ಜಗತ್ತಿನ ಅತೀ ಕೊಳಕು ನಾಯಿ: ಹೀಗೆ ಕರೆಯಲು ಕಾರಣ ಏನ್ಗೊತ್ತಾ?
ಅನೇಕ ಕಾಯಿಲೆಗಳಿಂದಾಗಿ ಬಳಲುತ್ತಿರುವ ಈ ನಾಯಿಗೆ ಡೈಪರ್‌ಗಳು ಬೇಕಾಗುತ್ತವೆ. ನೆಟ್ಟಗೆ ನಿಲ್ಲಲು ಅಥವಾ ನಡೆಯಲು ಕಷ್ಟಪಡುತ್ತದೆ. ಚಿಹೋವಾ ನಾಯಿ ಶೋಚನೀಯ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದನ್ನು ವ್ಯಕ್ತಿಯೊಬ್ಬರು ತಂದು ಸಾಕುತ್ತಿದ್ದಾರೆ. ಈ ನಾಯಿ ಆಟವಾಡಲು ಇಷ್ಟಪಟ್ಟಾಗ ಅಥವಾ ಖುಷಿಯಾದಾಗಲೆಲ್ಲ ‘ಡಾಡ್ಜ್ ರಾಮ್ ಡೀಸೆಲ್ ಟ್ರಕ್’ ಎಂದು ಸದ್ದು ಮಾಡುತ್ತದೆ.
ಮನುಷ್ಯರು ಹೆಚ್ಚಾಗಿ ಪ್ರೀತಿಸೋ ಪ್ರಾಣಿಯೆಂದರೆ ಅದು ಶ್ವಾನ. ಮನೆಯ ಸದಸ್ಯರಂತೆ ನಾಯಿಗಳನ್ನು ಸಾಕುವ ಜನರು ಅದನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಈ ಮೂಲಕ ಪ್ರಾಣಿಯ ಶುಭ್ರತೆ ಕಾಪಾಡಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಶ್ವಾನವಿದೆ. ಅದನ್ನು ಜಗತ್ತಿನ ಅತೀ ಕೊಳಕು ನಾಯಿ ಎಂದೇ ಪರಿಗಣಿಸಲಾಗಿದೆ. ಇದಕ್ಕೆ ಕಾರಣವೂ ಇದೆ.
ಇದನ್ನೂ ಓದಿ: ಹಳೆ ಎಸಿ ಕೊಟ್ಟು ಹೊಸದನ್ನು ಪಡೆಯಿರಿ .! ಈ ವಿದ್ಯುಚ್ಛಕ್ತಿ ಕಂಪನಿಯು ನೀಡುತ್ತಿದೆ ಭಾರೀ ಆಫರ್
ಯುನೈಟೆಡ್ ಸ್ಟೇಟ್ಸ್‌ನ ಅರಿಜೋನಾದ 17 ವರ್ಷದ ಚಿಹೋವಾ ಮಿಕ್ಸ್ ಎಂಬ ನಾಯಿ ವಿಶ್ವದ ಅತ್ಯಂತ ಕೊಳಕು ನಾಯಿ ಎಂದು ಗುರುತಿಸಲ್ಪಟ್ಟಿದೆ. ಕ್ಯಾಲಿಫೋರ್ನಿಯಾದ ಸೋನೋಮಾ-ಮರಿನ್ ಮೇಳದ ಸಂದರ್ಭದಲ್ಲಿ ಈ ನಾಯಿ ಕಂಡುಬಂದಿತ್ತು. ಈ ಕಾರ್ಯಕ್ರಮವು ಸುಮಾರು 50 ವರ್ಷಗಳಿಂದ ನಡೆಯುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದ ಕಾರಣದಿಂದ ಎರಡು ವರ್ಷಗಳ ಬಳಿಕ ಮತ್ತೆ ಸ್ಪರ್ಧೆಯನ್ನು ನಡೆಸಲಾಗಿದೆ.
