ವ್ಯಕ್ತಿಯ ಹೆಲ್ಮೆಟ್ ನಲ್ಲಿ ನಾಗರ ಹಾವು, ಹೆಡೆಬಿಚ್ಚಿ ದಾಳಿ, ದಂಗಾಗಿಸುವ ವಿಡಿಯೋ ಇಲ್ಲಿದೆ

Viral Video: ಹಾವಿನ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಹೆಲ್ಮೆಟ್ ಒಳಗೆ ಒಂದು ನಾಗರಹಾವು ಅಡಗಿ ಕುಳಿತಿರುವುದನ್ನು ನೋಡಬಹುದು. ನಾವು ಹೆಲ್ಮೆಟ್ ಯಾವಾಗಲೂ  ಸ್ವಚ್ಛ ಸ್ಥಳದಲ್ಲಿ ಇಡಬೇಕು ಎಂಬುದು ಈ ವಿಡಿಯೋ ಸಂದೇಶವಾಗಿದೆ. (Spiritual News In Kannada)

Written by - Nitin Tabib | Last Updated : Nov 30, 2023, 07:30 PM IST
  • ಯಾರಾದರೂ ಅವಸರದಲ್ಲಿ ಹೆಲ್ಮೆಟ್ ತೆಗೆದುಕೊಳ್ಳಲು ಹೋದರೆ ಮತ್ತು ಹೆಲ್ಮೆಟ್ ಒಳಗೆ ಹಾವು ಹೆಡೆಬಿಚ್ಚಿ ಕುಳಿತಿರುವುದನ್ನು ನೋಡಿದರೆ
  • ಆ ವ್ಯಕ್ತಿಯ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನು ಒಮ್ಮೆ ಯೋಚಿಸಿ ನೋಡಿ. ಹೀಗಾಗಿ ಹೆಲ್ಮೆಟ್ ಅನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ.
  • ನೀವು ಹೆಲ್ಮೆಟ್ ಅನ್ನು ಬೇಕಾಬಿಟ್ಟಿ ಎಲ್ಲಾದರು ಇರಿಸಿದರೆ, ಇಂತಹ ಘಟನೆ ನಿಮ್ಮೊಂದಿಗೂ ಕೂಡ ನಡೆಯುವ ಸಾಧ್ಯತೆ ಇದೆ.
ವ್ಯಕ್ತಿಯ ಹೆಲ್ಮೆಟ್ ನಲ್ಲಿ ನಾಗರ ಹಾವು, ಹೆಡೆಬಿಚ್ಚಿ ದಾಳಿ, ದಂಗಾಗಿಸುವ ವಿಡಿಯೋ ಇಲ್ಲಿದೆ title=

ನವದೆಹಲಿ: ಬೈಕ್ ಹೆಲ್ಮೆಟ್ ಒಳಗೆ ಹಾವು ಕುಳಿತಿರುವುದನ್ನು ನೋಡಿದರೆ ಒಂದು ಕ್ಷಣ ಉಸಿರೆ ನಿಲ್ಲುತ್ತದೆ. ಒಬ್ಬ ವ್ಯಕ್ತಿಯೊಂದಿಗೆ ಈ ಘಟನೆ ವಾಸ್ತವದಲ್ಲಿ ಸಂಭವಿಸಿದೆ, ಅವರು ಅದನ್ನು ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ, ಬಳಿಕ ಈ ವಿಡಿಯೋ  ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿದ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ದಂಗಾಗಿದ್ದಾರೆ. (Viral News In Kannada)

ಯಾರಾದರೂ ಅವಸರದಲ್ಲಿ ಹೆಲ್ಮೆಟ್ ತೆಗೆದುಕೊಳ್ಳಲು ಹೋದರೆ ಮತ್ತು ಹೆಲ್ಮೆಟ್ ಒಳಗೆ ಹಾವು ಹೆಡೆಬಿಚ್ಚಿ ಕುಳಿತಿರುವುದನ್ನು ನೋಡಿದರೆ ಆ ವ್ಯಕ್ತಿಯ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನು ಒಮ್ಮೆ ಯೋಚಿಸಿ ನೋಡಿ. ಹೀಗಾಗಿ ಹೆಲ್ಮೆಟ್ ಅನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ನೀವು ಹೆಲ್ಮೆಟ್ ಅನ್ನು ಬೇಕಾಬಿಟ್ಟಿ ಎಲ್ಲಾದರು ಇರಿಸಿದರೆ, ಇಂತಹ ಘಟನೆ ನಿಮ್ಮೊಂದಿಗೂ ಕೂಡ ನಡೆಯುವ ಸಾಧ್ಯತೆ ಇದೆ.

ಹೆಲ್ಮೆಟ್ ಅನ್ನು ಸ್ವಚ್ಛವಾದ ಸ್ಥಳದಲ್ಲಿ ಇರಿಸಿ
ಈ ವೀಡಿಯೊವನ್ನು ನವೆಂಬರ್ 1 ರಂದು ಇನ್ಸ್ಟಾಗ್ರಾಮ್ ಹ್ಯಾಂಡಲ್ @d_shrestha10 ಐಡಿ ಮೂಲಕ ಪೋಸ್ಟ್ ಮಾಡಲಾಗಿದೆ, ವಿಡಿಯೋ ಇದೀಗ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್ ಇನ್‌ಸ್ಟಾಗ್ರಾಮ್ ರೀಲ್ ಗೆ ಇದುವರೆಗೂ 43 ಲಕ್ಷ ವೀಕ್ಷಣೆ ಮತ್ತು 43 ಸಾವಿರ ಲೈಕ್‌ಗಳನ್ನು ಬಂದಿವೆ. ಹೆಲ್ಮೆಟ್‌ನೊಳಗೆ ನಾಗರ ಹಾವು ಅಡಗಿರುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು. ಹೆಲ್ಮೆಟ್‌ನ ಒಳಭಾಗ ಮತ್ತು ಹಾವಿನ ಬಣ್ಣವು ತುಂಬಾ ಹೋಲುತ್ತದೆ. ಆದಾಗ್ಯೂ, ವ್ಯಕ್ತಿಯು ಅದನ್ನು ತೋರಿಸಲು ಕ್ಯಾಮೆರಾವನ್ನು ಹಾವಿನ ಹತ್ತಿರ ತೆಗೆದುಕೊಂಡ ತಕ್ಷಣ, ಅದು ದಾಳಿ ಇಡುತ್ತದೆ. 

ಹೆಲ್ಮೆಟ್ ನಲ್ಲಿ ಹಾವು, ವಿಡಿಯೋ ಇಲ್ಲಿದೆ ನೋಡಿ

 
 
 
 

 
 
 
 
 
 
 
 
 
 
 

A post shared by Dev Shrestha (@d_shrestha10)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News