Gold Rate: ಇಂದೂ ಕೂಡ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ, ಹೊಸ ದರಗಳು ಇಂತಿವೆ!

Gold Price Today: ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಲೇ ಇದೆ. ಇಂದೂ ಕೂಡ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ ಎಂದರೆ ನೀವು ಚಿನ್ನದ ಆಭರಣಗಳನ್ನು ಅಗ್ಗದ ದರದಲ್ಲಿ ಖರೀದಿಸಬಹುದು. ಇಂದು ಮಾರುಕಟ್ಟೆಯಲ್ಲಿ  10 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು ಎಂಬುದನ್ನು ಪರಿಶೀಲಿಸೋಣ ಬನ್ನಿ,  

Written by - Nitin Tabib | Last Updated : Feb 28, 2023, 06:45 PM IST
  • ಜಾಗತಿಕ ಮಾರುಕಟ್ಟೆಯಲ್ಲೂ ಬೆಲೆಬಾಳುವ ಲೋಹಗಳ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ.
  • ಇಂದು ದೆಹಲಿಯ ಸರಾಫ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 55,500 ರೂ.ಪ್ರತಿ 10 ಗ್ರಾಮ್ ತಲುಪಿದೆ.
  • ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಈ ಬಗ್ಗೆ ಮಾಹಿತಿ ನೀಡಿದೆ.
Gold Rate: ಇಂದೂ ಕೂಡ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ, ಹೊಸ ದರಗಳು ಇಂತಿವೆ! title=
ಇಂದಿನ ಚಿನ್ನ-ಬೆಳ್ಳಿ ದರ ಇಂತಿದೆ!

Gold-Silver Price Today: ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಲೇ ಇದೆ. ಇಂದೂ ಕೂಡ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಅಂದರೆ, ನೀವು ಚಿನ್ನಾಭರಣಗಳನ್ನು ಅಗ್ಗದ ದರದಲ್ಲಿ ಖರೀದಿಸಬಹುದು. ಇದಲ್ಲದೇ ಜಾಗತಿಕ ಮಾರುಕಟ್ಟೆಯಲ್ಲೂ ಬೆಲೆಬಾಳುವ ಲೋಹಗಳ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಇಂದು ದೆಹಲಿಯ ಸರಾಫ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 55,500 ರೂ.ಪ್ರತಿ 10 ಗ್ರಾಮ್ ತಲುಪಿದೆ. ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಈ ಬಗ್ಗೆ ಮಾಹಿತಿ ನೀಡಿದೆ.

ದೆಹಲಿಯ ಸರಾಫ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ
ದೆಹಲಿಯ ಸರಾಫ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 110 ರೂಪಾಯಿ ಇಳಿಕೆಯಾಗಿ 55,550 ರೂಪಾಯಿಗಳಿಗೆ ತಲುಪಿದೆ. ಇನ್ನೊಂದೆಡೆ, ಕಳೆದ ವಹಿವಾಟಿನಲ್ಲಿ, ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 55,660 ರೂ.ಗಳಷ್ಟಿತ್ತು.

ಬೆಳ್ಳಿ ಬೆಲೆ 500 ರೂ.ಗಿಂತ ಹೆಚ್ಚು ಇಳಿಕೆಯಾಗಿದೆ
ಬೆಳ್ಳಿಯ ಬೆಲೆಯ ಕುರಿತು ಹೇಳುವುದಾದರೆ, ಇಂದು ದೆಹಲಿಯ ಸರಾಫ್ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ 550 ರೂ.ನಷ್ಟು ಕುಸಿದು ಪ್ರತಿ ಕೆಜಿಗೆ 63,000 ರೂ.ಗೆ ತಲುಪಿದೆ.

ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಕುಸಿತ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 1808 ಡಾಲರ್‌ಗೆ ಇಳಿಕೆಯಾಗಿದೆ. ಬೆಳ್ಳಿಯ ಬೆಲೆ ಕೂಡ ಪ್ರತಿ ಔನ್ಸ್‌ಗೆ $ 20.47 ಕ್ಕೆ ಇಳಿದಿದೆ.

ಇದನ್ನೂ ಓದಿ-Budh Gochar: ಬುಧ ಗೋಚರ, ವಿಪರೀತ ರಾಜಯೋಗ ನಿರ್ಮಾಣ, 4 ರಾಶಿಗಳ ಜನರಿಗೆ ಅಪಾರ ಧನಲಾಭ ಜೊತೆಗೆ ಭಾಗ್ಯೋದಯ ಪ್ರಾಪ್ತಿ!

ತಜ್ಞರ ಅಭಿಪ್ರಾಯವೇನು ಗೊತ್ತಾ?
"ಏಷ್ಯನ್ ವಹಿವಾಟಿನಲ್ಲಿ ಡಾಲರ್‌ನಲ್ಲಿನ ಆರಂಭಿಕ ನಷ್ಟಗಳು ನಂತರ ಯುಎಸ್ ಕರೆನ್ಸಿ ಬಲಗೊಳ್ಳುತ್ತಿದ್ದಂತೆ ಹಿಮ್ಮೆಟ್ಟಲು ಆರಂಭಿಸಿದೆ, ಅದು ನಂತರ COMEX ನಲ್ಲಿ ಚಿನ್ನದ ಲಾಭವನ್ನು ಹಿಮ್ಮೆಟ್ಟಿಸಿದೆ" ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಶ್ರೀರಾಮ್ ಅಯ್ಯರ್ ಹೇಳಿದ್ದಾರೆ.

ಇದನ್ನೂ ಓದಿ-ಶೀಘ್ರದಲ್ಲೇ 'ವಿಧಿ ಪರಿವರ್ತನೆ ರಾಜಯೋಗ' ನಿರ್ಮಾಣ, ಗುರು-ಶುಕ್ರರ ಅನುಗ್ರಹದಿಂದ 3 ರಾಶಿಗಳ ಜನರಿಗೆ ಅಪಾರ ಧನಲಾಭ!

ಚಿನ್ನ ಖರೀದಿಸುವ ಮುನ್ನ ಈ ಸಂಗತಿ ನೆನಪಿನಲ್ಲಿಡಿ
ನೀವು ಕೂಡ ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸಲು ಹೊರಟಿದ್ದರೆ, ಹಾಲ್‌ಮಾರ್ಕ್ ನೋಡಿದ ನಂತರವೇ ಚಿನ್ನವನ್ನು ಖರೀದಿಸಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ನೀವು ಸರ್ಕಾರಿ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. 'ಬಿಐಎಸ್ ಕೇರ್ ಆ್ಯಪ್' ಮೂಲಕ ನೀವು ಚಿನ್ನದ ಶುದ್ಧತೆಯ ನೈಜತೆಯನ್ನು ಪರಿಶೀಲಿಸಬಹುದು. ಇದಲ್ಲದೇ ಈ ಆಪ್ ಮೂಲಕ ನೀವು ದೂರವನ್ನು ಕೂಡ ನೀಡಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News