ಅನೇಕ ಕಾಯಿಲೆಗಳಿಂದಾಗಿ ಬಳಲುತ್ತಿರುವ ಈ ನಾಯಿಗೆ ಡೈಪರ್‌ಗಳು ಬೇಕಾಗುತ್ತವೆ. ನೆಟ್ಟಗೆ ನಿಲ್ಲಲು ಅಥವಾ ನಡೆಯಲು ಕಷ್ಟಪಡುತ್ತದೆ. ಚಿಹೋವಾ ನಾಯಿ ಶೋಚನೀಯ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದನ್ನು ವ್ಯಕ್ತಿಯೊಬ್ಬರು ತಂದು ಸಾಕುತ್ತಿದ್ದಾರೆ. ಈ ನಾಯಿ ಆಟವಾಡಲು ಇಷ್ಟಪಟ್ಟಾಗ ಅಥವಾ ಖುಷಿಯಾದಾಗಲೆಲ್ಲ ‘ಡಾಡ್ಜ್ ರಾಮ್ ಡೀಸೆಲ್ ಟ್ರಕ್’ ಎಂದು ಸದ್ದು ಮಾಡುತ್ತದೆ.
ಸ್ಪರ್ಧೆಯಲ್ಲಿ, ವಿಜೇತ ನಾಯಿ ಎಲ್ಲಾ ತೀರ್ಪುಗಾರರ ಮನಗೆದ್ದಿದೆ. ಈ ಶ್ವಾನ ಇತರ ನಾಯಿಗಳನ್ನು ಬೀಟ್ ಮಾಡಿದ ಹಲ್ಲುಗಳಿಲ್ಲದ, ಕೂದಲುರಹಿತ ರೂಪಾಂತರಿತ ನಾಯಿ ಎಂದು ಕರೆಯಲ್ಪಟ್ಟಿದೆ. ಗೊರಿಲ್ಲಾ ತರಹದ ತಲೆಯನ್ನು ಹೊಂದಿರುವ ಈ ನಾಯಿ ನೋಡೋಕೆ ತುಂಬಾ ವಿಚಿತ್ರವಾಗಿದೆ. ʼಮಿಸ್ಟರ್ ಹ್ಯಾಪಿ ಫೇಸ್ʼ ಈವೆಂಟ್‌ನ ಮಾಲೀಕರಾದ ಗೆನ್ನಡಾ ಬೆನೆಲ್ಲಿ 2021 ರ ಆಗಸ್ಟ್‌ನಲ್ಲಿ ಅರಿಜೋನಾದಿಂದ ಈ ನಾಯಿಯನ್ನು ದತ್ತು ಪಡೆದಿದ್ದಾರೆ.
"ನಾನು ಅರಿಜೋನಾಗೆ ಹೋದಾಗ ಈ ನಾಯಿಯನ್ನು ನೋಡಿದೆ. ಈ ನಾಯಿ ತುಂಬಾ ದೊಡ್ಡದಾಗಿದೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಹೊಂದಿದೆ. ನೋಡಲು ಸಹ ಸುಂದರವಾಗಿಲ್ಲ ಎಂದು ನನಗೆ ಎಚ್ಚರಿಕೆ ನೀಡಿದರು. ಜೊತೆಗೆ ನಾನು ತಂಗಿದ್ದ ಸ್ಥಳದ ಜನರು ಈ ನಾಯಿಯನ್ನು ಹೇಗೆ ಕಾಳಜಿ ವಹಿಸಬೇಕು ಎಂದು ನನಗೆ ವಿವರಿಸಿದರು" ಎಂದು ಹೇಳಿದರು.
"ನಾನು ನಿಜವಾಗಿಯೂ ವಯಸ್ಸಾದ ಮತ್ತು ಪ್ರೀತಿಗೆ ಅರ್ಹವಾದ ಜೀವಿಯನ್ನು ನೋಡಿದೆ" ಎಂದರು.
ಇದನ್ನೂ ಓದಿ: Tsunami Viral Photo: ಆಕಾಶದಲ್ಲಿ ಏಳುತ್ತಿದೆಯೇ ಸುನಾಮಿ.? ಯಾವ ಸಂದೇಶ ನೀಡುತ್ತಿದೆ ಈ ಫೋಟೋ ?
ಇನ್ನು ಮಿಸ್ಟರ್ ಹ್ಯಾಪಿ ಫೇಸ್ ಗೆದ್ದ ಶ್ವಾನಕ ಮತ್ತು ಅದರ ಮಾಲೀಕರಿಗೆ 1,500 ಡಾಲರ್ ನಗದು ಮತ್ತು ನ್ಯೂಯಾರ್ಕ್ ನಗರಕ್ಕೆ ಪ್ರವಾಸ ಹೋಗುವ ಅವಕಾಶವನ್ನು ನೀಡಲಾಯಿತು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.