ನವದೆಹಲಿ : ದೆಹಲಿಯ ವಿದ್ಯುತ್ ಕಂಪನಿಗಳು ಎಸಿಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿವೆ. ಅಷ್ಟೇ ಅಲ್ಲ ಇಲ್ಲಿ ಹಳೆಯ ಎಸಿ ಕೊಟ್ಟು ಹೊಸ ಎಸಿ ಖರೀದಿಸಬಹುದು. ಆದರೆ, ಎಲ್ಲರಿಗೂ ಈ ಆಫರ್‌ನ ಲಾಭ ಸಿಗುವುದಿಲ್ಲ. ಈ ಆಫರ್ ಲಾಭ ಪಡೆಯಬೇಕಾದರೆ ಕೆಲವು ಷರತ್ತುಗಳಿವೆ. ಕೆಲವು ಷರತ್ತುಗಳೊಂದಿಗೆ ಇರುವ ಈ ಯೋಜನೆಯ ಮೂಲಕ ಹೊಸ ಎಸಿಯನ್ನು ಮನೆಗೆ ತರಬಹುದು.
ಹಳೆ ಎಸಿ ಕೊಟ್ಟರೆ ಸಿಗುತ್ತದೆ ಹೊಸ ಎಸಿ :
ಈ ಯೋಜನೆಯ ಲಾಭ ಪಡೆಯಬೇಕಾದರೆ ಇರುವ ಮೊದಲ ಷರತ್ತು ಎಂದರೆ, ದೆಹಲಿಯ ವಿದ್ಯುತ್ ಸಂಪರ್ಕವನ್ನು ಹೊಂದಿರಬೇಕು. ಹಳೆ ಎಸಿಯನ್ನು ಬದಲಾಯಿಸಿಕೊಂಡು ಹೊಸ ಎಸಿಯನ್ನು ಪಡೆಯಲು ಬಯಸಿದರೆ, ಹಳೆಯ ಎಸಿಯ ಸ್ಥಿತಿಯು ಉತ್ತಮವಾಗಿರಬೇಕು. ಹಳೆಯ ಎಸಿ ಡೆಡ್ ಆಗಿದ್ದರೆ ವಿನಿಮಯ ಸಾಧ್ಯವಾಗುವುದಿಲ್ಲ. ಹಳೆಯ ಎಸಿಗಳು ಹೆಚ್ಚು ವಿದ್ಯುತ್ ಬಳಸುತ್ತವೆ ಈ ಹಿನ್ನೆಲೆಯಲ್ಲಿ ಹೊಸ ಎಸಿ ಖರೀದಿಸುವುದಾದರೆ ಮತ್ತು ಬಿಲ್ ಉಳಿಸಬೇಕಾದರೆ ಈ ಯೋಜನೆ ಅದ್ಭುತವಾಗಿದೆ.
ಇದನ್ನೂ ಓದಿ : Vodafone Idea ಈ ಯೋಜನೆಯಲ್ಲಿ ಕಡಿಮೆ ಬೆಲೆಯಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಜೊತೆ ಸಿಗುತ್ತಿದೆ ಹಲವು ಲಾಭ
ಅಧಿಕೃತ ವೆಬ್‌ಸೈಟ್‌ನಲ್ಲಿ ಭರ್ತಿ ಮಾಡಬೇಕಾದ ಫಾರ್ಮ್ :
ಈ ಯೋಜನೆಯ ಲಾಭ ಪಡೆಯುವವರು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್‌ನಿಂದ ಪಡೆಯಬಹುದು. ಇದಕ್ಕಾಗಿ ಆನ್‌ಲೈನ್‌ಗೆ ಹೋಗಿ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಫಾರ್ಮ್‌ನಲ್ಲಿ, ವಿದ್ಯುತ್ ಬಿಲ್‌ನ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ಗ್ರಾಹಕರ ಆಯ್ಕೆಯ AC ಅನ್ನು ಆಯ್ಕೆ ಮಾಡುವ ಅವಕಾಶ ಕೂಡಾ ಸಿಗುತ್ತದೆ. ಈ ಯೋಜನೆಯಲ್ಲಿ, ನೀವು ಡೈಕಿನ್, ಗೋದ್ರೇಜ್, ಹಿಟಾಚಿ, LG ಅಥವಾ ವೋಲ್ಟಾಸ್ ACಯನ್ನು ಪಡೆಯಬಹುದು. ಈ ಎಸಿಯ ವಿಶೇಷತೆ ಏನೆಂದರೆ ಇದರಲ್ಲಿ ಇನ್ವರ್ಟರ್ ಎಸಿ ಮಾತ್ರ ನೀಡಲಾಗಿದೆ.
ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿಯೂ ಲಭ್ಯವಿದೆ. ಇಲ್ಲಿ ಗ್ರಾಹಕರುಗೆ ಬೇಕಾದ AC ಅನ್ನು ಬುಕ್ ಮಾಡಬಹುದು. ಆ ಎಸಿಗಳನ್ನು ಎಕ್ಸ್‌ಚೇಂಜ್ ಆಫರ್‌ನಲ್ಲಿಯೂ ತೆಗೆದುಕೊಳ್ಳಬಹುದು. ಆದರೆ ಇದಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಬಹಳ ಮುಖ್ಯ. ಇಲ್ಲವಾದರೆ ಹೊಸ ಎಸಿ ಸಿಗುವುದಿಲ್ಲ.
ಇದನ್ನೂ ಓದಿ : ನೋಕಿಯಾಗೆ ಟಕ್ಕರ್ ನೀಡಿದ ಕ್ಯೂಬಾಟ್ ಪಾಕೆಟ್ ಮಿನಿ- ಇದರ ಬೆಲೆ, ವೈಶಿಷ್ಟ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.