ಚಾಮರಾಜನಗರ: ನಾಡಿನೆಲ್ಲೆಡೆ ಇಂದು ಶ್ರದ್ಧಾ-ಭಕ್ತಿಯಿಂದ ಷಷ್ಠಿ ಆಚರಣೆ ಮಾಡುತ್ತಿದ್ದು ಅದರಂತೆ ಗಡಿಜಿಲ್ಲೆ ಚಾಮರಾಜನಗರದಲ್ಲೂ ಕೂಡ ಹಲವರು ವಿಭಿನ್ನವಾಗಿ  ಷಷ್ಠಿ ಆಚರಿಸಿ ಗಮನ ಸೆಳೆದಿದ್ದಾರೆ.


COMMERCIAL BREAK
SCROLL TO CONTINUE READING

ಹೌದು..., ಹಾವಿನ ಹುತ್ತಕ್ಕೆ ಹಾಲು, ಬೆಣ್ಣೆ, ಪಂಚಾಮೃತದ ತನಿ ಎರೆಯುವುದು ಸಾಮಾನ್ಯ. ಆದರೆ, ಚಾಮರಾಜನಗರ ಸೇರಿದಂತೆ ಚಾಮರಾಜನಗರ ತಾಲೂಕಿನ ಹಲವು ಗ್ರಾಮಗಳಲ್ಲಿ ಹುತ್ತಕ್ಕೆ ಕೋಳಿ ಬಲಿ ಕೊಟ್ಟು ಮೊಟ್ಟೆಯನ್ನು ಅರ್ಪಿಸಿ ಭಕ್ತಿ-ಭಾವದಿಂದ ನಾಗಪ್ಪನಿಗೆ ನಮಿಸಿದ್ದಾರೆ.


ಇದನ್ನೂ ಓದಿ- ಎಲ್ಲೇ ಹೋದರೂ ಜೊತೆ ಬಿಡುವುದಿಲ್ಲ ! ನೀವೂ ಮನಸೋಲುತ್ತಿರಿ ಕೋಳಿ, ನಾಯಿ, ಕೋತಿ ಗೆಳೆತನಕ್ಕೆ ! ಇಲ್ಲಿದೆ ನೋಡಿ ವಿಡಿಯೋ


ಚಾಮರಾಜನಗರದ ಉಪ್ಪಾರ ಬಡಾವಣೆ, ಮಲ್ಲಯ್ಯನಪುರ, ಉತ್ತುವಳ್ಳಿ, ಯಳಂದೂರು ತಾಲೂಕಿನ ಗುಂಬಳ್ಳಿ ಹೀಗೆ ಬಹುತೇಕ ಕಡೆ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಹುತ್ತಕ್ಕೆ ಕೋಳಿ ಬಲಿ ಕೊಟ್ಟು ನಾಗಪ್ಪನಿಗೆ ನಮಿಸಿ, ಇಷ್ಟಾರ್ಥ ಈಡೇರಿಕೆಗೆ ಬೇಡಿದ್ದಾರೆ.


ವಾಸ್ತವವಾಗಿ, ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಈ ಪ್ರದೇಶದ ಜನರು  ಸರ್ಪಗಳು ತಮಗೆ ತೊಂದರೆ ಕೊಡದಿರಲೆಂದು ಕೋಳಿ ಬಲಿ ಕೊಟ್ಟು ಕೋಳಿ ತಲೆ, ಮೊಟ್ಟೆಯನ್ನೇ ತನಿ ಎರೆಯುತ್ತಾರೆ. ಭಯ ಭಕ್ತಿಯಿಂದ ಈ ಹಬ್ಬ ಆಚರಿಸುವ ಭಕ್ತಾಧಿಗಳು ಪೂಜೆ ಮುಗಿಯುವವರೆಗೂ ಒಂದು ಹನಿ ನೀರನ್ನೂ ಕುಡಿಯುವುದಿಲ್ಲ.  


ಇದನ್ನೂ ಓದಿ- Viral Video: ಬಂಡೀಪುರದಲ್ಲಿ ಸಫಾರಿ ವಾಹನಕ್ಕೆ ಬೇರೆ ದಾರಿ ತೋರಿದ ಸಲಗ!!


ಕೋಳಿ ಬಲಿಕೊಟ್ಟರೆ ಸರ್ಪ ಸಂಬಂಧದ ತೊಂದರೆ ನಿವಾರಣೆ ಜೊತೆಗೆ ತಮ್ಮ ಇಷ್ಟಾರ್ಥವೂ ಒಂದು ವರ್ಷದೊಳಗೆ ಈಡೇರಲಿದೆ ಎಂವುದು ಹಲವರ ನಂಬಿಕೆಯಾಗಿದ್ದು ಅದರಂತೆ ಈ ಸಂಪ್ರದಾಯ ಆಚರಿಸಿಕೊಂಡು ಬರಲಾಗುತ್ತಿದೆ.


ಇನ್ನು, ಕೋಳಿ ಬಲಿ ಕೊಡದವರು ಹುತ್ತಕ್ಕೆ ಹಣ್ಣು, ಹಾಲು, ಬೆಣ್ಣೆ, ತುಪ್ಪ ಅರ್ಪಿಸಿ ಸುಬ್ರಹ್ಮಣ್ಯ ಷಷ್ಠಿ ಆಚರಣೆ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.