Shocking Video: ಹಾವು ವಿಶ್ವದ ಅತ್ಯಂತ ಭಯಾನಕ ಜೀವಿಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲ ಕಿಂಗ್ ಕೋಬ್ರಾವನ್ನು ಭೂಮಿಯ ಮೇಲೆ ಕಂಡುಬರುವ ಅತ್ಯಂತ ಅಪಾಯಕಾರಿ ಹಾವು ಎಂದು ಪರಿಗಣಿಸಲಾಗುತ್ತದೆ. ನಾಗರ ಹಾವು ಒಂದೊಮ್ಮೆ ಯಾರಿಗಾದರು ಕಚ್ಚಿದರೆ, ಆ ವ್ಯಕ್ತಿಗೆ ನೀರು ಕೇಳುವುದಕ್ಕೂ ಅದು ಅವಕಾಶ ನೀಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಕಿಂಗ್ ಕೋಬ್ರಾದ ವೀಡಿಯೊವೊಂದು ಮುನ್ನೆಲೆಗೆ ಬಂದಿದೆ. ಈ ವಿಡಿಯೋ ನೋಡಿದ ನಂತರ ನಿಮ್ಮ ಮೈಮೇಲಿನ ಕೂದಲುಗಳು ಕೂಡ ಒಂದು ಕ್ಷಣ ಎದ್ದು ನಿಲ್ಲುತ್ತವೆ. ವೀಡಿಯೊದಲ್ಲಿ, ಕಿಂಗ್ ಕೋಬ್ರಾ ಹಾವು ತನ್ನ ಬಾಲದ ಮೇಲೆ ನೆಲದ ಮೇಲೆ ಎಷ್ಟೊಂದು ಎತ್ತರಕ್ಕೆ ಎದ್ದು ನಿಂತಿದೆ ಎಂದರೆ. ಅದನ್ನು ನೋಡಿದ ಜನರು ಒಂದು ಕ್ಷಣ ಅವಾಕ್ಕಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Gold Rate: ಇಂದೂ ಕೂಡ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ, ಹೊಸ ದರಗಳು ಇಂತಿವೆ!

ವೀಡಿಯೋ ನೋಡಿದ ನಂತರ ನಿಮಗೂ ಶಾಕ್ ತಗುಲಲಿದೆ
ವಿಡಿಯೋದಲ್ಲಿ ಕಿಂಗ್ ಕೋಬ್ರಾವೊಂದು ತನ್ನ ಬಾಲದ ಸಹಾಯದಿಂದ ಸುಮಾರು 6 ಅಡಿ ಎತ್ತರಕ್ಕೆ ನಿಂತಿರುವುದನ್ನು ಕಾಣಬಹುದು. ಆರು ಅಡಿ ಎತ್ತರಕ್ಕೆ ನಿಂತರೂ ಕೂಡ ಅದರ ದೇಹದ ಅರ್ಧಕ್ಕಿಂತ ಹೆಚ್ಚು ಭಾಗ ನೆಲದಲ್ಲಿಯೇ ಇದೆ. ಅಂದರೆ ರಾಜ ನಾಗರಹಾವು 12-13 ಅಡಿಗಿಂತ ಉದ್ದವಾಗಿದೆ ಎಂಬುದು ಇದರಿಂದ ಸಾಬೀತಾಗುತ್ತದೆ . ಈ ಹಾವು ನೇರವಾಗಿ ನಿಂತು ಮನುಷ್ಯರ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಸಾಮರ್ಥ್ಯ ಹೊಂದಿದೆ ಏನೋ ಎಂಬಂತೆ ಕಂಗೊಳಿಸುತ್ತಿದೆ.


ಇದನ್ನೂ ಓದಿ-Holi 2023 ಹಬ್ಬದ ಬಳಿಕ ಈ ರಾಶಿಗಳ ಜನರಿಗೆ ಧನಹಾನಿಯ ಯೋಗ! ಕಾರಣ ಇಲ್ಲಿದೆ


ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಶೀರ್ಷಿಕೆಯನ್ನು ಬರೆದ ಅವರು 'ಕಿಂಗ್ ಕೋಬ್ರಾ ನಿಜವಾಗಿಯೂ ನಿಲ್ಲಬಲ್ಲದು. ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಬಹುದು. ಯಾರೊಂದಿಗಾದರೂ ಕಾದಾಟಕ್ಕೆ ಇಳಿದಾಗ, ಅದು ತನ್ನ ದೇಹದ ಮೂರನೇ ಒಂದು ಭಾಗವನ್ನು ನೆಲದಿಂದ ಮೇಲಕ್ಕೆ ಎತ್ತುವ ಸಾಮರ್ಥ್ಯ ಹೊಂದಿದೆ' ಎಂದು ಅವರು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.