ಕಿರುಕುಳ ನೀಡುತ್ತಾರೆ. ಇದರಿಂದ ಮನನೊಂದು ಅನೇಕರು ಜೀವ ಕಳೆದುಕೊಳ್ಳುತ್ತಾರೆ.


COMMERCIAL BREAK
SCROLL TO CONTINUE READING

ಉತ್ತರಪ್ರದೇಶದಲ್ಲಿ ವರದಕ್ಷಿಣೆಯಾಗಿ ಬೈಕ್ ನೀಡದ್ದಕ್ಕೆ ವರನೊಬ್ಬ ಮದುವೆ ಮಂಟಪದಿಂದಲೇ ಎಸ್ಕೇಪ್ ಆಗಿದ್ದಾನೆ. ಈ ಘಟನೆ ಬಾರಾಬಂಕಿಯಲ್ಲಿ ನಡೆದಿದ್ದು, ತಾಳಿ ಕಟ್ಟುವ ಕೊನೆ ಕ್ಷಣದಲ್ಲಿಯೇ ಮದುವೆ ಮಂಟಪದಿಂದ ವರ ಪರಾರಿಯಾಗಿದ್ದಾನೆ. ಮದುವೆ ಸಿದ್ಧತೆಗೆಂದು ಲಕ್ಷಾಂತರ ರೂ. ಖರ್ಚು ಮಾಡಿದ್ದ ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆಗೆ ತೆರಳಿ ಎಸ್ಕೇಪ್ ಆಗಿರೋ ವರನ ವಿರುದ್ಧ ದೂರು ನೀಡಿದ್ದಾರೆ.


ಇದನ್ನೂ ಓದಿ: Shepherd Viral Video: ಕುರಿ ಜೊತೆ ಕುರಿಗಾಹಿಯ ಸಖತ್ ಡ್ಯಾನ್ಸ್: ವಿಡಿಯೋ ನೋಡಿದ್ರೆ ದಿಲ್ ಖುಷ್ ಆಗೋದು ಗ್ಯಾರಂಟಿ


ನಾಪತ್ತೆಯಾಗಿರೋ ವರನನ್ನು ಆದಷ್ಟು ಬೇಗ ಬಂಧಿಸಿ ಕರೆತರದಿದ್ದರೆ ನಾವೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ವಧುವಿನ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ನಾಪತ್ತೆಯಾಗಿರುವ ವರನನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ.  


ಇದೇ ಡಿಸೆಂಬರ್ 2ರಂದು ಮದುವೆ ನಿಗಧಿಯಾಗಿತ್ತು. ಅಯೋಧ್ಯಯ ಮಾವೈ ಮೂಲದ ಯುವಕನ ಜೊತೆ ಬಾರಾಬಂಕಿ ಮೂಲದ ಯುವತಿಯ ಮದುವೆ ನಿಶ್ಚಯವಾಗಿತ್ತು. ತಿಲಕ ಇಡುವ ಕಾರ್ಯಕ್ರಮದಲ್ಲಿ ವರನ ಕುಟುಂಬಸ್ಥರಿಗೆ ಚಿನ್ನದ ಉಂಗುರ ಮತ್ತು 5 ಸಾವಿರ ರೂ. ಹಣ ನೀಡಲಾಗಿತ್ತು. ಆದರೆ ನಿಮ್ಮ ಮಗಳನ್ನು ಮದುವೆಯಾಗಬೇಕೆಂದರೆ ನನಗೆ ಹೊಸ ಬೈಕ್ ಕೊಡಿಸಬೇಕು ಅಂತಾ ವರ ಡಿಮ್ಯಾಂಡ್ ಮಾಡಿದ್ದ. ಮದುವೆ ದಿನ ಕೊಡಿಸುವುದಾಗಿ ವಧುವಿನ ಸಂಬಂಧಿಕರು ಭರವಸೆ ನೀಡಿದ್ದರು.


ಇದನ್ನೂ ಓದಿ: Video Viral: ಪೊಲೀಸ್ ಠಾಣೆಯೊಂದರಲ್ಲಿ ಕಳ್ಳನೊಬ್ಬನ ಪ್ರಾಮಾಣಿಕ ತಪ್ಪೊಪ್ಪಿಗೆ ಹೇಗಿದೆ ಗೊತ್ತಾ?


ಅದರಂತೆ ಮದುವೆ ದಿನ ಬೈಕ್ ಎಲ್ಲಿ ಎಂದು ವರ ಪ್ರಶ್ನಿಸಿದ್ದಾನೆ. ವಧುವಿನ ಕುಟುಂಬಸ್ಥರು ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಬೈಕ್ ಕೊಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮದುವೆ ಮಂಟಪದಲ್ಲಿಯೇ ಎರಡೂ ಕುಟುಂಬಗಳ ನಡುವೆ ಬೈಕ್ ವಿಚಾರವಾಗಿ ಜಗಳ ನಡೆದಿತ್ತು. ಇದೇ ವೇಳೆ ಮದುವೆ ಮಂಟಪದಿಂದ ವರ ಎಸ್ಕೇಪ್ ಆಗಿದ್ದಾನೆ. ಮದುವೆ ಸ್ಥಗಿತಗೊಂಡ ಬಳಿಕ ವಧುವಿನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ, ಶೀಘ್ರವೇ ನಾಪತ್ತೆಯಾಗಿರೋ ವರನನ್ನು ಹುಡುಕಿಕೊಡುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.